ಮೇಷ: ಮನೆಯಲ್ಲಿ ಮಕ್ಕಳಿಂದ ಶುಭಕರವಾದ ಹಲವು ಸಮಾಚಾರಗಳನ್ನು ಕೇಳಲಿದ್ದೀರಿ. ಇದು ಬದುಕಿನ ಅಪರೂಪದ ದಿನವೂ ಆಗಲಿದೆ.
ವೃಷಭ: ನವದಂಪತಿಯ ಬದುಕಿನಲ್ಲಿ ಸಂತಸ ವೃದ್ಧಿಸಲಿದೆ. ಪಾರ್ವತಿದೇವಿಯನ್ನು ಶ್ರದ್ಧಾಭಕ್ತಿಪೂರ್ವಕವಾಗಿ ಸ್ತುತಿಸಿದರೆ ಬಾಂಧವ್ಯದಲ್ಲಿ ವೃದ್ಧಿ.
ಮಿಥುನ: ಉದ್ಯಮದಲ್ಲಿ ತೊಡಗಿರುವವರಿಗೆ ಅತ್ಯುತ್ತಮ ಸುದ್ದಿಯನ್ನು ಕೇಳುವ ಅವಕಾಶವಿದೆ. ರಫ್ತಿನಲ್ಲಿ ಹೆಚ್ಚಿನ ಲಾಭ ಉಂಟಾಗಲಿದೆ.
ಕಟಕ: ಶ್ರಮ ವಹಿಸಿ ದುಡಿಯುವಂತಹ ಚೈತನ್ಯ, ಅಪೂರ್ವವಾದ ಪ್ರತಿಭೆಗಳಿಂದ ಪ್ರಶಂಸೆಯ ಮಳೆಯಲ್ಲಿ ನೆನೆಯಲಿದ್ದೀರಿ.
ಸಿಂಹ: ಉತ್ಸಾಹದಿಂದ ಮುನ್ನುಗ್ಗಿ ಸಾಹಸಕಾರ್ಯ ಕೈಗೊಳ್ಳುವಂತಹ ಪತ್ರಿಕೋದ್ಯಮಿಗಳಿಗೆ ಸದ್ಯದಲ್ಲಿಯೇ ಯಶಸ್ಸು ಕಾದಿದೆ.
ಕನ್ಯಾ: ಚಿತ್ರರಂಗದ ಕಲಾವಿದರಿಗೆ ಹೊಸದೇ ಅವಕಾಶಗಳು ಹುಡುಕಿಕೊಂಡು ಬರಲಿವೆ. ಪ್ರತಿಭೆಗೆ ತಕ್ಕ ಮನ್ನಣೆ ಲಭ್ಯ.
ತುಲಾ: ನಿಷ್ಠಾಪೂರ್ವಕವಾಗಿ ನಿರಂಜನನಾದ ಪರಶಿವನ ಆರಾಧನೆಯನ್ನು ಮಾಡಿ. ವಿವಿಧ ಕೆಲಸಗಳಲ್ಲಿ ಸಿದ್ಧಿ ದೊರೆಯಲು ಸಾಧ್ಯವಿದೆ.
ವೃಶ್ಚಿಕ: ರಾಜಕಾರಣಿಗಳು ಗೆಲ್ಲಲು ಉತ್ತಮ ಅವಕಾಶ ಪಡೆಯಲಿದ್ದಾರೆ. ಹಿತಶತ್ರುಗಳ ತಂತ್ರಗಳನ್ನು ಕೂಡ ಬೇಗ ಮುರಿಯಲಿದ್ದೀರಿ.
ಧನಸ್ಸು: ಮಹಾಗಣಪತಿಗೆ ಮೊರೆಹೋಗುವುದರಿಂದ ಅನುಗ್ರಹರೂಪದಲ್ಲಿ ಪೂರ್ಣ ಯಶಸ್ಸು ಪಡೆಯುವ ಅವಕಾಶವಿದೆ.
ಮಕರ: ಧೈರ್ಯದಿಂದ ಮುನ್ನುಗ್ಗಲು ಅಡ್ಡಿಯಾಗುವ ಹಿಂಜರಿಕೆಯನ್ನು ಬಿಟ್ಟುಬಿಡಿ. ಒಳಿತಿಗೆ ಅವಕಾಶಗಳು ತೆರೆಯಲಿವೆ.
ಕುಂಭ: ಅವಿವಾಹಿತರಾಗಿದ್ದರೆ ವಿವಾಹಕೇಂದ್ರಗಳು ಅಥವಾ ಆ ಬಗೆಯ ಸಂಘಸಂಸ್ಥೆಗಳಿಂದ ಸಹಾಯ ಲಭ್ಯವಾಗಲಿದೆ.
ಮೀನ : ಆರೋಗ್ಯದ ವಿಚಾರದಲ್ಲಿ ಚೇತರಿಕೆಯನ್ನು ಪಡೆಯುವಿರಿ. ಕುಟುಂಬದಲ್ಲಿ ಹಷೋಲ್ಲಾಸ ಹೊಂದುವ ಯೋಗವೂ ಇದೆ.
PublicNext
27/01/2021 07:21 am