ಮೇಷ: ಮಾತಿನ ಮೋಡಿಯಿಂದ ಜನಾಕರ್ಷಣೆ. ಸಹೋದ್ಯೋಗಿಗಳಿಂದ ವಿಶೇಷ ಸಲಹೆ. ಹಣದ ಅಪವ್ಯಯದ ಸಾಧ್ಯತೆ.
ವೃಷಭ: ಕೆಲಸದ ಒತ್ತಡದಲ್ಲಿ ಕುಟುಂಬದವರನ್ನು ಮರೆಯಬೇಡಿ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಕೋಪ ನಿಯಂತ್ರಿಸಿಕೊಳ್ಳಿ.
ಮಿಥುನ: ಬಹಳ ದಿನಗಳ ಕನಸು ನನಸಾಗಲಿದೆ. ವಿವಾಹದ ನಿರೀಕ್ಷೆಯಲ್ಲಿರುವವರಿಗೆ ಶುಭ ಸುದ್ದಿ. ತಂದೆಯ ಆರೋಗ್ಯದಲ್ಲಿ ಏರುಪೇರು.
ಕಟಕ: ಮನೆಗೆ ಬಂಧುಗಳು ಬರುವ ಸಾಧ್ಯತೆ. ಅಕ್ಕ ತಂಗಿಯರ ಮನೆಗೆ ಭೇಟಿ. ಮನೆ ನಿರ್ಮಾಣಕ್ಕೆ ಚಾಲನೆ. ದಿನಾಂತ್ಯಕ್ಕೆ ಶುಭ.
ಸಿಂಹ: ದೃಢನಿರ್ಧಾರ ತೆಗೆದುಕೊಳ್ಳುವಲ್ಲಿ ದ್ವಂದ್ವ. ಹೊಸ ವ್ಯಾಪಾರದ ಪ್ರಾರಂಭ. ಬಂಧು ವರ್ಗದಲ್ಲಿ ಪ್ರಶಂಸೆ. ದಿನಾಂತ್ಯಕ್ಕೆ ಆಯಾಸ.
ಕನ್ಯಾ: ಯಾರನ್ನೂ ಅತಿಯಾಗಿ ನಂಬಬೇಡಿ. ಸಾಲಗಾರರಿಂದ ಅವಮಾನ. ವ್ಯಾಪಾರಸ್ಥರಿಗೆ ನಷ್ಟ. ದೇವಾಲಯ ಭೇಟಿ.
ತುಲಾ: ನಿಮ್ಮ ಪ್ರಾಮಾಣಿಕತೆಗೆ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ಶುಭ ಸಮಾರಂಭದ ಸಡಗರ. ದಿನಾಂತ್ಯದಲ್ಲಿ ಶುಭವಾರ್ತೆ.
ವೃಶ್ಚಿಕ: ಹಾಸಿಗೆ ಇದ್ದಷ್ಟು ಕಾಲು ಚಾಚುವುದು ಒಳಿತು. ಸಾರ್ವಜನಿಕ ಕ್ಷೇತ್ರದಲ್ಲಿ ವಿಶೇಷ ಮನ್ನಣೆ. ಗುರು ಸನ್ನಿಧಾನಕ್ಕೆ ಪ್ರಯಾಣ.
ಧನುಸ್ಸು: ಹಿರಿಯರ ಸಲಹೆ ಪಡೆಯಿರಿ. ಪ್ರತಿಭೆಗೆ ಸೂಕ್ತ ಪ್ರೋತ್ಸಾಹ ನಟರಿಗೆ ಕಾರ್ಯವಿಘ್ನ. ಕುಟುಂಬಸ್ಥರೊಂದಿಗೆ ಭೋಜನ.
ಮಕರ: ಅಸಾಧ್ಯವಾದುದನ್ನು ಸಾಧಿಸಿದ ಸಮಾಧಾನ. ಕುಟುಂಬ ವರ್ಗದಲ್ಲಿ ಮನ್ನಣೆ. ದೀನ ದರಿದ್ರರಿಗೆ ಸಹಾಯ ಮಾಡಿ.
ಕುಂಭ: ರಾಜಕೀಯ ರಂಗದಲ್ಲಿ ಇರುವವರಿಗೆ ಅಧಿಕಾರ ನಷ್ಟ. ಕುಟುಂಬದ ಸಹಕಾರ. ಅಣ್ಣ-ತಮ್ಮಂದಿರ ಬಾಂಧವ್ಯ ವೃದ್ಧಿ.
ಮೀನ: ಮನೆಯಲ್ಲಿ ಕಿರಿಕಿರಿ. ಆರ್ಥಿಕ ಮುಗ್ಗಟ್ಟು. ಮಕ್ಕಳಿಂದ ದುಂದುವೆಚ್ಚ. ತಾಯಿಯ ಮಾತನ್ನು ಪಾಲಿಸಿ. ದಿನಾಂತ್ಯದಲ್ಲಿ ಶುಭ.
PublicNext
26/02/2021 07:13 am