ಬೆಂಗಳೂರು: ನಿನ್ನೆ ಮಧ್ಯಾಹ್ನ ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯ ಕೋಗಿಲು ರಸ್ತೆ ಮಾರುತಿನಗರ ಜಂಕ್ಷನ್ ಬಳಿ ಬೈಕ್ ಓವರ್ ಟೇಕ್ ಮಾಡಲು ಸೈಡ್ ಬಿಟ್ಟಿಲ್ಲ ಎಂದು ಗಲಾಟೆ ನಡೆದಿತ್ತು. ಸ್ಥಳೀಯ ಬೈಕ್ ಸವಾರ ವಿನಯ್ ಎಂಬಾತ ಟಾಟಾ ಏಸ್ ಗಾಡಿಯ ಡ್ರೈವರ್ ಪ್ರಕಾಶ್‌ಗೆ ಸೈಡ್ ಬಿಟ್ಟಿಲ್ಲ ಎಂದು ಕೆಟ್ಟ ಪದ ಬಳಸಿ ಅವಾಜ್ ಹಾಕಿದ್ದು, ಅದಕ್ಕೆ ಪ್ರಕಾಶ್ ಪ್ರತಿಕ್ರಿಯಿಸಿದ್ದ. ಪರಿಣಾಮ ಬೈಕ್ ಸವಾರ ಇನ್ನಿಬ್ಬರು ಸಂಜಯ್ ಮತ್ತು ತಾಹೀರ್ ಎಂಬ ಕಿಡಿಗೇಡಿಗಳನ್ನು ಕರೆಸಿಕೊಂಡು ಡ್ರಾಗರ್ ನಿಂದ ಅಟ್ಯಾಕ್ ಮಾಡಿ, ಪರಾರಿಯಾಗಿದ್ದರು. ಹಲ್ಲೆಗೊಳಗಾದ ಗೂಡ್ಸ್ ಗಾಡಿ ಡ್ರೈವರ್ ಪ್ರಕಾಶ್ ಮತ್ತು ಕ್ಲೀನರ್ ಚಂದನ್ ಯಲಹಂಕ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದರು.
ಡ್ರಾಗರ್‌ನಿಂದ ಅಟ್ಯಾಕ್ ಮಾಡಿದ ಸುದ್ದಿ ಗೊತ್ತಾಗುತ್ತಿದ್ದಂತೆ ಮಾರುತಿನಗರದ ಜನ ಬೆಚ್ಚಿಬಿದ್ದಿದ್ದರು. ದೂರಿನನ್ವಯ ಯಲಹಂಕ ಪೊಲೀಸರು ಮೊದಲು ಚಂದನ್‌ನನ್ನ ವಶಕ್ಕೆ ಪಡೆದಿದ್ದರು. ನಿನ್ನೆ ರಾತ್ರಿ ಪ್ರಮುಖ ಆರೋಪಿ ವಿನಯ್‌ನನ್ನು ವಶಕ್ಕೆ ಪಡೆದಿದ್ದಾರೆ. ಮತ್ತೊಬ್ಬ ಆರೋಪಿ ತಾಹಿರ್‌ಗಾಗಿ ಶೋಧಾಕಾರ್ಯ ಮುಂದುವರೆಸಿದ್ದಾರೆ.
PublicNext
16/09/2022 10:07 pm