ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ : 29.5.2022

ಮೇಷ: ಮೋಸಕ್ಕೆ ಬಲಿಯಾಗುವ ಸಂಭವವಿದೆ, ಹುಷಾರು.ಸ್ನೇಹಿತರು ಸಕಾಲದಲ್ಲಿ ನೆರವು ನೀಡುವರು. ಪರರ ಮಾತಿಗೆ ಕಿವಿ ಕೊಡಬೇಡಿ.

ವೃಷಭ: ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ. ಆರೋಗ್ಯದ ಕುರಿತು ಕಾಳಜಿ ವಹಿಸಿ. ಸಾಲಬಾಧೆ. ಉನ್ನತ ಶಿಕ್ಷಣದಲ್ಲಿ ಯಶಸ್ಸು ದೊರೆಯಲಿದೆ.

ಮಿಥುನ: ಅನೇಕ ವಿಷಯಗಳಲ್ಲಿ ಚರ್ಚೆಮಾಡುವಾಗ ನೀಡುವ ಹೇಳಿಕೆಯಿಂದ ಕಷ್ಟಕ್ಕೆ ಸಿಲುಕುವಿರಿ. ಇಲ್ಲ ಸಲ್ಲದ ಅಪವಾದ ಬಂದೀತು.

ಕಟಕ: ದುಡುಕು ಸ್ವಭಾವ. ಚಂಚಲ ಮನಸ್ಸು. ಕೋರ್ಟ್ ಕೆಲಸ ಕಾರ್ಯಗಳಲ್ಲಿ ಅಡೆತಡೆ. ಸಕಾಲಕ್ಕೆ ಭೋಜನ ಇಲ್ಲದೇ ಆರೋಗ್ಯಕ್ಕೆ ತೊಂದರೆ.

ಸಿಂಹ: ಕೆಲಸದ ಒತ್ತಡ ಜಾಸ್ತಿ. ಕೆಟ್ಟಜನರ ಸಹವಾಸ ಮಾಡಬೇಕಾದೀತು. ಮನಸ್ಸಿಗೆ ಚಿಂತೆ. ಅಪರೂಪದ ವ್ಯಕ್ತಿಯ ಭೇಟಿಯಾಗಲಿದೆ.

ಕನ್ಯಾ: ಬಂಧು ಮಿತ್ರರ ವಿರೋಧ. ವಾಹನ ಅಪಘಾತ. ಮಾತಿನ ಚಕಮಕಿ. ಋಣಬಾಧೆ. ಯಾರನ್ನೂ ಜಾಸ್ತಿ ನಂಬಲು ಹೋಗಬೇಡಿ.

ತುಲಾ: ಅಭಿವೃದ್ಧಿ ಕುಂಠಿತ. ಮಕ್ಕಳಿಗಾಗಿ ಹಣ ವ್ಯಯ. ಆಕಸ್ಮಿಕ ಖರ್ಚು. ಅಲ್ಪ ಕಾರ್ಯಸಿದ್ದಿ. ಕುಟುಂಬದಲ್ಲಿ ಪ್ರೀತಿಯ, ಸಂತಸದ ಕ್ಷಣಗಳು.

ವೃಶ್ಚಿಕ: ಅನಿರೀಕ್ಷಿತ ದ್ರವ್ಯಲಾಭ. ಓದಿನಲ್ಲಿ ಹೆಚ್ಚು ಸಮಯ ಕಳೆಯುವಿರಿ. ವಾಹನ ಮಾರಾಟದಿಂದ ಲಾಭ. ವ್ಯಾಪಾರದಲ್ಲಿ ಅಧಿಕ ಪ್ರಗತಿ.

ಧನುಸ್ಸು: ವಿನಾಕಾರಣ ದ್ವೇಷ. ವಾಸಸ್ಥಳದಲ್ಲಿ ತೊಂದರೆ. ಹಿತೈಷಿಗಳ ಬೆಂಬಲ. ನೆಮ್ಮದಿ ಇಲ್ಲದ ಜೀವನ. ಆಲಸ್ಯ ಮನೋಭಾವ.

ಮಕರ: ಸಕಲರೊಡನೆ ಪ್ರೀತಿಯಿಂದ ಇರುವಿರಿ. ಸ್ತ್ರೀಯರಿಂದ ಸಹಾಯ. ಅಧಿಕ ತಿರುಗಾಟ. ವಿವಾಹ ಯೋಗ. ಶ್ರಮಕ್ಕೆ ತಕ್ಕ ಫಲ ದೊರೆಯುವುದು.

ಕುಂಭ: ಅಲೆದಾಟ. ಸರ್ಕಾರಿ ಕೆಲಸಗಳಲ್ಲಿ ವಿಳಂಬ. ಮಿತ್ರರಿಂದ ವಂಚನೆ. ಸ್ವಂತ ಉದ್ಯಮಿಗಳಿಗೆ ಲಾಭ. ಮನಃಶಾಂತಿ ಸಿಗಲಿದೆ.

ಮೀನ: ನಿಮ್ಮ ವಿರುದ್ಧ ನಡೆದ ಕೋರ್ಟ್ ವಿವಾದಕ್ಕೆ ಅಪಜಯ. ಕಾರ್ಯ ನಿರ್ವಿಘ್ನ. ರಾಜ ವಿರೋಧ. ಮಾನಸಿಕ ಒತ್ತಡ, ಶತ್ರು ಬಾಧೆ.

Edited By : Nirmala Aralikatti
PublicNext

PublicNext

29/05/2022 07:40 am

Cinque Terre

24.12 K

Cinque Terre

0