ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಫೋಟೋ ಸ್ಟುಡಿಯೋದಲ್ಲಿ ಸಿಸಿಟಿವಿ ಫೂಟೇಜ್ ಸಮೇತ ಕ್ಯಾಮೆರಾ ಕಳ್ಳತನ

ದೊಡ್ಡಬಳ್ಳಾಪುರ : ಫೋಟೋ ಸ್ಟುಡಿಯೋದ ಮೇಲ್ಛಾವಣಿಯ ಶೀಟ್ ಬಿಚ್ಚಿ ಒಳ ನುಗ್ಗಿದ ಕಳ್ಳರು 10 ಸಾವಿರ ನಗದು, ಲಕ್ಷಾಂತರ ರೂಪಾಯಿಯ ಎರಡು ಕ್ಯಾಮರಾ ಜೊತೆಗೆ ಸಿಸಿಟಿವಿ ಫೂಟೇಜ್ ಕದ್ದೊಯ್ದಿದ್ದಾರೆ.ದೊಡ್ಡಬಳ್ಳಾಪುರ ನಗರದ ರೈಲ್ವೆ ಸ್ಟೇಷನ್ ಸರ್ಕಲ್ ಬಳಿಯ ಕಮಲ ಫೋಟೋ ಸ್ಟುಡಿಯೋದಲ್ಲಿ ಘಟನೆ ನಡೆದಿದೆ, ಅಕ್ಟೋಬರ್ 9ರ ಮಧ್ಯರಾತ್ರಿ ಕಳ್ಳತನ ಕೃತ್ಯ ನಡೆದಿದೆ.

ಫೋಟೋ ಸ್ಟುಡಿಯೋದ ಮೇಲ್ಛಾವಣಿಗೆ ಪ್ಲಾಸ್ಟಿಕ್ ಶೀಟ್ ಅಳವಡಿಸಲಾಗಿತ್ತು, ಈ ಬಗ್ಗೆ ಮಾಹಿತಿ ಇದ್ದ ಕಳ್ಳರು ಮೇಲ್ಛಾವಣಿಯ ಶೀಟ್ ಕಳಚಿ ಒಳ ನುಗ್ಗಿ 10 ಸಾವಿರ ನಗದು ಲಕ್ಷಾಂತರ ಮೌಲ್ಯದ ಎರಡು ಕ್ಯಾಮೆರಾ, ಒಂದು ಮೊಬೈಲ್ ಜೊತೆಗೆ ಸಿಸಿಟಿವಿ ಫೂಟೇಜ್ ಕದ್ದೊಯ್ದಿದ್ದಾರೆ.ಈ ಕುರಿತು ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nirmala Aralikatti
Kshetra Samachara

Kshetra Samachara

13/10/2022 03:37 pm

Cinque Terre

2.4 K

Cinque Terre

0