ಬೆಂಗಳೂರು: ಕೊಲೆ ಅಂತ ಆದ್ರೆ ಅದ್ರ ಹಿಂದೆ ಮೂರು ಕಾರಣ ಇರುತ್ತೆ ಹೆಣ್ಣು, ಹೊನ್ನು,ಮಣ್ಣು ಬಹುತೇಕ ಕೊಲೆಗಳು ಈ ಮೂರು ಕಾರಣಕ್ಕೆ ಆಗೋದು. ಇಲ್ಲು ಸಹ ಮಣ್ಣಿನ ವಿಚಾರಕ್ಕೆ ಒಂದು ಕೊಲೆಯಾಗಿದೆ. ಆದ್ರೆ ಆ ಆಸ್ತಿ ಕೊಲೆಮಾಡಿದ ವ್ಯಕ್ತಿಗೆ ಸಂಬಂಧವೇ ಇಲ್ಲ. ಆದ್ರೂ ಕಂಡವರ ಮನೆ ವಿಚಾರಕ್ಕೆ ಕೊಲೆಮಾಡಿ ಜೈಲು ಸೇರಿದ್ದಾನೆ.
ಹೌದು ಆಸ್ತಿ ವಿಚಾರಕ್ಕೆ ಕೆಪಿ ಅಗ್ರಹಾರದ ಬಾಲಕೃಷ್ಣ ನನ್ನ ಕೊಲೆ ಮಾಡಲಾಗಿದೆ. ನಿನ್ನೆ ತಡರಾತ್ರಿ 2 ಗಂಟೆ ವೇಳೆಗೆ ಘಟನೆ ನಡೆದಿದ್ದು,ಕಾಂಕ್ರೀಟ್ ಬ್ಲಾಕ್ ಅನ್ನು ತಲೆಮೇಲೆ ಹಾಕಿ ಕೊಲೆ ಮಾಡಲಾಗಿದೆ. ದುರುಂತ ಅಂದ್ರೆ ಬಾಲಕೃಷ್ಣ ಮತ್ತು ಅವರ ತಮ್ಮ ಅಣ್ಣನ ಮಕ್ಕಳ ನಡುವೆ ಆಸ್ತಿ ವಿವಾದ ಇತ್ತು. ಬಾಲಕೃಷ್ಣ ಮದುವೆಯಾಗಿಲ್ಲ. ಇದ್ರಿಂದ ಅಣ್ಣನ ಮಗ ನವೀನ್ ಸ್ನೇಹಿತನಾಗಿದ್ದ ಅದೇ ಏರಿಯಾದ ನವೀನ್ ರಾವ್ ಬಾಲಕೃಷ್ಣ ಗೆ ನವೀನ್ ಗೆ ಆಸ್ತಿ ಕೊಡುವಂತೆ ಗಲಾಟೆ ಮಾಡಿದ್ದಾನೆ. ತಡ ರಾತ್ರಿ ಕೂಡ ಇಬ್ಬರು ಒಟ್ಟಿಗೆ ಕುಡಿದು ಮನೆಯನ್ನ ಸ್ನೇಹಿತನಿಗೆ ಬಿಡು ಅಂತ ಮತ್ತೆ ಕಿರಿಕ್ ಮಾಡಿದ್ದ. ಇದಕ್ಕೆ ಬಾಲಕೃಷ್ಣ ನಿರಾಕರಿಸಿದಾಗ ಅಲ್ಲೆ ಇದ್ದ ಸಿಮೆಂಟ್ ಇಟ್ಟಿಗೆಯಿಂದ ಬಾಲಕೃಷ್ಣನ ಮೇಲೆ ಹಲ್ಲೆ ನಡೆಸಿದ್ದಾನೆ.
ಈ ವೇಳೆ ಸ್ಥಳೀಯರು ಆಸ್ಪತ್ರೆ ಗೆ ದಾಖಲಿಸಿದ್ರು ಬಾಲಕೃಷ್ಣ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾನೆ. ಸದ್ಯ ಘಟನೆ ಸಂಬಂಧ ನವೀನ್ ರಾವ್ ನನ್ನು ಕೆಪಿ ಅಗ್ರಹಾರ ಪೊಲೀಸ್ರು ಬಂಧಿಸಿ ವಿಚಾರಕ್ಕೆ ನಡೆಸ್ತಿದ್ದಾರೆ.
PublicNext
19/09/2022 09:24 pm