ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಾಡಿಗೆ ಕಾರು ಪಡೆದು ದರೋಡೆ ಮಾಡಿ ಎಸ್ಕೇಪ್ ಆಗಿದ್ದ ರೌಡಿಶೀಟರ್ ದಂಪತಿ ಬಂಧನ

ಯಲಹಂಕ: ಬಾಡಿಗೆಗೆ ಕಾರು ಪಡೆದು, ರಾತ್ರಿಯೆಲ್ಲಾ ಸುತ್ತಾಡಿ, ಕೊನೆಗೆ ಕ್ಯಾಬ್ ಡ್ರೈವರ್‌ಗೆ ಚಾಕು ತೋರಿಸಿ ಕಾರು ಸಮೇತ ಎಸ್ಕೇಪ್ ಆಗಿತ್ತು ಆ ರೌಡಿ ದಂಪತಿ. ಯಲಹಂಕ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯ ಈ ರೌಡಿಶೀಟರ್ ದಂಪತಿಯನ್ನು ಯಲಹಂಕ ಉಪನಗರ ಪೊಲೀಸರು ಇದೀಗ ಬಂಧಿಸಿದ್ದಾರೆ.

ಹೀಗೆ ಮಳ್ಳನ ರೀತಿ ಪೋಸ್ ಕೊಟ್ಟಿರೊ ಆಸಾಮಿಯೆ ಮಂಜ @ ಮೇಕೆ ಮಂಜ. ಇನ್ನು ತಾನು ಸಾಚಾ ಅಂತ ದುಃಖದ ಮೋರೆ ಹಾಕಿ ಕಾಣಿಸ್ತಿರೊ ಈಕೆ ಹೆಸರು ವೇದಾವತಿ ಮೇಕೆ ಮಂಜನ‌ ಹೆಂಡತಿ. ಈ ಕಳ್ಳಮಂಜನ ವಿರುದ್ಧ ಕೇಸ್ ದಾಖಲಿಸಿದ ಪೊಲೀಸರು ಇಬ್ಬರನ್ನು ಬಂಧಿಸಿ ಒಳಗೆ ತಳ್ಳಿದ್ದಾರೆ.

ಯಲಹಂಕ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿ ನಾಗೇನಹಳ್ಳಿ ಬಳಿ ಸೆಪ್ಟೆಂಬರ್ 5ರಂದು ರಾತ್ರಿ ಕಾರನ್ನು ಬಾಡಿಗೆಗೆ ರೌಡಿ ದಂಪತಿ ಬುಕ್ ಮಾಡಿದ್ದರು‌. ರಾತ್ರಿಯೆಲ್ಲಾ ಬಾಡಿಗೆ ಕಾರಿನಲ್ಲಿ ಸುತ್ತಾಟ ನಡೆಸಿದ್ದರು ಕಳ್ಳ ದಂಪತಿ. ಡ್ರೈವರ್ ಶಿವಶಂಕರ್‌ಗೆ ನಿದ್ದೆ ಬಂದ ಹಿನ್ನೆಲೆ ಮೇಕೆ ಮಂಜನೇ ಕಾರ್ ಡ್ರೈವಿಂಗ್ ಮಾಡಿದ್ದಾನೆ. ಬೆಳಗಿನ ಜಾವ ಶಿವಶಂಕರ್‌ಗೆ ಎಚ್ಚರ ಆದಾಗ ಮೇಕೆ ಮಂಜನೆ ಚಾಕು ತೋರಿಸಿ, ಬೆದರಿಸಿ ಹಣ, ಎರಡು ಮೊಬೈಲ್ ಸಮೇತ ಕಾರನ್ನು ಕಸಿದು ಪರಾರಿಯಾಗಿದ್ದರು.

ಮೇಕೆ ಮಂಜನ ವಿರುದ್ದ ಯಲಹಂಕ ಉಪನಗರ ಠಾಣೆಲಿ ಒಂದು ಕೊಲೆ, 4ಕೊಲೆಯತ್ನ, ಅಪಹರಣ, ರಾಬರಿ, ಸುಲಿಗೆ ಪ್ರಕರಣ ದಾಖಲಾಗಿವೆ. ಈತನ ವಿರುದ್ಧ ರೌಡಿಶೀಟರ್ ಸಹ ತೆರೆಯಲಾಗಿದೆ. ಯಲಹಂಕ ಉಪನಗರ ಸೇರಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ 16 ಪ್ರಕರಣ ಬಾಕಿ ಇವೆ. ಸದ್ಯ ಆರೋಪಿಗಳಿಂದ ಒಂದು ಟಯೋಟಾ ಇಟಿಯೋಸ್, ಎರಡು ಮೊಬೈಲ್‌ ಫೋನ್‌ಗಳನ್ನ ವಶಕ್ಕೆ ಪಡೆಯಲಾಗಿದೆ..

ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್, ಯಲಹಂಕ.

Edited By : Manjunath H D
PublicNext

PublicNext

26/09/2022 10:03 pm

Cinque Terre

39.08 K

Cinque Terre

1