ಮೇಷ: ಅನ್ಯರ ಅವಲಂಬನೆಯಿಂದ ನಷ್ಟ, ಮತ್ತೊಬ್ಬರ ವಿಷಯದಲ್ಲಿ ಪ್ರವೇಶ ಮಾಡದಿರಿ. ಮಹಿಳೆಯರಿಗೆ ಲಾಭ.
ವೃಷಭ: ತಂದೆಯ ಆರೋಗ್ಯದಲ್ಲಿ ಏರುಪೇರು, ಪರರಿಗೆ ಸಹಾನುಭೂತಿ ತೋರುವಿರಿ, ಆದಾಯಕ್ಕಿಂತ ಖರ್ಚು ಜಾಸ್ತಿ. ಉದ್ಯೋಗ ಕ್ಷೇತ್ರದಲ್ಲಿ ಒತ್ತಡ.
ಮಿಥುನ: ಹಳೆಯ ಮಿತ್ರರ ಭೇಟಿ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ಹಿತಶತ್ರುಬಾಧೆ, ಪರಸ್ತ್ರೀಯಿಂದ ತೊಂದರೆ, ಅಪವಾದ.
ಕಟಕ: ಸಾರ್ವಜನಿಕ ಕಾರ್ಯಕ್ಷೇತ್ರದಲ್ಲಿ ಒತ್ತಡ, ಶ್ರಮಕ್ಕೆ ತಕ್ಕ ಫಲ, ದೂರ ಪ್ರಯಾಣ, ದಾಂಪತ್ಯದಲ್ಲಿ ವಿರಸ, ಅಧಿಕ ಖರ್ಚು.
ಸಿಂಹ: ಕೆಲಸ ಕಾರ್ಯಗಳಲ್ಲಿ ಜಯ, ಧಾರ್ವಿುಕ ವಿಚಾರದಲ್ಲಿ ಆಸಕ್ತಿ, ಕೃಷಿಕರಿಗೆ ಲಾಭ, ಸುಖ ಭೋಜನ, ಮಾತಾಪಿತರಲ್ಲಿ ವಾತ್ಸಲ್ಯ.
ಕನ್ಯಾ: ಅತಿಯಾದ ಆತ್ಮವಿಶ್ವಾಸದಿಂದ ಅಧಿಕ ಧನ ನಷ್ಟ, ದುಡುಕು ಸ್ವಭಾವ, ಆಕಸ್ಮಿಕ ಅಪಘಾತ, ಮನಃಶಾಂತಿ ಇಲ್ಲ.
ತುಲಾ: ಉದ್ಯೋಗದಲ್ಲಿ ತೊಂದರೆ, ತಾಳ್ಮೆ ಇರಲಿ, ಕೆಲಸ ಕಾರ್ಯಗಳಲ್ಲಿ ಅಡ್ಡಿ ಆತಂಕ. ಮಹಿಳಾ ಉದ್ಯೋಗಿಗಳಿಗೆ ಸಮಸ್ಯೆ.
ವೃಶ್ಚಿಕ: ಸಹೋದ್ಯೋಗಿಗಳೊಡನೆ ವೈಮನಸ್ಸು, ವಿಪರೀತ ಖರ್ಚು, ಅಪರಿಚಿತರಿಂದ ಸಹಾಯ. ಸ್ನೇಹಿತನಿಂದ ನಂಬಿಕೆ ದ್ರೋಹ.
ಧನುಸ್ಸು: ಸಂಕಲ್ಪಿಸಿದ ಕಾರ್ಯ ಅನುಕೂಲ, ಅಧಿಕ ತಿರುಗಾಟ, ಆರೋಗ್ಯದಲ್ಲಿ ಏರುಪೇರು, ಚಂಚಲ ಮನಸ್ಸು, ಕಚೇರಿಯಲ್ಲಿ ಪೇಚಿಗೆ ಸಿಲುಕುವ ಸಂದರ್ಭ.
ಮಕರ: ಅನಿರೀಕ್ಷಿತ ದ್ರವ್ಯಲಾಭ, ಋಣವಿಮೋಚನೆ, ವಾಹನ ಯೋಗ, ಅಕಾಲ ಭೋಜನ, ವೃಥಾ ತಿರುಗಾಟ, ಮಿತ್ರರ ಭೇಟಿ.
ಕುಂಭ: ಮಾತಿನಲ್ಲಿ ಹಿಡಿತವಿರಲಿ, ಪರರ ಮಾತಿಗೆ ಕಿವಿ ಕೊಡಬೇಡಿ, ಕೆಲಸದಲ್ಲಿ ಏಕಾಗ್ರತೆ. ಹಿರಿಯ ಅಧಿಕಾರಿಗಳಿಂದ ಹೊಸ ಜವಾಬ್ದಾರಿ.
ಮೀನ: ಸಹೋದ್ಯೋಗಿಗಳಿಂದ ತೊಂದರೆ, ವಿದ್ಯಾರ್ಥಿಗಳಲ್ಲಿ ಗೊಂದಲ, ಅನಾವಶ್ಯಕ ವಿಚಾರಗಳಲ್ಲಿ ಆಸಕ್ತಿ, ರಕ್ತ ಸಂಬಂಧಿ ಕಾಯಿಲೆ.
PublicNext
10/06/2022 07:19 am