ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇನ್ನು ಒಂದೂವರೆ ವರ್ಷದಲ್ಲಿ ಕೋವಿಡ್ ಸಂಪೂರ್ಣ ಮಾಯವಾಗುತ್ತದೆ:ಕೋಡಿಶ್ರೀ ಭವಿಷ್ಯ!

ಬಳ್ಳಾರಿ: ಕೊರೊನಾ ಜನರ ಜೀವನವನ್ನ ಹಿಂಡಿದೆ. ಆದರೆ, ಕೋವಿಡ್ ಇನ್ನು ಒಂದು ವರ್ಷ ಮಾತ್ರ. ಅದಾದ ಬಳಿಕ ಅದು ಹೋಗಿ ಬಿಡುತ್ತದೆ.ಹೋಗುವಾಗ ಬಹಳ ಕಷ್ಟ ಕೊಡುತ್ತದೆ ಎಂದು ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ಈಗಲೇ ಭವಿಷ್ಯ ನುಡಿದ್ದಾರೆ.

ಕೋವಿಡ್ ಮತ್ತೆ ಬರುತ್ತದೆ ಎಂದು ನಾನು ಮೂರು ತಿಂಗಳ ಹಿಂದೇನೆ ಹೇಳಿದ್ದೆ.ಈ ಹಿನ್ನೆಲೆಯಲ್ಲಿಯೇ ಈಗ ಕೊರೊನಾ ಕೇಸ್ ನಿತ್ಯವೂ ಹೆಚ್ಚಾಗುತ್ತಲೇ ಇವೆ. ಆದರೆ, ಈ ಕೋವಿಡ್ ಬಗ್ಗೆ ಭಯ ಪಡೋ ಅಗತ್ಯ ಇಲ್ಲವೇ ಇಲ್ಲ. ಇದು ಇನ್ನೂ ಒಂದೂವರೆ ವರ್ಷದಲ್ಲಿ ಜಗತ್ತಿನಿಂದಲೇ ಕೋವಿಡ್ ಸಂಪೂರ್ಣ ಹೋಗಿ ಬಿಡುತ್ತದೆ ಎಂದು ಕೋಡಿಮಠದ ಸ್ವಾಮಿಗಳು ಹೇಳಿದ್ದಾರೆ.

ಮನುಷ್ಯನಿಗೆ ಕಷ್ಟ ಬರುತ್ತದೆ. ಆಗ ಆತ ದೇವರ ಬಳಿ ಬುತ್ತಾನೆ. ಆದರೆ, ಕೋವಿಡ್ ಮನುಷ್ಯರಷ್ಟೇ ಅಲ್ಲ. ದೇವರಿಗೂ ಅಂಟಿಕೊಂಡಿತ್ತು.ಅದಕ್ಕೇನೆ ದೇವಸ್ಥಾನಗಳ ಬಾಗಿಲು ಹಾಕಲಾಗಿತ್ತು ಅಂತಲೇ ಸ್ವಾಮಿಜೀ ಹೇಳಿಕೊಂಡಿದ್ದಾರೆ.

Edited By :
PublicNext

PublicNext

11/06/2022 03:34 pm

Cinque Terre

38.44 K

Cinque Terre

8