ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಎಂಇಎಸ್ ನಿಷೇಧಿಸುವಂತೆ ಬೃಹತ್ ರ‍್ಯಾಲಿ,ರಾಜಭವನಕ್ಕೆ ಮುತ್ತಿಗೆ ಹಾಕಲು ಮುಂದಾಗುತ್ತಿರುವ ಕರವೇ

ಬೆಂಗಳೂರು: ಎಂಇಎಸ್ ಪುಂಡಾಟಿಕೆ ಹತೋಟಿಗೆ ತರಬೇಕು ಅವರ ಆಟಾಟೋಪ ನಿಲ್ಲಿಸಲು ಎಂಇಎಸ್ ಅನ್ನು ಬ್ಯಾನ್ ಮಾಡಬೇಕೆಂದು ಒತ್ತಾಯಿಸಿ ರಾಜಭವನ ಮುತ್ತಿಗೆ ಹಾಕಿ ಕರವೇ ಸದಸ್ಯರು ಧರಣಿ ಮಾಡುತ್ತಿದ್ದಾರೆ. ಈ ಸಂಬಂಧ ಟೌನ್ ಹಾಲ್ ನಲ್ಲಿ ನೂರಾರು ಕರವೇ ಕಾರ್ಯಕರ್ತರು ಜಮಾಯಿಸಿದ್ದು.ಎಂಇಎಸ್ ವಿರುದ್ಧ ಘೋಷಣೆ ಕೂಗಿ ಕನ್ನಡ ಬಾವುಟ ಹಿಡಿದು ಆಕ್ರೋಶ ಹೊರಹಾಕುತ್ತಿದ್ದಾರೆ ಇದರಿಂದಾಗಿ ಟೌನ್ ಹಾಲ್ ನಲ್ಲಿ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದೆ.

ಕಾರ್ಯಕರ್ತರು ರಾಜಭವನಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸುತ್ತಲಿದ್ದು ಪೊಲೀಸರು ಗುಂಪು ಚದುರಿಸಲು ಹರಸಾಹಸ ಪಡುತ್ತಿದ್ದಾರೆ. ರಾಜ್ಯ ಬಂದ್ ನಿಂದ ಯಾವುದೇ ಉಪಯೋಗ ಇಲ್ಲ,ಕೇಂದ್ರಕ್ಕೆ ಇಂದು ಒತ್ತಾಯ ಮಾಡಬೇಕಿದೆ, ಹೀಗಾಗಿ ರಾಜಭವನಕ್ಕೆ ಮುತ್ತಿಗೆ ಹಾಕಲು ಹೋಗ್ತಿದ್ದೀವಿ, ಎಂಇಎಸ್ ನಿಷೇಧ ಮಾಡುವವರೆಗೂ ನಮ್ಮ ಪ್ರತಿಭಟನೆ ಮುಂದುವರೆಯಲಿದೆ ಎಂದು ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಹೇಳಿಕೆ ನೀಡಿದ್ದಾರೆ.

ನಾಳೆ ಕರವೇ ಇಂದ ಯಾವುದೇ ಪ್ರತಿಭಟನೆ ಇಲ್ಲ, ವಾಟಾಳ್ ಕರೆಕೊಟ್ಟ ಬಂದ್ಗೆ ಒಳ್ಳೆಯದಾಗ್ಲಿ ಬಂದ್ಗೆ ಬೆಂಬಲ ನೀಡಿ ಎಂದು ವಾಟಾಳ್ ನನಗೆ ಕೇಳಿಲ್ಲ, ಈ ಕಾರಣ ಎಂದೇನೂ ಅಲ್ಲ, ನಾನು ಮೊದಲಿನಿಂದಲೂ ಬಂದ್ ಬೆಂಬಲಿಸಿಲ್ಲ. ಹೀಗಾಗಿ ನಾಳೆಯ ಬಂದ್ ನಲ್ಲಿ ನಾವು ಭಾಗಿಯಾಗ್ತಿಲ್ಲ ಎಂದು ತಿಳಿಸಿದರು.

Edited By : Manjunath H D
PublicNext

PublicNext

30/12/2021 01:56 pm

Cinque Terre

29.17 K

Cinque Terre

0

ಸಂಬಂಧಿತ ಸುದ್ದಿ