ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಅನೈತಿಕ ಪ್ರೇಮಕ್ಕೆ ಆಫ್ರಿಕನ್ ವ್ಯಕ್ತಿಯಿಂದಲೇ ಆಫ್ರಿಕನ್ ಪ್ರಜೆ ಕೊಲೆ

ಬೆಂಗಳೂರು : ಇದು ಆಫ್ರಿಕನ್ ಖಂಡದಿಂದ ಏಷ್ಯಾಕ್ಕೆ ಬಂದು, ಭಾರತದ ಬೆಂಗಳೂರಿನಲ್ಲಿ ಬಿಜಿನೆಸ್ ಮಾಡಿಕೊಂಡಿದ್ದು, ಭಾರತದ ಹೆಣ್ಣಿಗಾಗಿ ಕಡಿದಾಡಿಕೊಂಡು ಕೊಲೆಯಾದ ಆಫ್ರಿಕನ್ ಪ್ರಜೆಯ ದುರಂತ ಅಂತ್ಯ ಇದು.

ಕೊಲೆ ಆಗಿರುವವನು ಆಫ್ರಿಕಾದ 36 ವರ್ಷದ ಆರಡಿ ಎತ್ತರದ ಅಜಾನುಭಾಹು ಹೆಸರು ಡೇವಿಡ್ ಅಂತ.

ಈತನನ್ನು ಕೊಲೆ ಮಾಡಿರುವ ವ್ಯಕ್ತಿ ಸಹ ಆಫ್ರಿಕಾ ದೇಶದವನೆ. ಸದ್ಯ ಅಮೃತಹಳ್ಳಿ ಪೊಲೀಸರ ವಶದಲ್ಲಿದ್ದಾನೆ.

ರವಿವಾರ ಸಂಜೆ 6-30ಕ್ಕೆ ಅಮೃತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿ ದಾಸರಹಳ್ಳಿಯ ಮುನಿಕೆಂಪಣ್ಣ ಬಡಾವಣೆಯ ನಡುರಸ್ತೆಲಿ ಡೇವಿಡ್ ಹೆಣವಾಗಿದ್ದ. ಈ ಡೇವಿಡ್ ಕೊಲೆ ಆರೋಪಿ ಮನೆಗೆ ಬಂದು ಆತನ ಲಿವಿಂಗ್ ಟುಗೆದರ್ ಪಾರ್ಟ್ನರ್ ಜೊತೆ ಸಾಂಗತ್ಯ ಭಯಸಿದ್ದ.

ಇದು ಕೊಲೆ ಆರೋಪಿಗೆ ಇಷ್ಟವಿರಲಿಲ್ಲ. ತಾನಿದ್ದ ಬಾಡಿಗೆ ಮನೆಲಿ ನೆನ್ನೆ ಪಾರ್ಟ್ನರ್ ಜೊತೆ ಡೇವಿಡ್ ನನ್ನು ಕಂಡ ಆರೋಪಿ ಜಗಳ ತೆಗೆದಿದ್ದಾನೆ. ಚಾಕುವಿನಿಂದ ಭೀಕರವಾಗಿ ಎದೆ, ಹೊಟ್ಟೆ, ಕತ್ತಿಗೆ ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದಾನೆ.

ಬಿಜಿನೆಸ್ ವೀಸಾ ಅವದಿ ಮುಗಿದಿದ್ದರು ಇಬ್ಬರು ಆಫ್ರಿಕನ್ ಪ್ರಜೆಗಳು ಆಕ್ರಮವಾಗಿ ವಾಸವಿದ್ದರು. ಈಶಾನ್ಯ ಭಾರತದ ಮಹಿಳೆ ಸಾಂಗತ್ಯಕ್ಕಾಗಿ ಒಬ್ಬ ಕೊಲೆಯಾಗಿದ್ದರೆ, ಮತ್ತೊಬ್ಬ ಪೊಲೀಸರ ಅತಿಥಿ. ಇವರ ಸಹವಾಸದಿಂದ ಮಗು ಅನಾಥವಾದರೆ, ಈಕೆಯದ್ದು ದುರಂತ ಜೀವನ.

-ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಯಲಹಂಕ.

Edited By : Shivu K
PublicNext

PublicNext

11/10/2022 11:49 am

Cinque Terre

27.96 K

Cinque Terre

0