ಮೇಷ: ಸ್ನೇಹಿತರಿಂದ ಸಹಾಯ ಅಪೇಕ್ಷಿಸದೆ ಆತ್ಮಾಭಿಮಾನದಿಂದ ಇರಿ. ವ್ಯರ್ಥ ಧನಹಾನಿ. ದಿನಾಂತ್ಯದಲ್ಲಿ ಬಂಧುಗಳ ಆಗಮನ.
ವೃಷಭ: ಮನೆಯಲ್ಲಿ ಆಹ್ಲಾದಕರ ವಾತಾವರಣ. ಕೈಗೊಂಡ ಕೆಲಸದಲ್ಲಿ ಕಾರ್ಯಸಿದ್ಧಿ. ಹಿತಕರ ವಿದ್ಯಮಾನಗಳು ನಡೆಯುತ್ತವೆ.
ಮಿಥುನ: ಸಾಲಗಾರರಿಂದ ಕಿರಿಕಿರಿ ಉಂಟಾಗಬಹುದು. ನಿಮ್ಮ ಪ್ರತಿಭೆ ಪ್ರದರ್ಶನಕ್ಕೆ ಇದು ಸಕಾಲ. ಅವ್ಯಕ್ತ ಭೀತಿ. ಕುಲದೇವರನ್ನು ಸ್ಮರಿಸಿ.
ಕಟಕ: ಮಾಡದ ತಪ್ಪಿಗೆ ಜೀವನದಲ್ಲಿ ಅಪವಾದಗಳು ಬೆನ್ನತ್ತಿಯಾವು. ಕಾರ್ಯಸಾಧನೆಯ ಸಾಧ್ಯತೆ ಕಡಿಮೆ. ಆರೋಗ್ಯದಲ್ಲಿ ಚೇತರಿಕೆ.
ಸಿಂಹ: ಕುಟುಂಬದಲ್ಲಿ ಮನಸ್ತಾಪ. ಸ್ಪರ್ಧಾಳುಗಳಿಗೆ ಅಂತಿಮ ಹಂತದಲ್ಲಿ ಸೋಲು. ಅವಿವಾಹಿತರಿಗೆ ವಿವಾಹ ಪ್ರಯತ್ನದಲ್ಲಿ ಯಶ.
ಕನ್ಯಾ: ವ್ಯಾಪಾರ ಉದ್ಯೋಗದಲ್ಲಿ ನಿರೀಕ್ಷಿತ ಪ್ರಗತಿ. ವಿಶೇಷ ಅಧಿಕಾರ ಪ್ರಾಪ್ತಿ. ಮನೋಧೈರ್ಯ. ಬಂಧು ಮಿತ್ರರ ಸಹಾಯ ಸಿಗುವುದು.
ತುಲಾ: ಟೀಕಾಕಾರರಿಗೆ ಕಾರ್ಯವೈಖರಿಯಿಂದ ಉತ್ತರ ಕೊಡುವಿರಿ. ಭೂ ವ್ಯವಹಾರದಲ್ಲಿ ಮೋಸ ಹೋಗುವ ಸಾಧ್ಯತೆ. ಧನ ನಷ್ಟ.
ವೃಶ್ಚಿಕ: ನೋವು ಉಂಟುಮಾಡುವ ಘಟನೆಗಳು ನಡೆಯಬಹುದು. ವಿದ್ಯಾರ್ಥಿಗಳಿಗೆ ಯಶಸ್ಸು. ಪ್ರತಿಭಾನ್ವಿತರಿಗೆ ಉತ್ತಮ ಅವಕಾಶ.
ಧನುಸ್ಸು: ತೃತೀಯದ ಗುರುವಿನಿಂದ ಆಸ್ತಿ ವಿವಾದ ಇತ್ಯರ್ಥ. ಆರೋಗ್ಯ ಸಮಸ್ಯೆ. ವೈದ್ಯರ ಸಲಹೆ ಪಾಲಿಸಿ. ಗಾಯಕರಿಗೆ ಧನಲಾಭ.
ಮಕರ: ವ್ಯಾಪಾರಸ್ಥರಿಗೆ ಅನಿರೀಕ್ಷಿತ ಬೆಳವಣಿಗೆ. ಸರ್ಕಾರಿ ಕ್ಷೇತ್ರಗಳಲ್ಲಿ ಕಾರ್ಯಸಿದ್ದಿ. ನಿರುದ್ಯೋಗಿಗಳಿಗೆ ಉದ್ಯೋಗದ ಆಶಾಕಿರಣ.
ಕುಂಭ: ಸಹೋದ್ಯೋಗಿಗಳು ನಿಮ್ಮೊಂದಿಗೆ ಪ್ರೀತಿ-ವಿಶ್ವಾಸ ದಿಂದ ನಡೆದುಕೊಳ್ಳುತ್ತಾರೆ. ಸಂಗಾತಿಯಿಂದ ಆತ್ಮವಿಶ್ವಾಸಕ್ಕೆ ಪೆಟ್ಟು.
ಮೀನ: ದ್ವಾದಶ ಗುರುವಿನಿಂದ ವೈಫಲ್ಯ ಕಾಡಬಹುದು. ಹಿರಿಯರ ಮಾರ್ಗದರ್ಶನ ಪಡೆಯಿರಿ. ಅನಿರೀಕ್ಷಿತ ಧನ ನಷ್ಟ ಆಗಬಹುದು.
PublicNext
31/10/2021 07:05 am