ಮೇಷ ರಾಶಿ: ದಂಪತಿಗಳಿಗೆ ಸಂತಾನದ ಯೋಚನೆ,ಮದುವೆ ಕಾರ್ಯಗಳಲ್ಲಿ ಅಡತಡೆ ಸಂಭವ, ವಿದೇಶಕ್ಕೆ ಹೋಗುವ ಕನಸು ನನಸಾಗುವ ದಿನ, ಲಾಭದ ನಿರೀಕ್ಷೆ, ವಿದೇಶಿ ವ್ಯವಹಾರಗಳನ್ನು ಮಾಡುವವರಿಗೆ ಲಾಭ, ಕುಟುಂಬದ ಮಹಿಳಾ ಸದಸ್ಯರೊಂದಿಗೆ ಮನಸ್ತಾಪ, ಸ್ವೀಟ್ ಮಾರ್ಟ್, ಕಾಂಡಿಮೆಂಟ್ಸ್ ,ಬೇಕರಿ ವ್ಯಾಪಾರಸ್ಥರಿಗೆ ಲಾಭ.
ವೃಷಭ ರಾಶಿ: ಸಾಲ ತಿಳಿಸುವುದರ ಬಗ್ಗೆ ಚಿಂತನೆ, ಕಂಕಣಬಲ ಸಾಧ್ಯತೆ, ಪ್ರೇಮಿಗಳ ಮನಸ್ತಾಪ ಬಗೆಹರಿಯುವ ಸಾಧ್ಯತೆ, ಸಿದ್ದ ಉಡುಪು ವ್ಯಾಪಾರಸ್ಥರಿಗೆ ಲಾಭ, ಬ್ರೋಕರ್ ಕೆಲಸವನ್ನು ಮಾಡುವವರು ಆರ್ಥಿಕ ನಷ್ಟ, ಮಣ್ಣಿನ ಅಲಂಕಾರಿಕ ಗೊಂಬೆ ತಯಾರಿಸುವವರಿಗೆ ಬೇಡಿಕೆ ಹೆಚ್ಚಾಗಲಿದೆ, ಕಲಾವಿದರಿಗೆ ಪ್ರೋತ್ಸಾಹ ಮತ್ತು ಆರ್ಥಿಕ ಚೇತರಿಕೆ.
ಮಿಥುನ ರಾಶಿ: ಸ್ಥಿರಾಸ್ತಿ ಖರೀದಿಸಿ ಕೊಳ್ಳೋರಿಗೆ ಲಾಭ, ಉಪನ್ಯಾಸಕರಿಗೆ ಉತ್ತಮ ಸ್ಥಾನ, ಸಂಶೋಧನಾ ಕ್ಷೇತ್ರದಲ್ಲಿ ಹೊಸ ಆಶಾಕಿರಣ ಗೋಚರಿಸುತ್ತದೆ, ಕುಟುಂಬದಲ್ಲಿ ಆಸ್ತಿ ವಿಚಾರಕ್ಕಾಗಿ ಮುಸುಕಿನ ಗುದ್ದಾಟ ನಡೆಯಬಹುದು, ಮದುವೆ ವಿಳಂಬ ಸಾಧ್ಯತೆ, ಗಂಡ ಹೆಂಡತಿ ಒಂದಾಗುವ ಸಾಧ್ಯತೆ, ಪರಸ್ತ್ರೀಯ ರಿಂದ ತೊಂದರೆ ಸಂಭವ.
ಕರ್ಕಾಟಕ ರಾಶಿ: ಪುರಾತನ ವಸ್ತುಗಳ ಮಾರಾಟ ಮಾಡುವವರ ಆದಾಯ ಹೆಚ್ಚುತ್ತದೆ,ವಾಹನಗಳ ಬಿಡಿಭಾಗ ಮಾರಾಟ ಮಾಡುವವರ ವ್ಯವಹಾರದಲ್ಲಿ ಅಧಿಕ ಲಾಭ, ಶೇರುಮಾರುಕಟ್ಟೆಯ ಮಧ್ಯವರ್ತಿಗಳಿಗೆ ಆದಾಯ ಹೆಚ್ಚಾಗಲಿದೆ, ಮಾಧ್ಯಮ ಮಿತ್ರರಿಗೆ ಕೆಲವು ಮೂಲಗಳಿಂದ ಧನ ಲಾಭ, ಕೃಷಿಕರ ಆದಾಯದಲ್ಲಿ ಗಣನೀಯ ವ್ಯತ್ಯಾಸ ಸಂಭವ, ಸಂತಾನದ ಸಮಸ್ಯೆ ಕಾಡಲಿವೆ, ಕೆಲವರಿಗೆ ಮದುವೆ ವಿಳಂಬದಿಂದ ಬೇಸರ, ಪ್ರೇಮಿಗಳ ಮಧ್ಯೆ ಬಿರುಕು.
ಸಿಂಹ ರಾಶಿ: ಮಂಡಿನೋವು ಎದುರಿಸಬೇಕಾದೀತು, ರಂಗಭೂಮಿ ಕಲಾವಿದರಿಗೆ ಕೆಲವು ಸಂಸ್ಥೆಗಳಿಂದ ಗೌರವ ಮನ್ನಣೆ, ವ್ಯಾಪಾರಸ್ಥರಿಗೆ ಮಂದಗತಿಯ ಆರ್ಥಿಕ ಸ್ಥಿತಿ, ರಿಯಲ್ ಎಸ್ಟೇಟ್ ಉದ್ಯಮದಾರರಿಗೆ ಆರ್ಥಿಕ ಸ್ಥಿತಿಯಲ್ಲಿ ಹಿಂಜರಿಕೆ ಇರುವುದಿಲ್ಲ, ಕೋರ್ಟ್ ಕಚೇರಿ ಸಂಬಂಧ ಕೆಲಸಗಳಲ್ಲಿ ಮುನ್ನಡೆ ಇರುತ್ತದೆ, ಮದುವೆ ಚರ್ಚೆ ನಡೆಯಲಿದೆ, ಪ್ರೇಮಿಗಳ ಕುಟುಂಬ ಸದಸ್ಯರಿಂದ ಮದುವೆ ಗ್ರೀನ್ ಸಿಗ್ನಲ್ ದೊರೆಯಲಿದೆ.
ಕನ್ಯಾ ರಾಶಿ: ಇಂದು ಚೈತನ್ಯ ಶೀಲರಾಗಿ ಕೆಲಸಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ, ವಿದ್ಯುತ್, ಇಂಧನ, ಸಾರಿಗೆ ಇಲಾಖೆಯಲ್ಲಿ ಕೆಲಸ ಮಾಡುವವರು ಎಚ್ಚರ ವಹಿಸಿರಿ, ಎಲ್ಲಾ ವ್ಯಾಪಾರಸ್ಥರಿಗೆ ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ, ಉದ್ಯಮಿಗಳ ಕಾರ್ಮಿಕರ ಸಮಸ್ಯೆ ಪರಿಹಾರ, ಸರ್ಕಾರಿ ಅಧಿಕಾರಿಗಳಿಂದ ಸಹಾಯ ದೊರೆತು ನಿಮ್ಮ ವ್ಯವಹಾರಗಳ ಅಡಚಣೆ ನಿವಾರಣೆ, ಗಂಡ ಹೆಂಡತಿ ಮನಸ್ತಾಪದಿಂದ ಕುಟುಂಬ ನ್ಯಾಯಾಲಯ ಮೊರೆ ಹೋಗುವ ಸಾಧ್ಯತೆ, ಮಕ್ಕಳಿಂದ ಮನಸ್ತಾಪ, ಮಗಳ ಕುಟುಂಬದ ಬಗ್ಗೆ ಚಿಂತನೆ.
ತುಲಾ ರಾಶಿ: ಪತಿ-ಪತ್ನಿ ಏಕೋ ಮನೋಭಾವನೆಯಿಂದ ಸಂಸಾರ ಪ್ರಾರಂಭ, ಕೆಲವು ಅಧಿಕಾರಿ ವರ್ಗಗಳಿಗೆ ವ್ಯಕ್ತಿಗಳಿಂದ ಕಿರುಕುಳ ಬರಬಹುದು, ಆಪ್ತ ಸ್ನೇಹಿತನ ದ್ವಂದ್ವ ನಿಲುವಿನಿಂದ ವ್ಯವಹಾರದಲ್ಲಿ ನಷ್ಟ, ಸಂಗಾತಿಗಾಗಿ ಶೃಂಗಾರ ಆಭರಣಗಳ ಖರೀದಿ, ವ್ಯಾಪಾರಸ್ಥರಿಗೆ ಆರ್ಥಿಕ ಸ್ಥಿತಿ ಸಾಮಾನ್ಯ, ಖರ್ಚು ಅಧಿಕ ಸಂಭವ, ಸ್ಥಿರಾಸ್ತಿ ಮಾರಾಟ ಮಾಡುವಾಗ ದ್ವಂದ್ವ ನಿಲುವು.
ವೃಶ್ಚಿಕ ರಾಶಿ: ಉದ್ಯೋಗ ಕ್ಷೇತ್ರದಲ್ಲಿ ಸ್ವಲ್ಪಮಟ್ಟಿಗೆ ಹೊಂದಾಣಿಕೆ ಮತ್ತು ಕಾಯುವುದು ಉತ್ತಮ, ಸರ್ಕಾರಿ ಉದ್ಯೋಗ ಪಡೆಯುವುದಕ್ಕಾಗಿ ಶ್ರಮವಹಿಸಬೇಕು, ನಿವೇಶನ ಖರೀದಿಸುವ ಯೋಗವಿದೆ, ರಾಜಕೀಯ ವ್ಯಕ್ತಿಗಳಿಗೆ ಅನುಯಾಯಿಗಳಿಂದ ತೊಂದರೆ ಸಂಭವ,ಶೃಂಗಾರ ಸಾಮಗ್ರಿಗಳ ಸಗಟು ವ್ಯಾಪಾರಸ್ಥರಿಗೆ ಹೆಚ್ಚಿನ ಲಾಭ ನಿರೀಕ್ಷೆ, ಸರಕುಸಾಗಾಣಿಕೆ ವ್ಯವಹಾರದಲ್ಲಿ ಆದಾಯ ದ್ವಿಗುಣ.
ಧನಸು ರಾಶಿ: ಕಮಿಷನ್ ಏಜೆಂಟ್ ವ್ಯವಹಾರಸ್ಥರಿಗೆ ಲಾಭದ ನಿರೀಕ್ಷೆ, ವ್ಯಾಪಾರಸ್ಥರಿಗೆ ಆರ್ಥಿಕ ಸಾಮಾನ್ಯವಾಗಿದೆ, ಉದ್ಯೋಗಿಗಳಿಗೆ ಹಿತಶತ್ರುಗಳಿಂದ ತೊಂದರೆ ಸಂಭವ, ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಮಾರಾಟ ಮಾಡುವವರಿಗೆ ಹೆಚ್ಚಿನ ಲಾಭ, ಹೊಸ ಉದ್ಯಮ ಪ್ರಾರಂಭದ ಬಗ್ಗೆ ಮಾತುಕತೆ ಪ್ರಾರಂಭ, ಮಕ್ಕಳು ಮಾಡಿರುವ ಕೆಟ್ಟ ಕೆಲಸಕ್ಕೆ ಕಾನೂನು ಮೆಟ್ಟಲು ಎದುರಿಸಬೇಕಾದೀತು, ಆಸ್ತಿಯ ವಿಚಾರದ ಕೋರ್ಟ್ ಕೆಸ್ ಜಯ ಸಂಭವ.
ಮಕರ ರಾಶಿ: ಗೌರವಾನ್ವಿತ ವ್ಯಕ್ತಿಗಳ ಜನಸಂಪರ್ಕ, ಅಪರಿಚಿತ ಮಹಿಳೆರೊಂದಿಗೆ ವ್ಯವಹಾರ ಬೇಡ, ಚೀಟಿ ವ್ಯವಹಾರದಲ್ಲಿ ಮೋಸ ಸಾಧ್ಯತೆ,ಆಸ್ತಿ ವಿಚಾರಕ್ಕಾಗಿ ಬಾಂಧವರ ನಡುವೆ ಉತ್ತಮ ಸಂಪರ್ಕ ಹೆಚ್ಚಾಗುತ್ತದೆ, ವೃತ್ತಿ ಕ್ಷೇತ್ರದಲ್ಲಿ ಹೆಚ್ಚಿನ ಒತ್ತಡ ಮತ್ತು ಕಿರುಕುಳ, ಭೂ ವ್ಯವಹಾರ ಉದ್ಯಮದಲ್ಲಿ ಲಾಭದ ನಿರೀಕ್ಷೆ, ಆರೋಗ್ಯದಲ್ಲಿ ಏರುಪೇರು ಸಂಭವ.
ಕುಂಭ ರಾಶಿ: ಕುಟುಂಬದ ಸದಸ್ಯರೆಲ್ಲರೂ ಒಟ್ಟುಗೂಡಿಕೆ, ಸ್ವಂತ ಉದ್ಯಮ ಪ್ರಾರಂಭದ ಬಗ್ಗೆ ಚಿಂತನೆ, ದಾಂಪತ್ಯದಲ್ಲಿ ಬಿರುಕು ಸಂಭವ, ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಇರುವ ಇಂಜಿನಿಯರುಗಳಿಗೆ ಉತ್ತಮ ಬೇಡಿಕೆ, ಉತ್ತಮ ಲಾಭ ಗಳಿಸುವಿರಿ, ವಿದೇಶ ಪ್ರವಾಸ ಅತಂತ್ರ, ಹಿತಶತ್ರುಗಳ ಕಿರುಕುಳ ಸಂಭವ, ಮಾತಾ ಪಿತೃ ಅನಾರೋಗ್ಯ ದಿಂದ ಮನಸ್ತಾಪ, ಸಾಲಗಾರರಿಂದ ಮನಸ್ತಾಪ.
ಮೀನ ರಾಶಿ: ಆರ್ಥಿಕ ಸಂಪನ್ಮೂಲ ಕ್ರೂಢೀಕರಣ, ಉದ್ಯೋಗ ಕ್ಷೇತ್ರದಲ್ಲಿ ಏರಿಳಿತ ಸಂಭವ, ಭೂವ್ಯವಹಾರ ಸಂಬಂಧಿಸಿದ ಕಾರ್ಯಗಳಲ್ಲಿ ಲಾಭದ ನಿರೀಕ್ಷೆ, ಮಹಿಳೆಯರ ಜೊತೆ ವಾಗ್ವಾದ ಬೇಡ, ಗರ್ಭಿಣಿಯರು ಜಾಗೃತಿ ವಹಿಸಿ, ಜಮೀನು ಖರೀದಿಸುವ ಸಾಧ್ಯತೆ, ಉಪನ್ಯಾಸಕರಿಗೆ ಲಾಭದ ನಿರೀಕ್ಷೆ, ಸಂಬಂಧಿಕರ ಮೂಲಗಳಿಂದ ಆಸ್ತಿ ಸಿಗುವ ಸಾಧ್ಯತೆ, ಶುಭಮಂಗಳ ಕಾರ್ಯಗಳಲ್ಲಿ ಅನುಕೂಲ, ಬ್ಯೂಟಿ ಪಾರ್ಲರ್, ಹಾರ್ಡ್ವೇರ್, ಸಲೂನ್, ಸ್ಪ, ಸ್ಟೇಷನರಿ, ಕಾಂಡಿಮೆಂಟ್ಸ್, ನಡೆಸುವವರಿಗೆ ಉತ್ತಮ ಧನಲಾಭ.
PublicNext
06/02/2022 08:48 am