ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ : 01.11.2021

ಮೇಷ: ಪ್ರಯತ್ನಕ್ಕೆ ಪ್ರತಿಫಲ. ಬಹುದಿನಗಳಿಂದ ನಿರೀಸಿದ ಪದವಿ ಪ್ರಾಪ್ತಿ. ಗೆಳೆಯರಿಂದ ಮೋಸ. ಆತ್ಮಬಲದಿಂದ ಕೆಲಸಕ್ಕೆ ಯಶಸ್ಸು.

ವೃಷಭ: ಹಣದ ವಿಪರೀತ ಖರ್ಚು. ಮಾನಸಿಕವಾಗಿ ಅಶಾಂತಿ ವಿಪರೀತ ಕಾಡಲಿದೆ. ದಿನಾಂತ್ಯದಲ್ಲಿ ಆತ್ಮೀಯರ ಭೇಟಿ ಮಾಡುವಿರಿ.

ಮಿಥುನ: ನಿಮ್ಮ ಸಮಯಸ್ಫೂರ್ತಿಯಿಂದ ಸಮಸ್ಯೆಗೆ ಪರಿಹಾರ ನೀಡಿದ ಸಮಾಧಾನ. ವ್ಯಾಪಾರದಲ್ಲಿ ಅಧಿಕ ಲಾಭ. ಮನೆಯಲ್ಲಿ ಸಡಗರ.

ಕಟಕ: ಮಕ್ಕಳ ಅವಿಧೇಯತೆ ನೋವುಂಟು ಮಾಡುವುದು. ಸಂಗಾತಿಯಿಂದ ಸಮಾಧಾನ. ದೃಢ ನಿರ್ಧಾರ ಕೈಗೊಳ್ಳಲು ಗೊಂದಲ.

ಸಿಂಹ: ಫಲಿತಾಂಶದ ಬಗ್ಗೆ ಚಿಂತೆ ಬೇಡ, ಪ್ರಯತ್ನವನ್ನು ಜಾರಿಯಲ್ಲಿಡಿ. ಹಿತಶತ್ರುಗಳಿಂದ ತೊಂದರೆ. ಕುಟುಂಬದಲ್ಲಿ ಅಸಮಾಧಾನ.

ಕನ್ಯಾ: ಆತ್ಮೀಯ ಮಿತ್ರರು ಶತ್ರುವಾಗಿ ಪರಿವರ್ತನೆ. ನಂಬಿದವರಿಂದ ಮೋಸ. ವಿದ್ಯಾರ್ಥಿಗಳಿಗೆ ಶುಭದಿನ. ದಿನಾಂತ್ಯದಲ್ಲಿ ಶುಭಸುದ್ದಿ.

ತುಲಾ: ಅನಗತ್ಯವಸ್ತುಗಳಿಗಾಗಿ ದುಂದುವೆಚ್ಚ. ಬರಬೇಕಾಗಿದ್ದ ಹಣ ಬಾರದೆ ನಿರಾಸೆ. ಕುಟುಂಬದ ಪರ್ಯಾಯ ವ್ಯವಸ್ಥೆಗೆ ಚಿಂತನೆ.

ವೃಶ್ಚಿಕ: ಸಮಯಸಾಧಕರಿಂದ ಅಂತರವಿರಲಿ. ನಂಬಿದವರಿಂದಲೇ ಮೋಸ. ಸಂಗೀತಗಾರರಿಗೆ ವಿಶೇಷ ವೇದಿಕೆ ಲಭ್ಯ. ಸಂಜೆ ಆಯಾಸ.

ಧನುಸ್ಸು: ಕಷ್ಟಪಟ್ಟರೆ ಸುಖ ಎನ್ನುವುದಕ್ಕೆ ಬದ್ಧರಾಗಿ. ನಟರಿಗೆ ಬೆಂಬಲ. ಸಾಮಾಜಿಕವಾಗಿ ಕಿರಿಕಿರಿ. ಉನ್ನತ ವಿದ್ಯಾಭ್ಯಾಸದಲ್ಲಿ ಸಾಧನೆ.

ಮಕರ: ಯಾಂತ್ರಿಕ ಜೀವನದಿಂದ ವಿಮುಖರಾಗಿ. ದೂರದೂರಿಗೆ ಪ್ರಯಾಣ. ಹಳೆಯ ಮಿತ್ರರ ಸಮಾಗಮ. ಧಾರ್ಮಿಕ ಕ್ಷೇತ್ರದ ಭೇಟಿ.

ಕುಂಭ: ವೈದ್ಯರ ಸಲಹೆಯನ್ನು ಶಿಸ್ತಿನಿಂದ ಪಾಲಿಸಿ. ನಿಮಗೆ ಸಂಬಂಧವಿರದ ವಿಷಯದಿಂದ ಅಂತರವಿರಲಿ. ಮಕ್ಕಳಿಂದ ಹೆಮ್ಮೆ.

ಮೀನ: ನಿಮ್ಮ ಬಗ್ಗೆ ಟೀಕೆ ಮಾಡುವವರನ್ನು ನಿರ್ಲಕ್ಷಿಸಿ. ವಿಶೇಷ ಉದ್ದಿಮೆ ಆರಂಭಕ್ಕೆ ನಿರ್ಧಾರ. ಮಗನ ಮದುವೆಗೆ ಅನುಕೂಲ.

Edited By : Nirmala Aralikatti
PublicNext

PublicNext

01/11/2021 07:14 am

Cinque Terre

15.26 K

Cinque Terre

0