ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಬಿಎಂಪಿ ಕಸದ ಲಾರಿಗೆ ದಂಪತಿ ಬಲಿ

ಬೆಂಗಳೂರು : ಬಿಬಿಎಂಪಿ ಗುತ್ತಿಗೆ ಲಾರಿಯಿಂದ ಅಪಘಾತಕೊಳಗಾಗಿ ಆಸ್ಪತ್ರೆ ಪಾಲಾಗಿದ್ದ ಯೊಗೇಂದ್ರ ಚಿಕಿತ್ಸೆ ಫಲಿಸದೆ ಸವಾರ ಯೊಗೇಂದ್ರ ಸಾವನ್ನಪ್ಪಿದ್ದಾರೆ.ಹೌದು ಜುಲೈ 9 ರ ಬೆಳ್ಳಗ್ಗೆ ನಾಗರಬಾವಿ ಸರ್ಕಲ್ ಬಳಿ ನಡೆದ ಅಪಘಾತ ದಲ್ಲಿ ತೀವ್ರವಾಗಿ ಗಾಯಗೊಂಡ ಯೊಗೇಂದ್ರ ಪತ್ನಿ ವಿಜಯ ಕಲಾ ಚಿಕಿತ್ಸೆ ಫಲಿಸದೆ ಜುಲೈ 9 ರಂದು ಮೃತಪಟ್ಟಿದ್ರು.

ಇಂದು ಚಿಕಿತ್ಸೆ ಫಲಿಸದೆ ಯೊಗೇಂದ್ರ ಕೂಡ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ದಂಪತಿ ಬೈಕ್ ನಲ್ಲಿ ತೆರಳುತ್ತಿದ್ದಾಗ ಹಿಂಬಂದಿಯಿಂದ ಬಂದು ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದಿತ್ತು.

ಈ ಕುರಿತು ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇತ್ತೀಚೆಗೆ ಬಿಬಿಎಂಪಿ ಕಸದ ಲಾರಿಗೆ ಹಲವಾರು ಮಂದಿ ಸಾವನ್ನಪ್ಪಿದ್ದಾರೆ. ಇನ್ನಾದರೂ ಬಿಬಿಎಂಪಿ ಎಚ್ಚೆತ್ತುಕೊಂಡು ಕಸದ ಲಾರಿಗಳ ಸೂಕ್ತ ನಿರ್ವಹಣೆ ಮಾಡಬೇಕಿದೆ.

Edited By : Nirmala Aralikatti
PublicNext

PublicNext

14/07/2022 06:03 pm

Cinque Terre

17.85 K

Cinque Terre

0

ಸಂಬಂಧಿತ ಸುದ್ದಿ