ಬೆಂಗಳೂರು: ಈಶಾನ್ಯ ವಿಭಾಗದ ಚಿಕ್ಕಜಾಲ ಪೊಲೀಸರು ಬೈಕ್‌ನಲ್ಲಿ ಬಂದು ಮೊಬೈಲ್ ಕಸಿದು ಪರಾರಿಯಾಗಿದ್ದ ಆರೋಪಿ ನಾಗೇಶ್‌ನನ್ನು ಬಂಧಿಸಲಾಗಿದೆ. ದೇವನಹಳ್ಳಿ ಕನ್ನಮಂಗಲದ ಈತ ವ್ಯಕ್ತಿಯೊಬ್ಬರಿಂದ ಮೊಬೈಲ್ ಸುಲಿಗೆ ಮಾಡಿ ಈಗ ಜೈಲು ಸೇರಿದ್ದಾನೆ.
ಸಂಭ್ರಮ್ ಕಾಲೇಜ್ ಬಳಿ ಸ್ನೇಹಿತರ ಜೊತೆ ತೆರಳುತ್ತಿದ್ದ ಕಾಲೇಜ್ ವಿದ್ಯಾರ್ಥಿ ಬಳಿ 42ಸಾವಿರ ಬೆಲೆಯ ಎರಡು ಮೊಬೈಲ್ ಕಸಿದು ಬೈಕ್ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಪರಾರಿಯಾಗಿದ್ದರು. ದೂರು ದಾಖಲಿಸಿಕೊಂಡ ವಿದ್ಯಾರಣ್ಯಪುರ ಪೊಲೀಸರು ಯಲಹಂಕದ ಸಮದ್ ಮತ್ತು ಶಿವಕುಮಾರ್ ಎಂಬ ಮೊಬೈಲ್ ಸುಲಿಗೆಕೋರರಿಗೆ ಕೋಳ ತೊಡಿಸಿದ್ದಾರೆ. ಹೀಗೆ ಮೂರು ಜನ ಖದೀಮರಿಂದ ಮೂರು ಮೊಬೈಲ್ಸ್ ಮತ್ತು ಎರಡು ದ್ವಿಚಕ್ರವಾಹನ ವಶಕ್ಕೆ ಪಡೆದಿದ್ದಾರೆ.
PublicNext
08/10/2022 08:09 am