ಮೇಷ: ದೂರಪ್ರಯಾಣದ ಅವಕಾಶ ಒದಗಿಬರಬಹುದು. ಹೋಗಲು ಹಿಂಜರಿಯದಿರಿ. ಕ್ರಿಯಾಯೋಜನೆಗೆ ಶೀಘ್ರದಲ್ಲಿಯೇ ಚಾಲನೆ ಸಿಗುತ್ತದೆ.
ವೃಷಭ: ಮತ್ತೆ ಮತ್ತೆ ತಲೆಬಿಸಿಯನ್ನು ಉಂಟುಮಾಡುವ ಜನ ಬರುತ್ತಲೇ ಇರುತ್ತಾರೆ. ಆದರೆ ಉತ್ಸಾಹ ಕಳೆದುಕೊಳ್ಳದಿದ್ದರೆ ಸಿದ್ಧಿಯಿದೆ.
ಮಿಥುನ: ನಾನಾ ಬಗೆಯ ವಿಚಾರಗಳ ಬೆನ್ನು ಬಿದ್ದಿದ್ದೀರಿ. ಒಂದೇ ಬಾರಿಗೆ ಎರಡೆರಡು ದೋಣಿಗಳ ಪ್ರಯಾಣವು ಸುರಕ್ಷಿತವೇನಲ್ಲ.
ಕಟಕ: ಮಹತ್ವದ್ದಾದ ಕೆಲಸವೊಂದರ ಕುರಿತಾಗಿ ಆರಂಭದ ಪ್ರಯತ್ನ ನಡೆಸಿ. ಗೆಲುವಿಗೆ ಸರಳ ದಾರಿಯೊಂದು ತೆರೆದುಕೊಳ್ಳದೆ.
ಸಿಂಹ: ಪ್ರಸಿದ್ಧಿಯನ್ನು ಪಡೆಯುವಂತಹ ಸುಯೋಗವು ಲಭ್ಯವಾಗಲಿದೆ. ಚೈತನ್ಯಕ್ಕೆ ಮೂಲವಾಗಿರುವ ಅಗ್ನಿದೇವನನ್ನು ಸ್ತುತಿ ಮಾಡಿ.
ಕನ್ಯಾ: ಮನೆಯ ಸದಸ್ಯರು ತಲೆಗೊಂದು ರೀತಿಯಲ್ಲಿ ಮಾತನಾಡಿ ತಾಳ್ಮೆ ಕೆಡಿಸಬಹುದು. ಆದರೆ ಗೆಲುವು ನಿಮ್ಮ ಪಾಲಿಗೇ ಸಿಗಲಿದೆ.
ತುಲಾ: ಅಪರೂಪದ ಸಿದ್ಧಿಗೆ ಆಧ್ಯಾತ್ಮಿಕವಾದ ಬೆಂಬಲ ಒದಗಿಬರಲಿದೆ. ಭಗವಾನ್ ಸೂರ್ಯದೇವನನ್ನು ಶ್ರದ್ಧಾಭಕ್ತಿಯಿಂದ ಧ್ಯಾನ ಮಾಡಿ.
ವೃಶ್ಚಿಕ: ಗ್ರಹಗಳ ಅನುಕೂಲತೆಗಳು ಸದ್ಯ ಕೂಡಿಬಂದಿವೆ. ರಾಜಯೋಗ ಬಯಸುವಿರಾದರೆ ಪ್ರಯತ್ನದಲ್ಲಿ ತೊಡಗಿಕೊಳ್ಳುವುದು ಉತ್ತಮ.
ಧನುಸ್ಸು: ನೀವು ಹೊಳೆಯುವ ಚಂದ್ರನಂತೆ ಕಾಂತಿಯನ್ನು ಪಡೆಯುವಂತಹ ಯೋಜನೆಯನ್ನು ನಡೆಸಿದ್ದರೆ ಜಯಶೀಲತೆ ನಿಮ್ಮದೇ ಆಗಲಿದೆ.
ಮಕರ : ನಿಮ್ಮಲ್ಲಿನ ಕ್ರಿಯಾಶಕ್ತಿಗೆ ಪ್ರಸನ್ನಚಿತ್ತತೆಯಿಂದ ವಿಶೇಷ ಹೊಳಪು ಮೂಡಿಬರಲಿದೆ. ಪ್ರಶಂಸೆಗೂ ಇದು ದಾರಿ ಮಾಡಿಕೊಡುತ್ತದೆ.
ಕುಂಭ: ನಿಮ್ಮದೇ ಆದ ಹೊಸ ಮಾರ್ಗದಲ್ಲಿ ಸಾಗುವ ವಿಚಾರ ಸರಿಯಾಗಿದೆ. ಜಾಣ್ಮೆಯಿಂದಲೇ ದಾರಿ ಬದಲಾಯಿಸಿದರೆ ಕ್ಷೇಮವಿದೆ.
ಮೀನ: ನಾನಾ ವಿವಿಧ ಲೆಕ್ಕಾಚಾರಗಳಲ್ಲಿ ಮಗ್ನರಾಗಿದ್ದೀರಿ. ಆದರೆ ತಾರ್ಕಿಕವಾದ ಚಿಂತನೆ ನಡೆಸುವುದರಿಂದ ಸೂಕ್ತ ಲಾಭವನ್ನೂ ಗಳಿಸುವಿರಿ.
PublicNext
05/01/2021 07:18 am