ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ : 9.10.2021

ಮೇಷ: ನೆನಪು ಮರುಕಳಿಸುತ್ತದೆ. ವ್ಯಾಪಾರಸ್ಥರಿಗೆ ಲಾಭದ ಸಾಧ್ಯತೆ. ದುಡುಕಿನ ಸ್ವಭಾವದಿಂದ ನೆಮ್ಮದಿ ಹಾಳಾಗಬಹುದು.

ವೃಷಭ: ನಿಮ್ಮ ಹೊಸ ಯೋಜನೆಯನ್ನು ಕಾರ್ಯಗತಗೊಳಿಸಿ. ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಳ್ಳಿ.

ಮಿಥುನ: ಸಾಮಾಜಿಕವಾಗಿ ತಾಳ್ಮೆಯಿಂದ ವರ್ತಿಸಿ. ರಾಜಕಾರಣಿಗಳಿಗೆ ನಿರಾಶೆ. ಬಡ್ತಿ ನಿರೀಕ್ಷೆಯಲ್ಲಿರು ವವರಿಗೆ ದಿನಾಂತ್ಯದಲ್ಲಿ ಸಿಹಿಸುದ್ದಿ.

ಕಟಕ: ಆಲೋಚನೆಗಳ ಮೇಲೆ ಸ್ನೇಹಿತೆಯ ಪ್ರಭಾವ. ಖರೀದಿಯಲ್ಲಿ ಮೋಸ ಹೋಗುವ ಸಾಧ್ಯತೆ. ವ್ಯಾಪಾರಿಗಳಿಗೆ ನಷ್ಟವಾದೀತು.

ಸಿಂಹ: ಪ್ರಮುಖ ತೀರ್ಮಾನ ತೆಗೆದುಕೊಳ್ಳುವಲ್ಲಿ ಗೊಂದಲ. ಹೊಸ ಮನೆ ಖರೀದಿಗೆ ಚಾಲನೆ. ಸಂಗಾತಿಯಿಂದ ವಿಶೇಷ ಸಹಕಾರ.

ಕನ್ಯಾ: ನಿಮ್ಮ ದುಡುಕುತನದಿಂದ ಉತ್ತಮ ಅವಕಾಶ ಕೈ ತಪ್ಪುವ ಸಾಧ್ಯತೆ. ಹಿರಿಯರ ಸಲಹೆ ಮೇರೆಗೆ ಕುಟುಂಬ ವಿವಾದ ಅಂತ್ಯ.

ತುಲಾ: ಕಚೇರಿಯಲ್ಲಿ ಹಸನ್ಮುಖಿಗಳಾಗಿ ಇರಿ. ಉತ್ತಮ ಅನುಭವ ಸಿಗಲಿದೆ. ಖಾಸಗಿ ಉದ್ಯೋಗಿಗಳ ಬಹುನಿರೀಕ್ಷಿತ ಕನಸು ನನಸು.

ವೃಶ್ಚಿಕ: ಸಹವರ್ತಿಗಳನ್ನು ನಿರ್ಲಕ್ಷಿಸಬೇಡಿ. ಸಹನೆಯಿಂದ ವರ್ತಿಸಿ. ಸಾರ್ವಜನಿಕವಾಗಿ ಸನ್ಮಾನ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.

ಧನುಸ್ಸು: ಅನವಶ್ಯಕ ಖರ್ಚು ಎದುರಾಗಬಹುದು. ಸಾಲಗಾರರಿಂದ ತೊಂದರೆ. ಅಧಿಕಾರ-ಪ್ರಾಪ್ತಿಯಲ್ಲಿ ಆತಂಕ. ಸಂಜೆ ಸಿಹಿಸುದ್ದಿ.

ಮಕರ: ಜಟಿಲ ಸಮಸ್ಯೆಗೆ ಹಿರಿಯರಿಂದ ಪರಿಹಾರ. ರಾಜಕೀಯದಲ್ಲಿ ಇರುವವರಿಗೆ ಅಧಿಕಾರ-ಪ್ರಾಪ್ತಿ. ಹಾಡುಗಾರರಿಗೆ ವಿಶೇಷ ದಿನ.

ಕುಂಭ: ಸಹೋದರರೊಂದಿಗೆ ಮನಸ್ತಾಪ. ಕೃಷಿಕರಿಗೆ ಧನಲಾಭ ಸಾಧ್ಯತೆ. ಪರಿಶ್ರಮಕ್ಕೆ ತಕ್ಕ ಪ್ರತಿಫಲ. ಆಧ್ಯಾತ್ಮಿಕ ವ್ಯಕ್ತಿಗಳ ಭೇಟಿ.

ಮೀನ: ಅಪಪ್ರಚಾರ. ಸಹೋದ್ಯೋಗಿಗಳಿಂದ ಸಹಾಯ. ಅಧಿಕಾರ ಕಳೆದುಕೊಳ್ಳುವ ಭೀತಿ. ಸ್ತ್ರೀಯರಿಗೆ ಲಾಭ. ಸಂಜೆ ಅಶುಭ ಸುದ್ದಿ.

Edited By : Nirmala Aralikatti
PublicNext

PublicNext

09/10/2021 07:10 am

Cinque Terre

19.89 K

Cinque Terre

0