ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅಂತರ್ ರಾಜ್ಯ ಬೈಕ್ ಖದೀಮರ ಬಂಧನ; 40 ಲಕ್ಷ ಮೌಲ್ಯದ ಸೊತ್ತು ಸ್ವಾಧೀನ

ಆನೇಕಲ್:‌ ಅವರೆಲ್ಲ ಕತ್ತಲಾಗ್ತಿದ್ದನ್ನ ಕಾಯ್ತಿದ್ದ ಖದೀಮರು. ಕ್ಷಣ ಮಾತ್ರದಲ್ಲೇ ಮನೆ ಮುಂದೆ ನಿಲ್ಸಿದ್ದ ಬುಲೆಟ್ ಬೈಕುಗಳನ್ನು ಕದ್ದು ಪರಾರಿ ಆಗ್ತಿದ್ರು! ಮಾತ್ರವಲ್ಲದೆ, ಲಾಂಗು- ಮಚ್ಚು ಹಿಡಿದು ದರೋಡೆ ಮಾಡುತ್ತಿದ್ದ ಸರ್ಜಾಪುರ ಹಂದೇನಹಳ್ಳಿ ಬಳಿ ಐವರನ್ನು ಹೆಚ್ಚಿನ ತಪಾಸಣೆ‌ ನಡೆಸಿದಾಗ ಕಳ್ಳತನದ‌ ವಿಚಾರ ಬಯಲಿಗೆ ಬಂದಿದೆ.

ಹೀಗೆ ಸರತಿ‌ ಸಾಲಿನಲ್ಲಿ ನಿಂತಿರುವ ಬೈಕುಗಳನ್ನು ನೋಡಿ... ಇದೇನು ಬುಲೆಟ್ ಶೋರಂ ಅಂದುಕೊಳ್ಳಬೇಡಿ. ಅಂತರ್ ರಾಜ್ಯ ಕಳ್ಳರು ಖತರ್ನಾಕ್ ಕೆಲಸ ಮಾಡಿ ಎಗರಿಸಿದ ವಾಹನಗಳಿವು,. ಅವುಗಳನ್ನು ಕಳ್ಳರಿಂದ ವಶಪಡಿಸಿಕೊಂಡು,‌ ಮತ್ತೆ ವಾಪಸ್ ವಾಹನ ಮಾಲೀಕರಿಗೆ ನೀಡಲು ಇಲ್ಲಿ ನಿಲ್ಲಿಸಲಾಗಿದೆ.

ಬೆಂಗಳೂರು ಆನೇಕಲ್ ಉಪವಿಭಾಗ ಸೇರಿದಂತೆ ಸಿಟಿ ಸುತ್ತಮುತ್ತ ಇತ್ತೀಚೆಗೆ ಬುಲೆಟ್ ಬೈಕ್ ಗಳು ಇದ್ದಕ್ಕಿದ್ದಂತೆ ಮಾಯ ಆಗ್ತಿದ್ವು. ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳು ಬೆಳಗಾಗೋದ್ರೊಳಗೆ ಕಳ್ಳತನ ಆಗ್ತಾ ಇದ್ವು. ಮುಖ್ಯವಾಗಿ ಬುಲೆಟ್ ಬೈಕುಗಳನ್ನು ಕದ್ದು, ಕಡಿಮೆ ಬೆಲೆ‌‌ಗೆ ಮಾರಾಟ ಮಾಡುತ್ತಿದ್ದ ಅಂತರ್ ರಾಜ್ಯ ‌ಕಳ್ಳರ ಗ್ಯಾಂಗ್ ನ್ನು ಸರ್ಜಾಪುರ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಬೇಗ ಶ್ರೀಮಂತರಾಗುವ ಆಸೆ ಇಟ್ಟುಕೊಂಡ ಈ ಯುವ ಕಳ್ಳರು ಆಯ್ದುಕೊಂಡಿದ್ದು ಬೈಕ್ ಕಳ್ಳತನದ ದಂಧೆ. ಹೊಸೂರಿನ ಮೂವರು, ಜಿಗಣಿಯ ಇನ್ನೊಬ್ಬ, ತಿರುಪಾಳ್ಯದ ಅಸಾಮಿ ಸೇರಿ ಒಂದು ಗ್ಯಾಂಗ್ ಕಟ್ಟಿದ್ದಾರೆ. ಪ್ರಕಾಶ್ ರಾಜ್, ಗೋಪಿ, ‌ಮೊಹಮ್ಮದ್ ಶಾಹಿದ್, ನವೀನ್ ‌‌ಹಾಗೂ ನಂದೀಶ್ ಕೇವಲ ಕಳ್ಳರಾಗಿ ಇರದೇ ತಮಗೆ ತಾವೇ ಪ್ರಮೋಷನ್ ಆಗಿ ಡಕಾಯಿತಿಗೂ ಇಳಿದು ಪೊಲೀಸರ ಅತಿಥಿಯಾಗಿದ್ದಾರೆ.

- ಹರೀಶ್ ಗೌತಮನಂದ, ಪಬ್ಲಿಕ್ ನೆಕ್ಸ್ಟ್ ಆನೇಕಲ್

Edited By :
PublicNext

PublicNext

13/09/2022 10:15 pm

Cinque Terre

37.52 K

Cinque Terre

0