ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ : 20.8.2022

ಮೇಷ: ಮಹಿಳೆಯರಿಗೆ ಆಭರಣ ಲಾಭ. ತಂದೆಗೆ ರೋಗಬಾಧೆ ಕಾಡೀತು. ಕುಟುಂಬದಲ್ಲಿ ಅಶಾಂತಿಯ ವಾತಾವರಣ. ಅಕಾಲ ಭೋಜನ.

ವೃಷಭ: ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಸಾಮಾನ್ಯ ಕೆಲಸದಲ್ಲಿ ಒತ್ತಡ ಎದುರಿಸಬೇಕಾದೀತು. ಆರ್ಥಿಕ ಪರಿಸ್ಥಿತಿಯಲ್ಲಿ ತುಸು ಚೇತರಿಕೆ.

ಮಿಥುನ: ವಾಹನ ಚಾಲನೆಯಲ್ಲಿ ಎಚ್ಚರ. ವಿಪರೀತ ಖರ್ಚು. ಆಲಸ್ಯ ಮನೋಭಾವ ಬೇಡ. ಮಿತ್ರರಲ್ಲಿ ಮನಸ್ತಾಪ. ಸಾಧಾರಣ ಫಲ.

ಕಟಕ: ಶ್ರಮಕ್ಕೆ ತಕ್ಕ ಫಲ ಲಭಿಸಲಿದೆ. ಅವಿವಾಹಿತರಿಗೆ ವಿವಾಹ ಯೋಗ. ಶತ್ರು ನಾಶ. ಸಮಾಜದಲ್ಲಿ ಗೌರವ ದೊರೆತು ಮಾನಸಿಕ ನೆಮ್ಮದಿ.

ಸಿಂಹ: ಚಂಚಲ ಮನಸ್ಸಿನಿಂದ ಗೃಹ ನಿರ್ಮಾಣ ವಿಳಂಬ. ಆದಾಯ ಕಡಿಮೆ, ಖರ್ಚು ಜಾಸ್ತಿ. ಮನಕ್ಲೇಶ. ಯತ್ನ ಕಾರ್ಯಗಳಲ್ಲಿ ವಿಳಂಬ.

ಕನ್ಯಾ: ಬಂಧುಗಳಿಗೆ ಉಪಕಾರ ಮಾಡುವಿರಿ. ದುಷ್ಟ ಜನರಿಂದ ದೂರವಿರುವುದು ಕ್ಷೇಮ. ಆಕಸ್ಮಿಕ ಖರ್ಚು. ವಿಪರೀತ ವ್ಯಸನ ಬೇಡ.

ತುಲಾ: ಸಲ್ಲದ ಅಪವಾದ. ಅನಾರೋಗ್ಯ. ದಾಯಾದಿಗಳಿಂದ ತೊಂದರೆ. ಮಹಿಳಾ ಉದ್ಯೋಗಿಗಳಿಗೆ ವಿದೇಶ ಪ್ರಯಾಣ ಯೋಗ.

ವೃಶ್ಚಿಕ: ಗೆಳೆಯರಿಂದ ಅನರ್ಥ ಸಂಭವಿಸಬಹುದು. ದೃಷ್ಟಿ ದೋಷ ಕಾಡಬಹುದು. ವಿಪರೀತ ಖರ್ಚಾದರೂ ಕಾರ್ಯ ಸಿದ್ದಿ. ಋಣ ಬಾಧೆ.

ಧನುಸ್ಸು: ಅಧಿಕಾರ ಪ್ರಾಪ್ತಿ. ಶಾರೀರಿಕವಾಗಿ ಆತಂಕ. ಚಂಚಲ ಮನಸ್ಸು. ಅನವಶ್ಯಕವಾಗಿ ವಸ್ತುಗಳ ಖರೀದಿ ಮಾಡುವಿರಿ. ಹಿರಿಯರ ಭೇಟಿ.

ಮಕರ: ರಾಜಕೀಯ ರಂಗದಲ್ಲಿ ಮುನ್ನಡೆ. ಅಧಿಕ ಕೆಲಸದಿಂದ ವಿಶ್ರಾಂತಿ ಪಡೆಯಿರಿ. ಸುಖ ಭೋಜನ. ಅಶಾಂತಿ. ತಾಳ್ಮೆಯಿಂದ ಇರಿ.

ಕುಂಭ: ಸಣ್ಣಪುಟ್ಟ ವಿಷಯಗಳಲ್ಲಿ ಭಿನ್ನಾಭಿಪ್ರಾಯ. ಸುಳ್ಳು ಮಾತನಾಡುವಿರಿ, ಅದು ಒಳ್ಳೆಯದಲ್ಲ. ಕೈಗಾರಿಕಾ ಉದ್ಯಮಿಗಳಿಗೆ ಲಾಭವಿದೆ.

ಮೀನ: ಕಾರ್ಯಸಾಧನೆ. ಸ್ತ್ರೀಯರಿಗೆ ಚಿನ್ನಾಭರಣ ಯೋಗ. ವಿವಾಹದ ಮಾತುಕತೆ ನಡೆಯಲಿದೆ. ಪರಿಶ್ರಮಕ್ಕೆ ತಕ್ಕ ಆದಾಯ.

Edited By : Nirmala Aralikatti
PublicNext

PublicNext

20/08/2022 07:10 am

Cinque Terre

48.39 K

Cinque Terre

0