ಮೇಷ: ನೆರೆಹೊರೆಯ ಜನರಲ್ಲಿ ಹೆಚ್ಚಿನ ಮಾತುಕತೆ, ಗೆಳೆತನ ಎಲ್ಲವೂ ಇರಲಿ. ಆದರೆ ಎಲ್ಲರನ್ನೂ ಪೂರ್ತಿ ನಂಬಲು ಹೋಗದಿರಿ.
ವೃಷಭ: ಕೆಲಸದ ಸ್ಥಳದಲ್ಲಿ ಅನಗತ್ಯವಾದ ಕಿರಿಕಿರಿಗಳು ಉಂಟಾಗಬಹುದು. ಆದರೂ ದಿನದ ಕೊನೆಗೆ ಮೇಲಧಿಕಾರಿಗಳ ಮೆಚ್ಚುಗೆ ಲಭ್ಯ.
ಮಿಥುನ: ಹುಟ್ಟುಗುಣ ಸುಟ್ಟರೂ ಹೋಗಲಾರದು ಎಂಬ ಗಾದೆಮಾತಿದೆ. ಬದಲಾವಣೆಗೆ ಕೊಂಚ ಅವಕಾಶ ಮಾಡಿಕೊಂಡರೆ ಕ್ಷೇಮವಿದೆ.
ಕಟಕ: ಹೊಸದಾದ ಮನೆಯನ್ನು ರೂಪಿಸುವಂತಹ ವಿಚಾರಕ್ಕೆ ಸಹಕಾರಿಯಾಗಿ ಪ್ರಮುಖವಾದೊಂದು ಬೆಳವಣಿಗೆ ಸದ್ಯವೇ ಜರುಗಲಿದೆ.
ಸಿಂಹ: ಶ್ರೀ ಆದಿತ್ಯ ಹೃದಯ ಸ್ತೋತ್ರವನ್ನು ಪಠಣ ಮಾಡುವುದು ಆರೋಗ್ಯಲಾಭಕ್ಕೆ ಕಾರಣವಾಗುವ ಸಂಜೀವಿನಿಯಾಗಿ ರಕ್ಷಿಸಲಿದೆ.
ಕನ್ಯಾ: ಭಿನ್ನಾಭಿಪ್ರಾಯಗಳಿದ್ದರೂ ಗೊಂದಲಕ್ಕೆ ಮಾತ್ರ ಅವಕಾಶ ಬೇಡ. ಆತ್ಮೀಯರಿಂದ ಒತ್ತಡಗಳಿಗೆ ಸ್ವಲ್ಪ ವಿರಾಮ ದೊರೆಯಲಿದೆ.
ತುಲಾ: ಸಹೋದ್ಯೋಗಿಗಳು ಕಿರುಕುಳ ನೀಡಬಹುದಾದ ಸಾಧ್ಯತೆಯಿದೆ. ಆದರೆ ಒಮ್ಮೆಲೇ ರೇಗಬೇಡಿ. ಜಾಣ್ಮೆಯಿಂದಲೇ ವರ್ತಿಸಿ.
ವೃಶ್ಚಿಕ: ಸಿಹಿ – ಕಹಿ ಸುದ್ದಿಗಳೆರಡನ್ನೂ ಕೇಳುವಂಥ ಸಂದರ್ಭ ಬರಲಿದೆ. ಆದರೆ ನಿರಾಶೆಪಡುವುದು ಬೇಡ. ಮುಂದೆ ಒಳಿತಾಗಲಿದೆ.
ಧನುಸ್ಸು: ಅನಾರೋಗ್ಯದಿಂದ ಬಹಳ ಬೇಗನೆ ಚೇತರಿಕೆ ಹೊಂದುವಿರಿ. ಕುಲದೇವರಿಗೆ ಅರ್ಚನೆ, ಅಭಿಷೇಕ ಮಾಡಿಸುವುದು ಸೂಕ್ತ.
ಮಕರ: ನವ ಉದ್ಯಮಿಗಳಿಗೆ ಹೆಚ್ಚಿನ ಲಾಭಕ್ಕಾಗಿನ ಸುದ್ದಿಯೊಂದು ಸಿಗಲಿದೆ. ಕುಟುಂಬದಲ್ಲಿ ಸಂತಸದ ವಾತಾವರಣವಿರಲಿದೆ.
ಕುಂಭ: ಮುಂದಿನ ದಿನಗಳಲ್ಲಿನ ಕೆಲವು ಪ್ರಮುಖವಾದ ಯೋಜನೆಗಳಿಗಾಗಿ ಪೂರ್ವಭಾವಿ ಮಾತುಕತೆಗೆ ಬೇಕಾದ ಚಾಲನೆ ದೊರೆಯಲಿದೆ.
ಮೀನ: ಹಣಕಾಸಿನ ವಿಚಾರದಲ್ಲಿ ವಿಶೇಷ ಎಚ್ಚರ ಇರಲಿ. ಇಲ್ಲವಾದರೆ ಇಟ್ಟ ಹಣವೆಲ್ಲ ಮಾಯವೇ ಆದೀತು. ಮಹಾಲಕ್ಷ್ಮಿಯ ಧ್ಯಾನ ಮಾಡಿ.
PublicNext
03/01/2021 07:16 am