ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸಾವಿನಲ್ಲಿ ಸಾರ್ಥಕತೆ ಮೆರೆದ ಯುವಕನ ಕಟೌಟ್‌ಗೆ ಗ್ರಾಮಸ್ಥರಿಂದ ಹಾಲಿನ ಅಭಿಷೇಕ

ದೊಡ್ಡಬಳ್ಳಾಪುರ: ಸಾವಿನಲ್ಲಿ ಸಾರ್ಥಕತೆ ಮೆರೆದ ಯುವಕನ ಕಟೌಟ್‌ಗೆ ಗ್ರಾಮಸ್ಥರು ಹಾಲಿನ ಅಭಿಷೇಕ ಮಾಡಿ ಕಂಬನಿ ಮಿಡಿದಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನ ಕೊನಘಟ್ಟದ ಯುವಕ ಕೀರ್ತಿ ಸಾವನ್ನ ಗ್ರಾಮಸ್ಥರಿಗೆ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಟುತ್ತಿದ್ದ ಕೀರ್ತಿ ಒಂದು ವಾರದಿಂದ ಕೋಮಾದಲ್ಲಿಯೇ ಇದ್ದ. ಅಂತಿಮವಾಗಿ ವೈದ್ಯರು ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ಘೋಷಣೆ ಮಾಡಿದ್ರು. ಮನೆ ಮಗನ ಸಾವಿನ ದುಃಖದಲ್ಲೂ ಕುಟುಂಬದ ಸದಸ್ಯರು ಕೀರ್ತಿ ದೇಹದಿಂದ ಅಗಾಂಗ ದಾನ ಮಾಡಿದ್ದಾರೆ. ಕೀರ್ತಿಯ ಕಿಡ್ನಿ, ಹೃದಯ, ಕಣ್ಣು ಮತ್ತೊಬ್ಬರಿಗೆ ಜೀವದಾನ ಮಾಡಿವೆ.

ಕೀರ್ತಿ ಸಾವಿನ ಸಾರ್ಥಕತೆ ಕಂಡು ಕೊನಘಟ್ಟ ಗ್ರಾಮಸ್ಥರೆಲ್ಲ ಕಂಬನಿ ಮಿಡಿದಿದ್ದಾರೆ. ಆತನ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡಿ ಅಭಿಮಾನದ ಹೊಳೆಯನ್ನ ಹರಿಸಿದ್ದಾರೆ. ನಿನ್ನೆ ರಾತ್ರಿ ಕೀರ್ತಿ ಭಾವಚಿತ್ರದ ಮುಂದೆ ಕ್ಯಾಂಡಲ್ ದೀಪ ಇಟ್ಟು ಗ್ರಾಮಸ್ಥರು ಸಾಮೂಹಿಕವಾಗಿ ಶ್ರದ್ಧಾಂಜಲಿ ಅರ್ಪಿಸಿದರು.

Edited By : Shivu K
PublicNext

PublicNext

22/09/2022 08:11 am

Cinque Terre

31.3 K

Cinque Terre

0

ಸಂಬಂಧಿತ ಸುದ್ದಿ