ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಚಲಿಸುವ ಬಸ್ ಮತ್ತು ಬೈಕ್ ಮೇಲೆ ಬಿದ್ದ ಮರ : ವಾಹನಗಳು ಜಖಂ

ನೆಲಮಂಗಲ: ಚಲಿಸುತ್ತಿದ್ದ ಬಿಎಂಟಿಸಿ ಬಸ್ ಮತ್ತು ಬೈಕ್ ಮೇಲೆ ಬೃಹತ್ ಗಾತ್ರದ ಆಲದ ಮರ ಬಿದ್ದು ವಾಹನ ಜಖಂಗೊಂಡಿರುವ ಘಟನೆ ನೆಲಮಂಗಲ ತಾಲ್ಲೂಕು ಸೊಂಡೆಕೊಪ್ಪ ರಸ್ತೆಯ ಅಂಜನಾನಗರದ ಬಳಿ ನಡೆದಿದೆ.

ನೆಲಮಂಗಲದಿಂದ ಸೊಂಡೆಕೊಪ್ಪದ ಕಡೆಗೆ ತೆರಳುತ್ತಿದ್ದ ಬಸ್ ನಲ್ಲಿ ಸುಮಾರು 20 ಮಂದಿ ಪ್ರಯಾಣಿಕರು ಮತ್ತು ಬೈಕ್ ಸವಾರ ಅವಘಡದಿಂದ ಪಾರಾಗಿದ್ದು, ರಸ್ತೆಗೆ ಅಡ್ಡಲಾಗಿ ಬಿದ್ದ ಮರ ದಿಂದಾಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡು ವಾಹನ ಸವಾರರು ಪರದಾಡುವಂತಾಯಿತು.

ಸ್ಥಳಕ್ಕೆ ನೆಲಮಂಗಲ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಳೆ ನಡುವೆ ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್ ಆಲದ ಮರದ ತೆರವಿಗಾಗಿ ಅರಣ್ಯ ಇಲಾಖೆ ಕರೆ ಮಾಡಿದ್ರು ಅರಣ್ಯ ಇಲಾಖೆ ಸೂಕ್ತ ಸಹಕಾರ ನೀಡಿಲ್ಲ. ಈ ವೇಳೆ ವಾಹನ ದಟ್ಟಣೆ ನಿಬಾಯಿಸುವಲ್ಲಿ ಪೊಲೀಸರು ಹೈರಾಣಾಗಿದ್ದಾರೆ.

ಬಳಿಕ ಮರದ ತೆರವಿಗಾಗಿ ಸ್ಥಳೀಯರ ಸಹಕಾರ ಪಡೆದ ಪೊಲೀಸರು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

Edited By : Manjunath H D
PublicNext

PublicNext

19/05/2022 11:03 pm

Cinque Terre

59.62 K

Cinque Terre

0

ಸಂಬಂಧಿತ ಸುದ್ದಿ