ಮೇಷ ರಾಶಿ : ಆರ್ಥಿಕವಾಗಿ ಆಗಾಗ ತಾಪತ್ರಯಗಳು ಕಂಡುಬರಲಿವೆ. ವೃತ್ತಿರಂಗದಲ್ಲಿ ಅಧಿಕಾರಿಗಳ ಆಗ್ರಹ ಭಿನ್ನಾಭಿಪ್ರಾಯಕ್ಕೆ ಕಾರಣವಾಗಲಿದೆ. ಪ್ರಯಾಣದಲ್ಲಿ ಕಷ್ಟನಷ್ಟಗಳು ಬರಬಹುದು. ದಿನಾಂತ್ಯ ಕಿರು ಸಂಚಾರವಿದೆ. ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರವಿರಲಿ. ಶ್ರಮ ಹೆಚ್ಚು ಮತ್ತು ಲಾಭ ಕಡಿಮೆ ಇರುತ್ತದೆ. ಕಾರ್ಯಗಳಲ್ಲಿ ಅಡಚಣೆಗಳಿರಬಹುದು.
ವೃಷಭ ರಾಶಿ: ಅನಿರೀಕ್ಷಿತ ಪವಾಡ ಸಂಭವಿಸಬಹುದು ಎಂಬ ಅತಿ ಆತ್ಮವಿಶ್ವಾಸ ಬೇಡ. ಮಾಡಿದ ಪ್ರಯತ್ನಕ್ಕೆ ಫಲ ಇದ್ದೇ ಇದೆ. ಮಾಯೆಯ ಹಿಂದೆ ಬಿದ್ದಿದ್ದೀರಿ. ಜೀವನದ ವಿಚಾರದಲ್ಲಿ ಹುಡುಗಾಟಿಕೆಯನ್ನು ಬಿಟ್ಟು ಬಿಡುವುದೇ ಉತ್ತಮ. ಇಂದು ಸೃಜನಾತ್ಮಕ ಕೆಲಸದಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ. ಸಂಗಾತಿ ಮತ್ತು ಆತ್ಮೀಯ ವ್ಯಕ್ತಿಗೆ ಬೆಂಬಲ ನೀಡುವಿರಿ.
ಮಿಥುನ ರಾಶಿ: ನಿಮ್ಮ ಮನೆತನದ ಪ್ರಭಾವಕ್ಕೆ ವಿಶಿಷ್ಟ ತೂಕವಿದೆ. ಆತ್ಮವಿಶ್ವಾಸ ಬೆಳೆಸಿಕೊಂಡರೆ ವ್ಯಕ್ತಿತ್ವದ ಉನ್ನತಿ ಸಾಧ್ಯವಾಗಲಿದೆ. ಗುರುಹಿರಿಯರನ್ನು ಸಂಪೂರ್ಣ ದೂರ ಮಾಡಿಕೊಳ್ಳದಿರಿ. ಅನುಭವಕ್ಕೆ ಇರುವ ಬೆಲೆ ನಿಮಗೆ ಅರಿವಾಗಲಿದೆ. ಇಂದು ಅನೇಕ ಜವಾಬ್ದಾರಿಗಳನ್ನು ಪೂರೈಸುವ ದಿನ. ದಿನದ ಮೊದಲಾರ್ಧದಲ್ಲಿ ಸಣ್ಣ ಲಾಭಗಳನ್ನು ನಿರೀಕ್ಷಿಸಲಾಗಿದೆ.
ಕಟಕ ರಾಶಿ: ಒಗಟಿನಂತೆ ಮಾತಾಡದಿರಿ. ಎಲ್ಲರೂ ನಿಮ್ಮಷ್ಟು ಬುದ್ಧಿವಂತರೇ ಇರುತ್ತಾರೆ ಎಂದುಕೊಳ್ಳಬೇಡಿ. ಇದರಿಂದ ಕಷ್ಟವಾಗಲಿದೆ. ಒಳಿತು ಕೆಡುಕುಗಳ ಬಗ್ಗೆ ಚಿಂತಿಸುತ್ತಿದ್ದೀರಿ. ಸಕಾರಾತ್ಮಕ ಯೋಚನೆಯಿಂದ ಮುನ್ನುಗ್ಗಿದರೆ ನಿಮಗೆ ಜಯವಿದೆ.
ಸಿಂಹ ರಾಶಿ: ಸಿಹಿ ಹಂಚಬೇಕಾದ ಅಪರೂಪದ ಸಾಧನೆ ಕೈಗೊಳ್ಳುದಕ್ಕೆ ಅಪಾರ ಅವಕಾಶಗಳು ಲಭ್ಯವಾಗಲಿವೆ. ನೆರೆಹೊರೆಯವರ ಜತೆಗೆ ಅನಗತ್ಯವಾಗಿ ಜಗಳವಾಡುವ ಬೆಳವಣಿಗೆಗಳು ಉಂಟಾಗಬಹುದು ಎಚ್ಚರವಿರಲಿ. ಇಂದು ಎಲ್ಲಾ ಕೆಲಸಗಳನ್ನು ಎಚ್ಚರಿಕೆಯಿಂದ ಮಾಡಿ. ಇಂದು ನಿಮ್ಮ ಮಾತು ಮತ್ತು ನಡವಳಿಕೆ ಕಲಹಕ್ಕೆ ಕಾರಣವಾಗಬಹುದು.
ಕನ್ಯಾ ರಾಶಿ: ಹಗಲುಗನಸುಗಳನ್ನು ಕಾಣುತ್ತ ಕುಳಿತರೆ ಏನೂ ಫಲವಿಲ್ಲ. ಕನಸು ನನಸಾದರಷ್ಟೆ ಕಾಂಚನದ ಸಿದ್ಧಿ ಸಾಧ್ಯವಿದೆ. ಕ್ಷೀರೋದ್ಯಮ, ಮತ್ಸೋದ್ಯಮ, ಕೃಷಿವಲಯದವರು ಸ್ವಲ್ಪಮಟ್ಟಿಗೆ ಜಾಗ್ರತೆ ವಹಿಸುವ ಅಗತ್ಯವಿದೆ. ಆದರೂ ಎಲ್ಲೆಡೆ ಅನುಕೂಲಕರ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ಸರ್ಕಾರದ ಕಾರ್ಯಗಳು ಸುಗಮವಾಗಿ ಪೂರ್ಣಗೊಳ್ಳಲಿವೆ.
ತುಲಾ ರಾಶಿ: ವಾಹನ ಖರೀದಿಯ ಯೋಗ ಬರಬಹುದು. ಆದರೆ ಅವಸರ ಬೇಡ. ಖರೀದಿಸದಿದ್ದರೂ ತೊಂದರೆ ಏನಿಲ್ಲ. ಪ್ರಮುಖ ವಿಚಾರದಲ್ಲಿ ಖಂಡಿತವಾಗಿ ಅವಸರ ಬೇಡ. ನಿಷ್ಪ್ರಯೋಜಕ ಸಲಹೆಯನ್ನು ಯಾರಾದರೂ ಕೊಟ್ಟರೆ ಸ್ವೀಕರಿಸಬೇಡಿ. ಇಂದು ನಿಮ್ಮ ಶುಭ ದಿನ.
ವೃಶ್ಚಿಕ ರಾಶಿ: ನಿಮ್ಮ ಗುರಿಯನ್ನು ಇನ್ನಷ್ಟು ದೃಢವಾಗಿ ತಲುಪುವ ಅವಕಾಶ ಸಿಗಲಿದೆ. ಆದರೆ ಎಲ್ಲರನ್ನೂ ನಂಬಲು ಹೋಗಬೇಡಿ. ಕುಟುಂಬದವರ ಜತೆಗೆ ದುರ್ಬಲವಾಗಿದ್ದ ನಿಮ್ಮ ಸಂಬಂಧ ಮತ್ತೆ ಗಟ್ಟಿಯಾಗಿ ರೂಪುಗೊಳ್ಳಲಿದೆ. ಯೋಚಿಸದೆ ಇಂದು ಧೈರ್ಯದಿಂದ ಕೆಲಸ ಮಾಡಿ, ಯಶಸ್ಸು ನಿಮ್ಮನ್ನು ಬೆಂಬಲಿಸುತ್ತದೆ. ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಇಂದು ಖರ್ಚು ಮಾಡಲಾಗುವುದು.
ಧನಸ್ಸು ರಾಶಿ: ಹೊಸ ಉತ್ಸಾಹದ ಅಲೆಗಳು ನಿಮ್ಮೊಳಗೆ ಸೃಷ್ಟಿಯಾಗಲಿವೆ. ಇದರಿಂದ ವಿಶಿಷ್ಟವಾದ ಸಿದ್ಧಿ ಸಾಧ್ಯವಾಗಲಿದೆ. ಸೈನಿಕನಂತೆ ಮುನ್ನುಗ್ಗುವ ತೀರ್ಮಾನವನ್ನು ತಳೆಯಲಿದ್ದೀರಿ. ನಿಮ್ಮ ಮಾನವೀಯತೆ ಗೆಲುವು ಸಾಧಿಸಲಿದೆ. ಇಂದು ನಿಮ್ಮ ಮನಸ್ಸು ಚಂಚಲವಾಗಿರುತ್ತದೆ. ಇಂದು ನಿಮ್ಮ ಸ್ಥಾನ, ಅಧಿಕಾರದ ಮಹತ್ವಾಕಾಂಕ್ಷೆಯು ವಿರೋಧಾಭಾಸಕ್ಕೆ ಕಾರಣವಾಗುತ್ತದೆ.
ಮಕರ ರಾಶಿ: ಷೇರುಗಳು, ಜೀವವಿಮಾ ಅಥವಾ ಇನ್ನಿತರ ಭೂಮಿ, ಆಸ್ತಿ ಸಂಬಂತ ವಿಚಾರಗಳಲ್ಲಿ ಯಶಸ್ಸು ದೊರೆಯಲಿದೆ. ಹಿಡಿದ ಕೆಲಸದಲ್ಲಿ ಸೋಲು ಎದುರಾಗುತ್ತದೆ ಎಂದು ಭಾವಿಸದಿರಿ. ನಿಮಗೆ ಹೊಸ ಅನುಭವದ ಲಾಭವಾಗಲಿದೆ. ನೀವು ಪ್ರತಿಯೊಂದು ಕ್ಷೇತ್ರದಲ್ಲೂ ಲಾಭ ಪಡೆಯುತ್ತೀರಿ. ವಿದ್ಯಾರ್ಥಿಗಳಿಂದ ವ್ಯಾಪಾರಿಗಳವರೆಗೆ ಎಲ್ಲರಿಗೂ ಅನುಕೂಲವಾಗಲಿದೆ. ನಂತರದ ಬೆಳವಣಿಗೆ ಅಸ್ಥಿರತೆಗೆ ಕಾರಣವಾಗುತ್ತದೆ.
ಕುಂಭ ರಾಶಿ: ಮನೆಯ ವಿಚಾರವಾಗಿ ನೀವು ನಿಜಕ್ಕೂ ಅದೃಷ್ಟಶಾಲಿಗಳಾಗಿದ್ದೀರಿ. ಕುಟುಂಬದ ಎಲ್ಲ ಸದಸ್ಯರ ಬೆಂಬಲ ಲಭ್ಯವಾಗಲಿದೆ. ಹೊಸ ಹಸಿರಿನ ಜೀವಜಾಲಗಳಿಗಾಗಿ ಪ್ರಯತ್ನ ಮಾಡುತ್ತೀರಿ. ಹೊಸದೇ ಜೀವನಕ್ಕೆ ನಾಂದಿಯಾಗಲಿದೆ. ಇಂದು ದಿನವಿಡೀ ಕಾರ್ಯನಿರತವಾಗಿರುವಿರಿ.
ಮೀನ ರಾಶಿ: ಗೆಳೆಯರು ಹೊಸ ವಿಚಾರಗಳನ್ನು ತಿಳಿಸುವ ತವಕದಲ್ಲಿರುತ್ತಾರೆ. ಆದರೆ ನಿಮ್ಮೊಳಗೆ ತರ್ಕಬದ್ಧ ಚಿಂತನೆ ಇರಲಿ. ಕಗ್ಗಂಟಾದ ಭೂಸಂಬಂಧಿ ವಿಚಾರಕ್ಕೆ ಪರಿಹಾರ ಸಿಗಲಿದೆ. ಇಂದು ಆಧ್ಯಾತ್ಮಿಕ ಸಾಧನೆಗಳನ್ನು ಸಾಧಿಸಲು ಉತ್ತಮ ಯೋಗವಿದೆ. ಯಾವುದೇ ಸರ್ಕಾರಿ ಸಂಸ್ಥೆಯಿಂದ ದೂರಗಾಮಿ ಪ್ರಯೋಜನಗಳನ್ನೂ ನೀವು ಪಡೆಯಬಹುದು. ನಿರಾಶಾದಾಯಕ ಆಲೋಚನೆಗಳನ್ನು ತಪ್ಪಿಸಿ.
PublicNext
18/01/2021 07:16 am