ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ 09.01.2021

ಮೇಷ: ಪ್ರಮುಖವಾದ ವಸ್ತುಗಳ ಬಗ್ಗೆ ಗಮನ ಇದ್ದೇ ಇರಲಿ. ದೈನಂದಿನ ಒತ್ತಡಗಳ ಮಧ್ಯೆ ಖಂಡಿತ ನಿರ್ಲಕ್ಷ್ಯ ತೋರಿಸದಿರಿ. ಜಾಗ್ರತೆ.

ವೃಷಭ: ಈಚಲು ಮರದ ಕೆಳಗೆ ಮಜ್ಜಿಗೆ ಕುಡಿಯುವಂತಹ ಸಾಹಸ ಮಾಡುವುದಕ್ಕೆ ಹೋಗಿ ತಪ್ಪು ಕಲ್ಪನೆಗಳಿಗೆ ನೀವೇ ದಾರಿಯನ್ನು ಸೃಷ್ಟಿಸದಿರಿ.

ಮಿಥುನ: ಅನ್ಯಲಿಂಗಿಗಳೊಡನೆ ಹರಟೆ ಹೊಡೆಯದಿದ್ದರೆ ಉತ್ತಮ. ವರ್ತಮಾನದ ಸೂಕ್ಷ್ಮ ಕಾಲಘಟ್ಟದಲ್ಲಿ ಈ ಕುರಿತು ವಿವೇಚನೆ ಇರಲಿ.

ಕಟಕ: ಹಿರಿಯರ ಆಸ್ತಿಗೆ ಸಂಬಂಧಪಟ್ಟಂತೆ ಮುಖ್ಯ ಕಡತಗಳು ಬಂಧುಗಳಿಂದ ದೊರೆಯುವಂತಹ ಸಾಧ್ಯತೆಗಳು ಇಂದು ಹೆಚ್ಚಾಗಿವೆ.

ಸಿಂಹ: ಈಜುವುದು, ವಾಹನ ಚಲಾಯಿಸುವುದು ಅಥವಾ ವಿದ್ಯುತ್ ಉಪಕರಣಗಳ ಬಳಕೆಯ ವೇಳೆ ಎಚ್ಚರಿಕೆ ಅಗತ್ಯವಾಗಿದೆ.

ಕನ್ಯಾ: ಅನಗತ್ಯವಾಗಿ ಖರ್ಚುವೆಚ್ಚ ಮಾಡುತ್ತಿದ್ದೀರಿ. ಬಾಳಸಂಗಾತಿಯ ಬಳಿ ರ್ಚಚಿಸಿ ಅದನ್ನು ನಿಯಂತ್ರಿಸಲು ಪ್ರಯತ್ನಿಸಿ.

ತುಲಾ: ವಿರೋಧಿಗಳು ನಿಮ್ಮನ್ನು ಅಣಕಿಸುವಂಥ ಪ್ರಯತ್ನ ಮಾಡಿಯಾರು. ಕೋಪಿಸಿಕೊಳ್ಳದೆ ವ್ಯವಧಾನದಿಂದಲೇ ವರ್ತಿಸಿ.

ವೃಶ್ಚಿಕ: ಉನ್ನತ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಆರ್ಥಿಕ ಬೆಂಬಲಗಳನ್ನು ಪಡೆಯುವುದಕ್ಕಾಗಿ ಹೊಸ ದಾರಿ ಗೋಚರಿಸಲಿದೆ.

ಧನುಸ್ಸು: ನಿಮ್ಮ ದೌರ್ಬಲ್ಯವನ್ನು ತಿಳಿದಿರುವಂಥ ಜನರೇ ಬಲೆ ಬೀಸಲು ಸಿದ್ಧರಾಗಿದ್ದಾರೆ. ಮನೋನಿಗ್ರಹವೇ ನಿಮ್ಮ ಪಾಲಿಗೆ ಆಯುಧವಾಗಲಿ.

ಮಕರ: ಬಹಳ ನಿರೀಕ್ಷೆಯ ರಾಜಕೀಯವಾದ ಕಾಲಘಟ್ಟ ಸನಿಹದಲ್ಲಿಯೇ ಇದೆ. ಅದರ ಪೂರ್ವಸಿದ್ಧತೆಗಾಗಿ ಉತ್ತಮ ಪ್ರಾರಂಭವನ್ನು ನಡೆಸಿ.

ಕುಂಭ: ಅಪರೂಪದ ಯೋಗವು ಅತ್ಯುತ್ತಮವಾದ ಸೂಚನೆ ನೀಡಲಿದೆ. ಜಾಣತನದಿಂದ ಅದನ್ನು ಅರಿತುಕೊಂಡರೆ ಲಾಭವಿದೆ.

ಮೀನ: ಭೇಟಿಯಾಗುವಂತಹ ಜನರು ಸ್ವಲ್ಪ ಕಿರಿಕಿರಿಗೆ ಕಾರಣರಾಗಬಹುದು. ಆದರೆ ನಿಮಗೆ ಮಹತ್ವದ ವಿಷಯವನ್ನೇ ತಿಳಿಸಲಿದ್ದಾರೆ.

Edited By : Nirmala Aralikatti
PublicNext

PublicNext

09/01/2021 07:28 am

Cinque Terre

34.56 K

Cinque Terre

1