ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನಭವಿಷ್ಯ: 03 ಆಗಸ್ಟ್ 2021

ಮೇಷ ರಾಶಿ:

ಗುರುಸ್ವಾಮಿ ಕುಂಭ ರಾಶಿಯಲ್ಲಿ ಸಂಚರಿಸುವಾಗ ಈ ರಾಶಿಗೆ 11ನೇ ಸ್ಥಾನದಲ್ಲಿ ಇರುವನು, ಈ ಸಮಯದಲ್ಲಿ ಕೈಹಿಡಿದ ಕಾರ್ಯಗಳಲ್ಲಿ ಗೆಲುವು, ಕುಟುಂಬದಲ್ಲಿ ಶಾಂತಿ, ಆರೋಗ್ಯದಲ್ಲಿ ಸುಧಾರಣೆ, ಶತ್ರು ದ್ವೇಷ ನಿವಾರಣೆ, ಸಾಲದ ಋಣಭಾದೆ ಕಡಿಮೆಯಾಗಲಿದೆ, ನಂಬಿದವರ ಕಡೆಯಿಂದ ಸುಖ-ಶಾಂತಿ ಸಿಗುವ ಸಂಭವ, ಅನ್ಯ ಜನರಿಂದ ಸಮಸ್ಯೆ, ತಂದೆ ಮತ್ತು ತಂದೆ ಮಗ ನಡುವಿನ ದ್ವೇಷ ಉಲ್ಬಣ, ವಿವಾಹ ಯೋಗ ಕೂಡಿ ಬರಲಿದೆ, ವ್ಯಾಪಾರ-ವ್ಯವಹಾರದಲ್ಲಿ ಅಭಿವೃದ್ಧಿ, ನಂಬಿದ ಮೂಲಗಳಿಂದ ಧನಾಗಮನ.

ವೃಷಭ ರಾಶಿ:

ಗುರುಸ್ವಾಮಿ ದಶಮ ಸ್ಥಾನದಲ್ಲಿರುವುದರಿಂದ, ಈ ರಾಶಿಯವರಿಗೆ ನಿತ್ಯ ಜೀವನದಲ್ಲಿ ಬಹಳ ಏರುಪೇರು ಸಂಭವ, ಮನಸು ಚಂಚಲ, ಸದಾ ತಿರುಗಾಟ, ದಾಂಪತ್ಯ ಜೀವನದಲ್ಲಿ ನೆಮ್ಮದಿ ಕಡಿಮೆ, ಹೊಸ ಹೊಸ ವ್ಯವಹಾರ ವಹಿವಾಟ ಅನ್ವೇಷಿಸುತ್ತಾ ಇರುವರು, ಆದರೆ ಫಲಶ್ರುತಿ ಕಾಣಲಾರರು, ಹಣದ ಆದಾಯದ ಕೊರತೆ ಕಾಣುವರು, ಪತಿ-ಪತ್ನಿಯಲ್ಲಿ ವಿರಸ, ಅನಾವಶ್ಯಕ ಸಂಚಾರ, ವಿವಾದ ವಾಗ್ವಾದ ಕಲಹ ಕಂಡು ಬರುವ ಸಂಭವ, ಯತ್ನಿಸಿದ ಕಾರ್ಯದಲ್ಲಿ ವಿಳಂಬ, ಪುರುಷರಿಂದ ಸಮಸ್ಯೆ, ಮದುವೆ ಕಾರ್ಯ ಅಡತಡೆ ಸಂಭವ.

ಮಿಥುನ ರಾಶಿ:

ನವಮಿ ಸ್ಥಾನದಲ್ಲಿ ಗುರುಸ್ವಾಮಿ ಇರುವುದರಿಂದ ಆಗಾಗ ಅನಾರೋಗ್ಯ ಸಂಭವ, ನಂಬಿಕೆಯಿಂದ ಧನ ನಷ್ಟ, ಸಾಲಗಾರರಿಂದ ಕಿರುಕುಳ, ಉದ್ಯೋಗ ಬದಲಾವಣೆ ಸಾಧ್ಯತೆ, ಕೆಲಸದಲ್ಲಿ ಕೆಲವರಿಗೆ ವರ್ಗಾವಣೆ, ಅಧಿಕಾರಿ ವರ್ಗದವರಿಂದ ಕಿರಿಕಿರಿ ಸಂಭವ, ಅಪಮಾನ ಮತ್ತು ಅಪವಾದದ ಭಯಭೀತಿ ನಿಮಗೆ ಕಾಡಲಿದೆ, ದಾಯಾದಿಗಳಿಂದ ಆಸ್ತಿ ವಿಚಾರಕ್ಕಾಗಿ ತೊಂದರೆ ಕಾಡುತ್ತದೆ, ಸಂತಾನದ ಸಿಹಿಸುದ್ದಿ ಕುಟುಂಬದಲ್ಲಿ ಸಂತಸ ಕೂಡಿಬರಲಿದೆ,ಮನಸ್ಸಿನ ಆಸೆ ಕೈಗೂಡುತ್ತದೆ, ಪ್ರೇಮಿಗಳ ದಾಂಪತ್ಯದಲ್ಲಿ ಕಿರಿಕಿರಿ, ಬಂಧುಗಳೊಂದಿಗೆ ಕಲಹ, ಮನೆಯಲ್ಲಿ ಅಶಾಂತಿ ವಾತಾವರಣ ಕಂಡು ಬರುತ್ತದೆ.

ಕರ್ಕಾಟಕ ರಾಶಿ:

ಅಷ್ಟಮದಲ್ಲಿ ಗುರುಸ್ವಾಮಿ ಇರುವುದರಿಂದ ಉದ್ಯೋಗ ತ್ಯಜಿಸಿ ನಿಮ್ಮದೇ ಸಾಮರ್ಥ್ಯ ಪ್ರದರ್ಶಿಸುವ ಸಾಧ್ಯತೆ, ಹೈನುಗಾರಿಕೆ, ಪಶುಸಂಗೋಪನೆ, ಮೇಕೆ ಫಾರಂ, ಕೋಳಿ ಫಾರಂ, ಉದ್ಯಮ ಪ್ರಾರಂಭಿಸುವ ಚಿಂತನೆ, ಆಸ್ತಿ ವಿಚಾರದಿಂದ ಮನೆಯ ಹಿರಿಯರೊಂದಿಗೆ ಭಿನ್ನಾಭಿಪ್ರಾಯ ಮುಂದುವರಿಕೆ, ಆಸ್ತಿ ವಿಷಯದಲ್ಲಿ ಕೋರ್ಟ್ ಮೆಟ್ಟಿಲು ಹತ್ತುವ ಸಾಧ್ಯತೆ,ಮಾತಾಪಿತೃ ಆರೋಗ್ಯದಲ್ಲಿ ಹಾನಿ ಸಂಭವ,ಪಾಲುದಾರಿಕೆಯಲ್ಲಿ ಹಣಕಾಸು ನಷ್ಟ ಸಂಭವ, ಪತ್ನಿಯೊಂದಿಗೆ ಸಣ್ಣ ವಿಷಯದಿಂದ ಮನಸ್ತಾಪ, ಮನೆ ನಿರ್ಮಾಣ ಅರ್ಧಕ್ಕೆ ನಿಲ್ಲುವ ಸಂಭವ, ಕೆಲವರ ಮದುವೆ ವಿಳಂಬ ಸಾಧ್ಯತೆ, ನಿಮ್ಮ ಬಾಸ್ ಜೊತೆ ಮಾನಸಿಕ ಒತ್ತಡ ಹೆಚ್ಚಾಗಲಿದೆ, ರಿಯಲ್ ಎಸ್ಟೇಟ್ ಉದ್ಯಮ ಕುಂಠಿತ, ಸಾಲಗಾರರಿಂದ ಮನಸ್ತಾಪ.

ಸಿಂಹ ರಾಶಿ;

ಸಪ್ತಮ ಸ್ಥಾನದಲ್ಲಿ ಗುರು ಸ್ವಾಮಿ ಇರುವುದರಿಂದ ರಾಜಕಾರಣಿಗಳಿಗೆ ಅಧಿಕಾರಿ ಪ್ರಾಪ್ತಿ ಸಂಭವ, ಉದ್ಯೋಗಿಗಳಿಗೆ ಬಹುದಿನದ ಕನಸು ನನಸಾಗುವ ದಿನ, ವೇತನ ಬೇಡಿಕೆ ಸಲ್ಲಿಸಿದವರಿಗೆ ಲಾಭವಾಗಲಿದೆ, ಉದ್ಯೋಗಿಗಳಿಗೆ ಪ್ರಮೋಷನ್ ಭಾಗ್ಯದ ಜೊತೆ ವರ್ಗಾವಣೆ ಆಗುವ ಸಾಧ್ಯತೆ, ಕೋರ್ಟು ಮತ್ತು ಸರ್ಕಾರಿ ಕಚೇರಿ ಎಲ್ಲಾ ಕೆಲಸಗಳಲ್ಲಿ ಜಯ, ಭೂಮಿ ಖರೀದಿಯ ಸುಯೋಗ, ಪುತ್ರ ಸಂತಾನ ಭಾಗ್ಯ ಲಭಿಸಲಿದೆ, ವ್ಯಾಪಾರಸ್ಥರ ಆರ್ಥಿಕ ಅಭಿವೃದ್ಧಿ, ಧಾರ್ಮಿಕ ಕಾರ್ಯಕ್ರಮಗಳಿಗೆ ಭೇಟಿ ಸಂಭವ, ಹಣದ ಜಾಮೀನ್ ವಿಚಾರಕ್ಕೆ ಮನಸ್ತಾಪ, ಆಸ್ತಿ ವಿಚಾರಕ್ಕಾಗಿ ಬಂಧುಮಿತ್ರರೊಡನೆ ಕಲಹ, ಸಂಗಾತಿಯೊಂದಿಗೆ ಸಣ್ಣ ವಿಚಾರಗಳಿಗೆ ವಾಗ್ವಾದ ಬೇಡ, ಸಹೋದರ ಶಿಕ್ಷಣಕ್ಕಾಗಿ ಹಣ ವ್ಯಯ, ಅರ್ಧಕ್ಕೆ ನಿಂತ ಗೃಹ ಕಟ್ಟಡ ಕಾರ್ಯ ಪೂರ್ಣಗೊಳ್ಳಲಿದೆ.

ಕನ್ಯಾ ರಾಶಿ:

ಗುರು ಷಷ್ಠಮ ಸ್ಥಾನದಲ್ಲಿ ಸಂಚರಿಸುವುದರಿಂದ ಈ ರಾಶಿಯವರಿಗೆ ಕುಟುಂಬದ ಶುಭ ಸಮಾರಂಭಗಳಲ್ಲಿ ಭಾಗವಹಿಸುತ್ತೀರಿ, ಆಕಸ್ಮಿಕ ಕಾರ್ಯನಿಮಿತ್ತ ಪ್ರಯಾಣ ಬೆಳೆಸುವಿರಿ, ಭೂಮಿ ಕಟ್ಟಡ ಮರ ಇತ್ಯಾದಿ ವ್ಯಾಪಾರಿಗಳಿಗೆ ಅಭಿವೃದ್ಧಿ ಕಾಲ, ಪ್ರೇಮಿಗಳಿಗೆ ವಿವಾಹ ಕಾರ್ಯಗಳಿಗೆ ಅವಕಾಶ, ವಾಹನ ಚಾಲಕರು ಮೆಕ್ಯಾನಿಕಲ್ ಕಾರ್ಮಿಕರಿಗೆ ಇತ್ಯಾದಿ ವರ್ಗದವರಿಗೆ ಉತ್ತಮ ಫಲದಾಯಕ ಕಾಲ, ಸಮಾಜಸೇವಕರಿಗೆ ಸಮಾಜದಲ್ಲಿ ವಿಶೇಷ ಗೌರವಕ್ಕೆ ಪಾತ್ರರಾಗುವಿರಿ, ಪ್ರೇಮಿಗಳ ಮನಸ್ಸು ಉಲ್ಲಾಸದಿಂದ ಕೂಡಿರುತ್ತದೆ, ಮೂಲವ್ಯಾಧಿ ಬಾಧೆ ಕಂಡುಬರುತ್ತದೆ ಸಾಲ ಮರುಪಾವತಿ ಯಾಗುತ್ತದೆ, ಅಧಿಕಾರಿ ವರ್ಗದವರಿಗೆ ಉಡುಗೊರೆ ರೂಪದಲ್ಲಿ ಹಣ ದೊರೆಯುತ್ತದೆ, ಉದ್ಯೋಗವಕಾಶ, ವಿವಾಹ ಪ್ರಯತ್ನದಲ್ಲಿ ಯಶಸ್ಸು, ದಾಂಪತ್ಯದಲ್ಲಿ ಸುಖ.

ತುಲಾ ರಾಶಿ:

ಪಂಚಮ ಸ್ಥಾನದಲ್ಲಿ ಗುರು ಇರುವುದರಿಂದ ಈ ರಾಶಿಯವರಿಗೆ ಗುಡ್ ನ್ಯೂಸ್ ಪಡೆಯುತ್ತೀರಿ, ಮದುವೆ ಕಾರ್ಯ ಯಶಸ್ಸು, ಸಂತಾನ ಯಶಸ್ಸು ,ಸಾಲದಿಂದ ಋಣಮುಕ್ತಿ, ವ್ಯಾಪಾರದಲ್ಲಿ ಆರ್ಥಿಕ ಚೇತರಿಕೆ, ಸಂತಾನಪ್ರಾಪ್ತಿ ,ಹೊಸ ಮನೆ ಕಟ್ಟಡ ಯಶಸ್ಸು ,ಆಸ್ತಿ ಖರೀದಿ ಖುಷಿ ತರಲಿದೆ, ವಿದೇಶ ಪ್ರವಾಸ ತಾಂತ್ರಿಕ ದೋಷ ನಿವಾರಣೆ, ವೈರಿಗಳು ಶರಣಾಗತಿ, ಕೋರ್ಟ್ ಕೇಸ್ ನಿಮಗೆ ಜಯ ಸಿಗಲಿದೆ, ಬಹುದಿನದಿಂದ ನರಳುತ್ತಿರುವ ಕಾಯಿಲೆಯಿಂದ ಇಂದು ಶಾಶ್ವತ ಪರಿಹಾರ, ಬಹುದಿನಗಳಿಂದ ಪ್ರೀತಿಸುತ್ತಿರುವ ಪ್ರೇಮಿಗಳ ಮದುವೆ ಸೌಭಾಗ್ಯ ಕೂಡಿಬರಲಿದೆ, ಹಿರಿಯರ ಅನುಮೋದನೆ ಸಿಗಲಿದೆ, ಕಲಾವಿದರಿಗೆ ಬೇಡಿಕೆ, ಸಂಗೀತಗಾರರು, ಹಿನ್ನೆಲೆ ಗಾಯಕರಿಗೆ ಧನಲಾಭವಿದೆ, ಧಾರಾವಾಹಿ ಕಲಾವಿದರಿಗೆ ಬೇಡಿಕೆ ಸಿಗಲಿದೆ.

ವೃಶ್ಚಿಕ ರಾಶಿ:

ಚತುರ್ಥ ಸ್ಥಾನದಲ್ಲಿ ಗುರು ಇರುವುದರಿಂದ ಕೈಗೊಂಡ ಕಾರ್ಯಸಾಧನೆ ಖಚಿತ, ವಸ್ತ್ರಾಭರಣ ವ್ಯಾಪಾರಸ್ಥರಿಗೆ ಧನಲಾಭ, ಕೋರ್ಟು-ಕಚೇರಿ ಅಡಚಣೆ ಎದುರಿಸಲಿದ್ದೀರಿ, ಸ್ಟೇಷನರಿ,ಬ್ಯೂಟಿ ಪಾರ್ಲರ್, ಕಿರಾಣಿ, ವಸ್ತ್ರ ,ಹಾರ್ಡ್ವೇರ್ ವ್ಯವಹಾರದಲ್ಲಿ ವಿಶೇಷ ಧನಲಾಭ ಪ್ರಾಪ್ತಿ, ರಾಜಕಾರಣಿಗಳಿಗೆ ವಿಶೇಷ ಸ್ಥಾನಮಾನ ಸಿಗುವ ಸಾಧ್ಯತೆ, ಉದ್ಯೋಗಿಗೆ ಮೇಲಾಧಿಕಾರಿಯ ನೆರವು ಸಿಗಲಿದೆ, ಗುಪ್ತ ಶತ್ರುಗಳಿಂದ ನಿಮ್ಮ ವ್ಯವಹಾರಗಳಲ್ಲಿ ತೊಡಕು ಸಂಭವ, ಭೂ ವ್ಯವಹಾರಗಳಲ್ಲಿ ಯಶಸ್ಸಿನೊಂದಿಗೆ ಹಣಕಾಸಿನ ಅನುಕೂಲ, ಸಂಗಾತಿಯೊಂದಿಗೆ ತಾಳ್ಮೆಯಿಂದ ಇರುವುದು ಉತ್ತಮ, ತಾಂತ್ರಿಕ ಪದವಿ ಹೊಂದಿದವರಿಗೆ ವಿದೇಶದೊಂದಿಗೆ ವ್ಯವಹರಿಸುವ ಅವಕಾಶಗಳು ಕೂಡಿ ಬರಲಿವೆ, ಕ್ರೀಡಾಪಟು ವಿಜ್ಞಾನಿ ಹಾಗೂ ಸಂಶೋಧಕರಿಗೆ ಸ್ಥಾನಮಾನ ಗೌರವ ಪ್ರಾಪ್ತಿ.

ಧನಸ್ಸು ರಾಶಿ:

ತೃತಿಯ ಸ್ಥಾನದ ಗುರು ಈ ರಾಶಿಯವರಿಗೆ ಈ ಸೂರ್ಯಗ್ರಹಣದಿಂದ ಈ ರಾಶಿಯವರಿಗೆ ಯಾವುದೇ ಋಣಾತ್ಮಕ ಎಫೆಕ್ಟಿವ್ ಆಗುವುದಿಲ್ಲ, ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ, ಪಾಲುದಾರಿಕೆ ಬಿಜಿನೆಸ್ನಲ್ಲಿ ಹಣಕಾಸಿನ ಬಗ್ಗೆ ಜಾಗ್ರತೆ ಇರಲಿ, ಕೆಲಸದ ಸ್ಥಳದಲ್ಲಿ ಹಣ ಸ್ವೀಕರಿಸುವಾಗ ಜಾಗೃತಿ ವಹಿಸಿ, ಹೊಸ ಉದ್ಯಮ ಪ್ರಾರಂಭಿಸುವುದು ಸದ್ಯಕ್ಕೆ ಬೇಡ, ಶುಭ ಮಂಗಳ ಕಾರ್ಯ ಮುಂದೂಡುವುದು ಒಳಿತು, ಉದ್ಯೋಗ ಬದಲಾವಣೆ ಬೇಡ, ತಂತ್ರಜ್ಞಾನ ಪದವಿ ಪಡೆದವರು ಕೌಶಲ್ಯ ತರಬೇತಿ ಕಲಿಯಲು ಮರೆಯದಿರಿ, ಹೊಸ ನಿರ್ಧಾರಗಳು ಬೇಡ, ಪ್ರೇಮಿಗಳ ಮದುವೆ ಹಿರಿಯರ ವಿರೋಧ, ದಾಂಪತ್ಯದಲ್ಲಿ ಕಲಹ, ಸಹೋದರ ಸಹೋದರಿಯರ ಮಧ್ಯೆ ಮನಸ್ತಾಪ, ಆಸ್ತಿಗಾಗಿ ಹೋರಾಟ, ಪಿತ್ರಾರ್ಜಿತ ಆಸ್ತಿಯಲ್ಲಿ ಗೊಂದಲ, ನಿಮ್ಮ ನಿರ್ಧಾರಗಳು ಬಹಿರಂಗ ಪಡಿಸಬೇಡಿ, ಹಣಕಾಸಿನ ವಿಚಾರಕ್ಕಾಗಿ ಯಾರಿಗೂ ಜಾಮೀನು ನೀಡಬೇಡಿ, ಉದ್ಯೋಗಿಗಳಿಗೆ ಮೇಲಾಧಿಕಾರಿ ಕಿರುಕುಳ ಸಂಭವ, ವರ್ಗಾವಣೆ ಅತಂತ್ರ, ಪ್ರಮೋಷನ್ ಸಣ್ಣ ವಿಚಾರಕ್ಕಾಗಿ ತಡೆ.

ಮಕರ ರಾಶಿ:

ದ್ವಿತೀಯ ಸ್ಥಾನದಲ್ಲಿ ಗುರು ಇರುವುದರಿಂದ ಈ ರಾಶಿಯವರಿಗೆ ಅದೃಷ್ಟದ ಸಮಯ ಬಂದಿದೆ, ಶತ್ರುಗಳಿಗೆ ಸೋಲು ಖಚಿತ, ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳಿಂದ ಸಹಕಾರ, ರಾಜಕಾರಣಿಗಳಿಗೆ ಸಮಾಜದಲ್ಲಿ ಗೌರವ ದೊರೆಯುವ ದಿನ, ಮಾನಸಿಕವಾಗಿ ಉತ್ಸಾಹಿತರಾಗಿ, ವ್ಯಾಪಾರಿಗಳಿಗೆ ಅಭಿವೃದ್ಧಿ ಕಾಲ, ಪ್ರೇಮಿಗಳ ಮಾನಸಿಕ ನೆಮ್ಮದಿ, ಸಹೋದರನಿಂದ ಸಹೋದರಿಗೆ ಧನಾಗಮನ, ಭೂಮಿ ಮನೆಯ ವಿಷಯದಲ್ಲಿ ಸಮಸ್ಯೆ ಪರಿಹಾರ, ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ, ಸ್ತ್ರೀ ವರ್ಗದಿಂದ ಅಪಮಾನ ಸಾಧ್ಯತೆ,ಆಸ್ತಿ ವಿವಾದ ಕಂಡುಬಂದರೂ ಪರಿಹಾರವಾಗುವುದು, ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ.

ಕುಂಭ ರಾಶಿ:

ಇದೇ ರಾಶಿಯಲ್ಲಿ ಗುರು ಸಂಚರಿಸುವುದರಿಂದ ಗುರುಸ್ವಾಮಿ ನಿಮಗೆ ಇಂದು ಲಾಭದಾಯಕ ದಿನ, ದೀರ್ಘಕಾಲದ ಕಾಯಿಲೆ ಗುಣಮುಖ, ಸಂಗಾತಿಯ ಭೇಟಿಮಾಡುವ ಒಳ್ಳೆಯ ದಿನವಾಗಿದೆ, ನಿರುದ್ಯೋಗಿಗಳಿಗೆ ಉದ್ಯೋಗ ಪಡೆಯುವ ಅವಕಾಶವಿದೆ, ಪತಿ-ಪತ್ನಿ ಮಧ್ಯೆ ಜಗಳ ಆಗುವ ಸಾಧ್ಯತೆ ಇದೆ, ಮಾನಸಿಕ ಒತ್ತಡ ಉಂಟಾಗಬಹುದು, ಮಕ್ಕಳೊಡನೆ ಸಂತೋಷದಾಯಕ ಕ್ಷಣಗಳು ಅನುಭವಿಸುವಿರಿ, ಸಾಲದ ಸಮಸ್ಯೆ ಎದುರಾಗಬಹುದು, ಸ್ನೇಹಿತರ ಹತ್ತಿರ ಸಾಲ ಕೇಳುವ ಪ್ರಸಂಗ ಬರುವ ಸಾಧ್ಯತೆ, ವ್ಯಾಪಾರಸ್ಥರಿಗೆ ಲಾಭ, ನವದಂಪತಿಗಳ ವೈವಾಹಿಕ ಜೀವನ ಬಹಳ ಸುಮಧುರವಾಗಿರುತ್ತದೆ, ಫೈನಾನ್ಸಿಯಲ್ ಬಿಸಿನೆಸ್ ಮಾಡುವವರು ಉತ್ತಮ ಪ್ರಗತಿ ಕಾಣುವಿರಿ.

ಮೀನ ರಾಶಿ:

ದ್ವಾದಶ ಸ್ಥಾನದಲ್ಲಿ ಗುರುಸ್ವಾಮಿ ಇರುವುದರಿಂದ ನಿಮಗೆ ನೀವು ತುಂಬಾ ರೂಪವಂತರು ಇದರಿಂದ ಜನ ಆಕರ್ಷಣೆ, ವೃತ್ತಿ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಸಹಕಾರ, ಅಧಿಕಾರಿ ವರ್ಗದವರಿಗೆ ಕೆಲಸದ ಒತ್ತಡ, ಬಹಳ ದಿನಗಳ ಕನಸು ನನಸಾಗಲಿದೆ, ಶುಭ ಮಂಗಳ ಕಾರ್ಯ ಜರುಗುವ ಸಂಭವ, ಮಾತಾಪಿತೃ ಆರೋಗ್ಯದಲ್ಲಿ ಚೇತರಿಕೆ, ಸಹೋದರಿ ಆಗಮನ, ಮನೆ ಕಟ್ಟಡ ಚಾಲನೆ, ಹೊಸ ಉದ್ಯೋಗ ಪ್ರಾರಂಭ ಮಾಡಲು ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ದ್ವಂದ್ವ, ಅತಿಯಾಗಿ ನಂಬಿ ಸಾಲದ ಹೊರೆ ಎದುರಿಸುವಿರಿ, ರಾಜಕಾರಣಿಗಳಿಗೆ ರಾಜಮನ್ನಣೆ, ಶತ್ರುಗಳ ಜೊತೆ ಸನ್ನಿಧಾನ ಒಳಿತು, ಪತ್ನಿಯ ಮಾರ್ಗದರ್ಶನ ಪಡೆಯಿರಿ ಪ್ರಯತ್ನಕ್ಕೆ ಸೂಕ್ತ ಪ್ರತಿಫಲ ಸಿಗಲಿದೆ, ನಟ ನಟಿಯರಿಗೆ ಅವಕಾಶ ಸಿಗಲಿದೆ.

Edited By : Nagaraj Tulugeri
PublicNext

PublicNext

03/08/2021 08:25 am

Cinque Terre

19.45 K

Cinque Terre

0