ಮೇಷ: ಸಂಗಾತಿ ಜೊತೆ ಪುನರ್ಮಿಲನೆಯ ದಿನ,ಮದುವೆ ಸಾಲಾವಳಿ ಕೇಳುವ ಸಮಯ ಬಂದಿದೆ,ವಿವಾಹ ಸಮಸ್ಯೆಗಳಿಗೆ ಬಂಧುಗಳ ನೆರವಿನಿಂದ ಪರಿಹಾರ, ಮದುವೆಗಾಗಿ ಕಲ್ಯಾಣ ಮಂಟಪ ಬುಕಿಂಗ್ ಮಾಡುವಿರಿ, ಹಣಕಾಸು ಪರಿಸ್ಥಿತಿ ಉತ್ತಮ. ಮಾನಸಿಕ ನೆಮ್ಮದಿಗಾಗಿ ದೂರ ಪ್ರಯಾಣ. ಬಹುದಿನಗಳ ಆಶೋತ್ತರವೊಂದು ನೆರವೇರಲಿದೆ. ಸಹೋದ್ಯೋಗಿಗಳಿಂದ ಸಹಕಾರ.
ವೃಷಭ: ನಿರ್ಣಯಗಳನ್ನು ಕೈಗೊಳ್ಳುವಾಗ ಉದ್ವೇಗಕ್ಕೆ ಒಳಗಾಗದಿರಿ. ತಾಳ್ಮೆಯಿಂದ ನಡೆದುಕೊಂಡಲ್ಲಿ ದಿನವಿಡಿ ಯಶಸ್ಸು. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಪ್ರೀತಿಪಾತ್ರರೊಂದಿಗೆ ಒಡನಾಟ ಸಂಶೋಧನೆ ವಿಭಾಗದಲ್ಲಿ ಕೆಲ್ಸ ಮಾಡುತ್ತಾ ಇರೋ ಜನಕ್ಕೆ ಹೆಚ್ಚಿನ ಅಭಿವೃದಿ. ಆರೋಗ್ಯ ವಿಷಯದಲ್ಲಿ ಅಲ್ಪ ಮಟ್ಟಿಗೆ ಕಿರಿ ಕಿರಿ ಇರಲಿದೆ. ಉದ್ಯೋಗದ ವಿಷಯದಲ್ಲಿ ಸೂಕ್ತ ಸ್ಥಾನಮಾನ ನಿಮಗೆ ದೊರೆಯಲಿದೆ.
ಮಿಥುನ: ಕೆಲಸದಲ್ಲಿರುವವರಿಗೆ ಮುಂಬಡ್ತಿ. ಉದ್ಯೋಗದಲ್ಲಿನ ಬದಲಾವಣೆಯಿಂದಾಗಿ ಸಂಪಾದನೆಯಲ್ಲಿ ಪ್ರಗತಿ. ಅತಿಯಾದ ಹಣದ ಆಸೆಯಿಂದಾಗಿ ಸಂಕಷ್ಟ. ಗೌರವಕ್ಕೆ ಚ್ಯುತಿ ತರುವ ಘಟನೆಗಳ ಸಂಭವ ನಿಮ್ಮ ಕೆಲಸಕ್ಕೆ ಕುಟುಂಬ ಜನರು ಮತ್ತು ಮೇಲಿನ ಅಧಿಕಾರಿ ಪ್ರಶಂಶೇ ನೀಡಲಿದ್ದಾರೆ. ಕಾರ್ಯ ಕ್ಷೇತ್ರದಲ್ಲಿ ಒಮ್ಮತ ಮೂಡಿಸಲು ನಿಮ್ಮ ಸಹಪಾಠಿಗಳು ಸಹ ಅವಶ್ಯಕ ಇದ್ದಾರೆ. ಸಂಜೆ ನಂತರ ಸಂತೋಷದ ಕೂಟದಲ್ಲಿ ಭಾಗಿ ಆಗುತ್ತೀರಿ. ಹಾಗೆಯೇ ಈ ದಿನ ತಾಯಿಯ ಮಾತುಗಳಿಗೆ ಅತ್ಯಂತ ಹೆಚ್ಚಿನ ಮಹತ್ವ ನೀಡಬೇಕು ಅವರ ಮಾತು ಕೇಳಬೇಕು.
ಕರ್ಕಾಟಕ: ವಿವಾಹ ಮಾತುಕತೆಯಲ್ಲಿ ಪ್ರಗತಿ. ಉದ್ಯೋಗದಲ್ಲಿ ಹೊಸ ಮಾರ್ಗವೊಂದನ್ನು ಕಂಡುಕೊಳ್ಳಲಿದ್ದೀರಿ. ಉದ್ಯೋಗಕ್ಕಾಗಿ ವಿದೇಶ ಪ್ರಯಾಣ ಸಾಧ್ಯತೆ. ಗೃಹ ನಿರ್ಮಾಣ ವಿಷಯದಲ್ಲಿ ನೆಮ್ಮದಿ. ನಿಮ್ಮ ಕಚೇರಿ ಕೆಲ್ಸ ಕಾರ್ಯಗಳು ಅತ್ಯಂತ ಸುಗಮ ರೀತಿಯಲ್ಲಿ ನಡೆಯಲಿದೆ. ನಿಮ್ಮ ಸಂಗಾತಿಗೆ ನೂತನ ಉದ್ಯೋಗ ಪ್ರಾಪ್ತಿ ಆಗುವ ಯೋಗ ಸಹ ಇರುತ್ತದೆ. ಹಾಗೆಯೇ ಈ ದಿನ ನಿಮ್ಮ ನಿರ್ದಿಷ್ಟ ಕೆಲಸಗಳಿಗೆ ಮಾತ್ರ ಒತ್ತು ಕೊಟ್ಟು ಅದನ್ನ ಶ್ರದ್ಧೆಯಿಂದ ಮಾಡಿರಿ. ರೈತಾಪಿ ವರ್ಗದ ಜನಕ್ಕೆ ಅತ್ಯಂತ ಸಂತಸದ ದಿನ ಆಗಬಹುದು ನಿಮ್ಮ ಬೆಳೆ ಗೆ ನಿರೀಕ್ಷೆ ಹಣ ಬರಬಹುದು.
ಸಿಂಹ: ವಿವಾಹಾಕಾಂಕ್ಷಿಗಳಿಗೆ ಕಂಕಣಬಲ ಕೂಡಿರುವ ಸಾಧ್ಯತೆ. ಗೃಹಬಳಕೆ ವಸ್ತುಗಳ ಮಾರಾಟಗಾರರಿಗೆ ಲಾಭ. ಹೊಸ ಯೋಜನೆಯೊಂದಕ್ಕೆ ನಾಂದಿ. ಗೃಹ ನೆಮ್ಮದಿ ನೆಲೆಸುವುದು. ನಿಮ್ಮ ಸಹವರ್ತಿಗಳ ಸಲಹೆ ನಿಮಗೆ ಅಗತ್ಯವಾಗಿ ಬೇಕಾಗಿದೆ. ನಿರ್ದಿಷ್ಟ ಕೆಲಸದ ಕಡೆಗೆ ಹೆಚ್ಚಿನ ಒತ್ತು ಮತ್ತು ಶ್ರದ್ದೆ ಕೊಟ್ಟು ನಿಮ್ಮ ಕನಸುಗಳು ಸಾಕಾರ ಆಗುವತ್ತ ಗಮನ ಹರಿಸಿದರೆ ಸೂಕ್ತ. ಸ್ನೇಹಿತರ ಮಾತುಗಳು ಕೇಳಿ ದುಡುಕು ನಿರ್ಧಾರಗಳು ತೆಗೆದುಕೊಳ್ಳಬೇಡಿ.
ಕನ್ಯಾ: ಸಮಸ್ಯೆಯನ್ನು ಅತ್ಯಂತ ನಾಜೂಕಿನಿಂದ ಪರಿಹರಿಸುವ ಅವಕಾಶ. ರಾಜಕೀಯ ವ್ಯಕ್ತಿಗಳಾಗಿದ್ದರೆ ದಿನದ ಮಟ್ಟಿಗೆ ರಾಜಕೀಯದಿಂದ ದೂರ ಉಳಿಯುವುದು ಉತ್ತಮ. ಮಕ್ಕಳ ಆರೋಗ್ಯದಲ್ಲಿ ವ್ಯತ್ಯಯ ಸಾಧ್ಯತೆ. ಉದ್ಯೋಗದ ವಿಷಯದಲ್ಲಿ ಮಹತ್ತರ ಬದಲಾವಣೆ ಆಗಬಹುದು. ರೈತಾಪಿ ವರ್ಗದ ಜನಕ್ಕೆ ಸಾಕಷ್ಟು ಸಿಹಿ ಸುದ್ದಿ ಬರಲಿದೆ. ಕುಟುಂಬ ಜನರ ಮಾತು ಕೇಳಿ ಹಣಕಾಸಿನ ವಿಷಯದಲ್ಲಿ ಮೋಸ ಹೋಗಬೇಡಿ. ನಿಮಗೆ ಸಿಗುವ ಉತ್ತಮ ಅವಕಾಶ ಬಳಕೆ ಮಾಡಿಕೊಂಡು ದೊಡ್ಡ ಹೆಸರು ಮಾಡಿರಿ.
ತುಲಾ: ಇತರರ ಸಹಾಯಕ್ಕಾಗಿ ಧಾವಿಸಬೇಕಾದ ಅನಿವಾರ್ಯತೆ. ನೆಮ್ಮದಿಯ ದಿನವಾದರೂ ಸ್ವಲ್ಪಮಟ್ಟಿನ ಆರೋಗ್ಯದ ಸಮಸ್ಯೆ ಕಾಡಬಹುದು. ಮಾನಸಿಕ ನೆಮ್ಮದಿಗಾಗಿ ದೇವಾಲಯಗಳಿಗೆ ಭೇಟಿ. ಹೊಸ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ. ಕುಟುಂಬ ಜನರ ಮದ್ಯೆ ಒಮ್ಮತ ಮೂಡಿ ಬರಲಿದೆ. ನಿಮಗೆ ಸಮಾಜದಲ್ಲಿ ಸಿಗಬೇಕಿದ್ದ ಹಲವು ಗೌರವ ಮತ್ತು ಪ್ರಶಸ್ತಿ ದೊರೆಯಲಿದೆ. ಸ್ನೇಹಿತರ ಜೊತೆಗೆ ಪ್ರವಾಸದ ಮಜಭೂತಿ ದೊರೆಯಲಿದೆ.
ವೃಶ್ಚಿಕ: ಮೇಲಧಿಕಾರಿಗಳ ಅವಕೃಪೆಗೆ ತುತ್ತಾಗುವುದನ್ನು ತಪ್ಪಿಸಿಕೊಳ್ಳಲು ಸಂಯಮದಿಂದ ವರ್ತಿಸಿ. ದೇವಿ ದರ್ಶನ ಭಾಗ್ಯ. ನಿಮ್ಮ ಬೇಡಿಕೆಗಳಿಗೆ ಸ್ಪಷ್ಟ ರೂಪವನ್ನು ಕೊಟ್ಟು ಮುಂದಿಟ್ಟಲ್ಲಿ ಈಡೇರುವ ಸಾಧ್ಯತೆ. ಈ ದಿನ ನಿಮ್ಮ ವ್ಯಾಪಾರದಲ್ಲಿ ಅಲ್ಪ ಪ್ರಮಾಣದ ಲಾಭ ಪಡೆಯುತ್ತೀರಿ. ದಾಂಪತ್ಯ ಜೀವನದಲ್ಲಿ ಪ್ರೀತಿ ವಾತ್ಸಲ್ಯ ಎಲ್ಲವು ಸಹ ಹೆಚ್ಚಿಗೆ ಆಗಲಿದೆ. ಭೂ ವ್ಯವಹಾರದಲ್ಲಿ ಮೋಸ ಮತ್ತು ಮಾತಿನ ತಗಾದೆ ಆಗುವ ಸಾಧ್ಯತೆ ಇರುತ್ತದೆ.
ಧನಸು: ಕೃಷಿ ಕ್ಷೇತ್ರದಲ್ಲಿರುವವರಿಗೆ ಸಂತಸ. ಆಸ್ತಮಾದಂತಹ ವ್ಯಾಧಿಯಿಂದ ಬಳಲುವ ಸಾಧ್ಯತೆ. ಸಂಯಮದಿಂದಾಗಿ ಮನೆಯಲ್ಲಿ ಸಂತೋಷದ ವಾತಾವರಣ. ಮಹತ್ತರ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾದ ಸಂದರ್ಭ ಈ ದಿನ ಮನಸಿನಲ್ಲಿ ಇರೋ ಸಾಕಷ್ಟು ಕೋರಿಕೆ ಈಡೇರುತ್ತದೆ. ಆದ್ರೆ ತಾಳ್ಮೆ ಎಂಬುದು ಸಾಕಷ್ಟು ಅವಶ್ಯ ಇದೆ. ಸಾಕಷ್ಟು ಕಷ್ಟದಲ್ಲಿ ಇರೋ ಜನಕ್ಕೆ ಉಪಕಾರ ಸಹ ಮಾಡುತ್ತೀರಿ. ಹಿತ ಶತ್ರುಗಳ ಬಗ್ಗೆ ಸ್ವಲ್ಪ ಅತೀ ಜಾಗ್ರತೆ ಇರುವುದು ಸೂಕ್ತ. ರಾತ್ರಿ ನಂತರ ನೆಮ್ಮದಿಗೆ ದಕ್ಕೆ ತರುವ ಕೆಲಸ ಸಹೋದರನಿಂದ ಸಾಧ್ಯತೆ ಇದೆ.
ಮಕರ: ಹಣಕಾಸಿನ ವಿಷಯದಲ್ಲಿ ಉತ್ತಮ ದಿನ. ಹಣಕಾಸಿನ ವ್ಯವಹಾರಗಳಲ್ಲಿ ಜಾಗರೂಕರಾಗಿರುವುದು ಉತ್ತಮ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಸ್ವಂತ ಉದ್ಯೋಗದಲ್ಲಿ ತೊಡಗಿಕೊಂಡವರಿಗೆ ಉತ್ತಮ ಲಾಭ. ಈ ದಿನ ಆರೋಗ್ಯದ ಸಮಸ್ಯೆಗಳಿಂದ ನೀವು ಈಗಾಗಲೇ ಬಳಲುತ್ತಾ ಇದ್ರೆ ಅತೀಯಾದ ನೋವುಗಳು ಕಾಡಲಿದೆ. ಶೀತ ಸಂಬಂಧಪಟ್ಟ ಸಮಸ್ಯೆಗಳು ನಿಮ್ಮನು ಆವರಿಸುತ್ತದೆ. ಪರಸ್ಥಳ ವಾಸ, ದುಡ್ಡಿನ ವಿಷಯದಲ್ಲಿ ಅಲ್ಪ ಲಾಭ. ಈ ದಿನ ಅಧಿಕ ಖರ್ಚು.
ಕುಂಭ ಪರಿಶ್ರಮದಿಂದ ಬಹುದಿನಗಳ ಕನಸು ನನಸಾಗಲಿದೆ. ಮನೆಗೆ ಬಂಧುಗಳ ಆಗಮನ ಸಾಧ್ಯತೆ. ವಿದ್ಯಾರ್ಥಿಗಳಿಗೆ ಮುಂದಿನ ವ್ಯಾಸಂಗದ ಬಗೆಗಿನ ದಂದ್ವ ನಿವಾರಣೆಯಾಗಿ ನಿಖರತೆ ಮೂಡಲಿದೆ. ಈ ದಿನ ದಾಯದಿಗಳ ಕಲಹ ಆಗಲಿದೆ. ಮಕ್ಕಳಿಗೆ ಅನಾರೋಗ್ಯ ಸಮಸ್ಯೆಗಳು, ಸ್ತ್ರೀಯರಿಗೆ ಮತ್ತೆ ಹಣಕಾಸಿನ ವಿಷಯದಲ್ಲಿ ಮಹಾ ಮೋಸ. ಗುರು ಹಿರಿಯರ ಆಶಿರ್ವಾದ ಪಡೆಯಿರಿ ಮತ್ತು ಅವರ ಸೂಚನೆ ಪಾಲಿಸಿರೀ. ಆತ್ಮೀಯ ಜನರಿಂದ ಸಾಕಷ್ಟು ಲಾಭ ಪಡೆಯುತ್ತೀರಿ.
ಮೀನ: ಅದೃಷ್ಟ ನಿಮ್ಮ ಪಾಲಿಗೆ ಇದೆ. ನಿಮ್ಮೆಲ್ಲ ಕೆಲಸ ಕಾರ್ಯಗಳಲ್ಲಿ ಬಂಧುಗಳ ಸಂಪೂರ್ಣ ಸಹಕಾರ ದೊರಕಲಿದೆ. ವಾಹನ ಚಲಾವಣೆಯಲ್ಲಿ ಎಚ್ಚರಿಕೆ. ಕೃಷಿ ಕೆಲಸಗಳು ಸುಗಮವಾಗಿ ಸಾಗುವವು. ಈ ದಿನ ಆರೋಗ್ಯದಲ್ಲಿ ಆಕಸ್ಮಿಕ ಏರು ಪೇರು ಹಣಕಾಸಿನ ವಿಷಯದಲ್ಲಿ ಲಾಭ ಜಾಸ್ತಿ ಆದ್ರೆ ಹೆಚ್ಚು ಖರ್ಚು ಆಗಲಿದೆ. ದುಷ್ಟ ಜನರನ್ನು ಇಂದು ಹತ್ತಿರ ಸಹ ಸೇರಿಸಬೇಡಿ. ಸಾಕಷ್ಟು ತಿರುಗಾಟ ನಂತರ ನಿಮ್ಮ ಕಾರ್ಯ ಸಾಧನೆ ಸಿದ್ದಿ ಆಗಲಿದೆ. ಮನೆಯಲ್ಲಿ ಅಕ್ಕಿ ಮತ್ತು ಒಂದು ಅಚ್ಚು ಬೆಲ್ಲ ತೆಗೆದುಕೊಂಡು ಗೋ ಮಾತೆಗೆ ಆಹಾರ ನೀಡಿರಿ.
PublicNext
27/07/2022 08:13 am