ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ : 13.10.2022

ಮೇಷ: ವಿದ್ಯಾರ್ಥಿಗಳಲ್ಲಿ ಪ್ರಗತಿ. ದೈನಂದಿನ ಕೆಲಸಕಾರ್ಯಗಳಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ. ಸ್ನೇಹಿತರಿಂದ ಧನಾಗಮನ.

ವೃಷಭ: ವ್ಯಾಪಾರದಲ್ಲಿ ಲಾಭ. ಕೋರ್ಟ್ ವ್ಯವಹಾರಗಳಲ್ಲಿ ಜಯ. ಮನಃಶಾಂತಿ. ಸ್ಥಿರಾಸ್ತಿ ಮಾರಾಟ. ದ್ವಿಚಕ್ರವಾಹನದಿಂದ ತೊಂದರೆ.

ಮಿಥುನ: ಮುಖ್ಯವಾದ ಕೆಲಸಗಳು ಅಂತಿಮ ಹಂತಕ್ಕೆ. ಪರಸ್ಥಳ ವಾಸ ಮಾಡಬೇಕಾಗುವುದು. ಹಿರಿಯರಿಂದ ನೆರವು. ಅನಾರೋಗ್ಯ.

ಕಟಕ: ಮಾನಸಿಕ ಒತ್ತಡವು ದುಃಖಕ್ಕೆ ಗುರಿ ಮಾಡುವುದು. ಶರೀರದಲ್ಲಿ ಆಲಸ್ಯ, ಆತಂಕ ಹೆಚ್ಚಾಗಲಿದೆ. ಅಕಾಲ ಭೋಜನ ಅನಿವಾರ್ಯ.

ಸಿಂಹ: ವಾದ-ವಿವಾದ, ಅತಿಯಾದ ನೋವು, ದೃಷ್ಟಿ ದೋಷ ದಿಂದ ತೊಂದರೆ. ತಾಳ್ಮೆ ತೀರ ಅಗತ್ಯವಾಗುತ್ತದೆ. ಶತ್ರು ಬಾಧೆ ಕಾಡೀತು.

ಕನ್ಯಾ: ಪರರಿಗೆ ಸಹಾಯ ಮಾಡುವಿರಿ. ಸಕಲ ಕಾರ್ಯಗಳಲ್ಲಿ ಅಡ್ಡಿ. ನಂಬಿದವರೇ ಶತ್ರುಗಳಾದಾರು. ಉದ್ಯೋಗದಲ್ಲಿ ವರ್ಗಾವಣೆ.

ತುಲಾ: ತಾಯಿಯಿಂದ ಸಹಾಯ ದೊರೆಯುವುದು. ವಾಹನ ರಿಪೇರಿ. ದುಷ್ಟ ಜನರ ಸಹವಾಸ. ಆರ್ಥಿಕ ಬಿಕ್ಕಟ್ಟು ಅನುಭವಿಸುವಿರಿ.

ವೃಶ್ಚಿಕ: ಖರ್ಚು ಜಾಸ್ತಿ. ಪ್ರಿಯವಾದ ಸುಳ್ಳನ್ನೂ ಹೇಳಬೇಡಿ. ನೆಮ್ಮದಿ ಇಲ್ಲದ ಜೀವನ. ಕಾರ್ಯದಲ್ಲಿ ವಿಘ್ನ, ವಾಸಗೃಹದಲ್ಲಿ ತೊಂದರೆ.

ಧನುಸ್ಸು: ಪರಸ್ತ್ರೀ ಸಹವಾಸ ಸಲ್ಲದು. ಅದರಿಂದ ತೊಂದರೆ ಕಟ್ಟಿಟ್ಟ ಬುತ್ತಿ. ಅಪವಾದ, ಚಂಚಲ ಮನಸ್ಸು. ಧನ ನಷ್ಟ. ಆಕಸ್ಮಿಕ ಖರ್ಚು.

ಮಕರ: ಆಲಸ್ಯ ಮನೋಭಾವ. ಕಾರ್ಯದಲ್ಲಿ ವಿಘ್ನ. ದ್ವೇಷಭಾವ ಬೇಡ. ವಿರೋಧಿಗಳಿಂದ ತೊಂದರೆ ಅನುಭವಿಸಬೇಕಾಗುವುದು.

ಕುಂಭ: ಕುಟುಂಬ ಸೌಖ್ಯ. ಶೀತ ಸಂಬಂಧಿ ರೋಗಗಳು. ಅನಗತ್ಯ ಅಲೆದಾಟ. ಯಾರನ್ನೂ ಹೆಚ್ಚಾಗಿ ನಂಬಬೇಡಿ. ಸುಖ ಭೋಜನ.

ಮೀನ: ನಾನಾ ರೀತಿಯ ಚಿಂತೆ. ಋಣಬಾಧೆ. ಸ್ಥಳ ಬದಲಾವಣೆ ಸಾಧ್ಯತೆ ಇದೆ. ಅಲಂಕಾರಿಕ ವಸ್ತುಗಳಿಗೆ ಖರ್ಚು, ಪ್ರಿಯ ಜನರ ಭೇಟಿ.

Edited By : Nirmala Aralikatti
PublicNext

PublicNext

13/10/2022 07:15 am

Cinque Terre

96.41 K

Cinque Terre

0