ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆನೇಕಲ್: ಕಳಪೆ ರಸ್ತೆ ಡಾಂಬರೀಕರಣ-ಗ್ರಾಮಸ್ಥರಿಂದ ವಿರೋಧ

ಆನೇಕಲ್:ರಸ್ತೆಬದಿಯಲ್ಲಿರುವ ಮರಗಳನ್ನು ತೆರವುಗೊಳಿಸದೆ ಮತ್ತೆ ಬುಡಗಳನ್ನು ಕಿತ್ತು ಹಾಕದೆ ಅದೇ ರಸ್ತೆ ಮೇಲೆಯೇ ಡಾಂಬರೀಕರಣ ಮಾಡುತ್ತಿದ್ದ ಅಧಿಕಾರಿಗಳ ವಿರುದ್ಧ ಹೊಂಪಲ್ಲಗಟ್ಟ ಗ್ರಾಮ ಪಂಚಾಯಿತಿಯ ಸದಸ್ಯರು ಹಾಗೂ ಗ್ರಾಮಸ್ಥರು ಕಿಡಿಕಾರಿದ್ದಾರೆ.

ಆನೇಕಲ್ ಹಾಗೂ ಹೊಸೂರು ನಡುವೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ರಸ್ತೆ ಡಾಂಬರೀಕರಣಕ್ಕೆ ಸರ್ಕಾರದಿಂದ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದಾರೆ.

ಆದರೆ ಅಧಿಕಾರಿಗಳು ಕಳಪೆ ಕಾಮಗಾರಿ ನಡೆಸಿ ಜೇಬು ತುಂಬಿಕೊಳ್ಳುವ ಕೆಲಸ ಮಾಡಿಕೊಳ್ಳುತ್ತಿದ್ದಾರೆ ಎಂದು ಹೊಂಪಲ್ಲಗಟ್ಟ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಉಮೇಶ್ ಜನಾರ್ಧನ್ ಮತ್ತು ಮಾಜಿ ಸದಸ್ಯ ವೆಂಕಟೇಶ್ ಅಧಿಕಾರಿಗಳ ವಿರುದ್ಧ ದೂರಿದ್ದಾರೆ.

ಡಾಂಬರೀಕರಣ ಕೆಲಸ ಮಾಡದಂತೆ ಗ್ರಾಮಸ್ಥರು ಇಂಜಿನಿಯರ್ ಹಾಗೂ AWE ಅಧಿಕಾರಿಗಳ ತಡೆದರು. ಆಗ ಇವರ ಮಧ್ಯೆ ಮಾತಿನ ಚಕಮಕಿ ಕೂಡ ನಡೆಯಿತು. ಇನ್ನು ಇದಕ್ಕೆ ಸಂಬಂಧಪಟ್ಟಂತೆ ಮೇಲಾಧಿಕಾರಿಗಳು ಕ್ರಮ ಕೈಗೊಳ್ತಾರಾ ಅನ್ನೋದನ್ನ ಕಾದುನೋಡಬೇಕಿದೆ.

Edited By : Manjunath H D
Kshetra Samachara

Kshetra Samachara

05/02/2022 11:14 pm

Cinque Terre

20

Cinque Terre

0

ಸಂಬಂಧಿತ ಸುದ್ದಿ