ಬೆಂಗಳೂರು: ಈ ಲವ್ ರಿಲೇಶ್‌ನಶಿಪ್ ಅಲ್ಲಿ ಜಲಸ್ ಅನ್ನೋದು ವೆರಿ ವೆರಿ ಕಾಮನ್.. ಬಟ್ ಸಮ್ ಟೈಮ್ ಆ ಜಲಸ್ ಎಂಥೆತಾ ಘಟನೆಗಳಿಗೂ ರೀಸನ್ ಆಗ್ಬಿಡುತ್ತೆ ಗೊತ್ತಾ. ನಿನ್ನೆ ನಡೆದ ಆ ಯಂಗ್ ಸ್ಟಾರ್ಸ್ ಗಲಾಟೆಯಲ್ಲೂ ಇದೇ ಆಗಿರೋದು. ತನ್ ಹುಡುಗಿ ಮತ್ತೊಬ್ಬ ಹುಡುಗನ ಜೊತೆ ಸುತ್ತಾಡ್ತಿದ್ದಾಳೆ ಅಂತಾ ಇರೋ ಜಾಗಕ್ಕೆ ಹೋಗಿ ಅವ್ನ ಜೊತೆ ನಡುರಸ್ತೇಲೆ ಡಿಶುಂಡಿಶುಂ ಶುರು ಮಾಡಿದ್ದಾನೆ.
ಅವರಿಬ್ಬರು ಪ್ರೀತಿಸಿದ್ರೂ, ಜೊತೆಯಲ್ಲಿ ಕೂಡಾ ಓಡಾಡ್ತಿದ್ರಂತೆ. ಆದ್ರೆ ನಿನ್ನೆಯ ದಿನ ಹುಡುಗಿ ಪವನ್ ಜೊತೆ ಓಡಾಡದೇ ಮತ್ತೊಬ್ಬ ಅಂಥೋನಿ ಎಂಬಾತನ ಜೊತೆ ಸುತ್ತಾಡೋದು ತಿಳಿದು. ಆ ವೇಳೆ ಪವನ್ ಯುವತಿಗೆ ಸಾಕಷ್ಟು ಬಾರಿ ಕಾಲ್ ಮಾಡಿದ್ರೂ ಅವಳು ಪೋನ್ ಪಿಕ್ ಮಾಡದೇ ಸರಿಯಾಗಿ ರೇಸ್ಪಾನ್ಸ್ ಮಾಡದಿದ್ದಕ್ಕೆ ಪವನ್ ತನ್ನ ಫ್ರೆಂಡ್ ಕಾರ್ತಿಕ್‌ನನ್ನು ಕರೆದುಕೊಂಡು ಆಟೋನಿಯಾ ಇರೋ ಜಾಗಕ್ಕೆ ಹೋಗ್ತಾನೆ. ಆಟೋನಿಯಾ ಹೋಗೋ ರಸ್ತೆಯಲ್ಲಿ ಅವನನ್ನು ಅಡ್ಡಗಟ್ಟಿ ಏಕಾಏಕಿ ಅವನ ಮೇಲೆ ಹಲ್ಲೆ ಮಾಡಿದ್ದಾರೆ.
ಇನ್ನೂ ಸ್ಥಳೀಯವಾಗಿ ಜನರು ಈ ಗಲಾಟೆ ಬಿಡಿಸಲು ಪ್ರಯತ್ನ ಮಾಡ್ತಾರೆ ಅದಲ್ಲದೆ ಹುಡುಗಿ ಕೂಡಾ ಅವರನ್ನ ತಡೆಯಲು ಯತ್ನಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಿನ್ನೆಲೆ ಇದೀಗ ವಿಧಾನಸೌಧದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು. ಈ ಗಲಾಟೆ ಯಾವ ಕಾರಣಕ್ಕೆ ಆಯ್ತು ಅನ್ನೋದರ ಕಂಪ್ಲೀಟ್ ಡಿಟೈಲ್ಸ್ ತಿಳಿದುಬರಬೇಕಿದೆ.
PublicNext
20/09/2022 06:34 pm