ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂದಿನ ರಾಶಿ ಭವಿಷ್ಯ: 29 ಡಿಸೆಂಬರ್ 2020

ವೃಷಭ

ಪ್ರತಿ ದಿನದಂತೆ ಇದು ಸಾಮಾನ್ಯ ದಿನ ಆಗಿದೆ. ನೀವು ಎಷ್ಟು ಕಷ್ಟಪಟ್ಟು ಪ್ರಯತ್ನಿಸಿದರೂ, ಸಮಸ್ಯೆಗಳು ಮತ್ತು ಕಷ್ಟಗಳನ್ನು ದೂರವಿರಿಸಲು ಸಾಧ್ಯವಾಗುತ್ತಿಲ್ಲ. ನಿಮಗೆ ನೀಡಲಾದ ಅಥವಾ ಅಗತ್ಯವಾದ ಕೆಲಸ ಮಾಡಲು ಸಂತೋಷವಿಲ್ಲ ಅಥವಾ ಅನುಕೂಲಕರವಾಗಿಲ್ಲ, ಸುಮ್ಮನೆ ಏನೂ ಮಾಡದೆ ಇರುವ ಬದಲು ಕಷ್ಟವನ್ನು ಎದುರಿಸಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಿ.

ಮಿಥುನ

ನೀವು ಎತ್ತ ಸಾಗುತ್ತಿದ್ದೀರಿ ಎಂದು ನಿಮಗೆ ಗೊತ್ತು ಮತ್ತು ನಿಮ್ಮ ಗುರಿಗಳನ್ನು ಮುಟ್ಟಲು ನೀವು ನಿಮ್ಮ ಪ್ರಯತ್ನಗಳನ್ನು ದುಪ್ಪಟ್ಟು ಮಾಡುತ್ತೀರಿ. ನೀವು ಸಂಪೂರ್ಣ ಶಕ್ತಿ ಮತ್ತು ಉತ್ಸಾಹದಿಂದ ತುಂಬಿದ್ದೀರಿ, ಅದು ನಿಮಗೆ ನಿಮ್ಮ ಗುರಿಗಳನ್ನು ಸಾಧಿಸಲು ನೆರವಾಗುತ್ತದೆ. ನೀವು ನಿಮ್ಮ ಕಠಿಣ ಪರಿಶ್ರಮದಿಂದ ಅನಿರೀಕ್ಷಿತ ಲಾಭಗಳನ್ನು ಪಡೆಯುತ್ತೀರಿ. ಕಠಿಣ ದಿನದ ಶ್ರಮದ ನಂತರ ಅಪಾರ ಯಶಸ್ಸು ನಿಮ್ಮದಾಗುತ್ತದೆ.

ಕರ್ಕಾಟಕ

ಭಾವುಕರಾಗುವುದು ನಿಮ್ಮ ಯಶಸ್ಸಿನ ದಾರಿಯಲ್ಲಿ ಅಡ್ಡಿಯಾಗುತ್ತದೆ. ಆದ್ದರಿಂದ ಅತಿಯಾದ ಭಾವನಾತ್ಮಕತೆಯನ್ನು ಬಿಟ್ಟುಬಿಡಿ. ಇದು ಭವಿಷ್ಯಕ್ಕೆ ಅತ್ಯಂತ ಅಪಾಯಕಾರಿ. ಮಾತಿನ ಬಲ ಮತ್ತು ಸೌಜನ್ಯಪೂರ್ಣ ನಡವಳಿಕೆಯಿಂದ ನೀವು ಜನರನ್ನು ಗೆಲ್ಲುತ್ತೀರಿ.

ಸಿಂಹ

ನೀವು ಅಸಾಧಾರಣ ಆತ್ಮವಿಶ್ವಾಸದಿಂದ ತುಂಬಿರುತ್ತೀರಿ ಮತ್ತು ರಿಸ್ಕ್​​ ತೆಗೆದುಕೊಳ್ಳಲು ಸಮರ್ಥರಾಗುತ್ತೀರಿ. ಕ್ರೀಡಾಪಟುಗಳು ತಮ್ಮ ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಗತಿ ಕಾಣಲು ಶಕ್ತರಾಗುತ್ತಾರೆ. ನಿಮ್ಮ ದಾರಿಯಲ್ಲಿ ಎದುರಾಗುವ ಯಾವುದೇ ಅಡೆತಡೆಗಳನ್ನು ನಿವಾರಿಸಲು ನಿಮ್ಮ ಇಡೀ ಶಕ್ತಿ ಬಳಸಿ ಸಫಲರಾಗುತ್ತೀರಿ. ಇದು ನಿಮಗೆ ಒಳ್ಳೆಯ ದಿನವಾಗಿದೆ, ವದಂತಿಗಳನ್ನು ನಿಯಂತ್ರಿಸಿರಿ.

ಕನ್ಯಾ

ನಿಮ್ಮ ಹಣಕಾಸಿನ ಸವಾಲುಗಳು ನೀವು ಮತ್ತಷ್ಟು ಗಟ್ಟಿಯಾಗುವಂತೆ ಮಾಡುತ್ತದೆ. ನೀವು ಸಮಸ್ಯೆ ಪರಿಹಾರದ ಆವಿಷ್ಕಾರಕ ಆಲೋಚನೆಗಳು ಮತ್ತು ಸುಧಾರಿತ ವಿಧಾನಗಳನ್ನು ಕಂಡುಕೊಳ್ಳುತ್ತೀರಿ. ನಿಮ್ಮ ಪ್ರಸ್ತುತದ ವ್ಯಾಪಾರದ ಆಲೋಚನೆಗಳು ಅದ್ಭುತಗಳನ್ನು ಉಂಟು ಮಾಡಲಿವೆ.

ತುಲಾ

ನಿಮ್ಮಲ್ಲಿರುವ ಒಳಗಿನ ಕಲಾವಿದ ಇಂದು ಮೇಲೆ ಬರುತ್ತಾನೆ ಮತ್ತು ನೀವು ನಿಮ್ಮ ಕಲ್ಪಾಶಕ್ತಿಯನ್ನೂ ಪ್ರದರ್ಶಿಸುತ್ತೀರಿ. ನೀವು ನಿಮ್ಮ ಆಸಕ್ತಿಯ ವಿಷಯಗಳತ್ತ ಗಮನ ನೀಡಲು ಸಾಧ್ಯವಾಗುತ್ತದೆ. ನಿಮ್ಮ ಆಸಕ್ತಿಯ ಕ್ಷೇತ್ರದಲ್ಲಿ ತೊಡಗಿಕೊಂಡವರು ಮತ್ತಷ್ಟು ಮುಂದೆ ಸಾಗುತ್ತಾರೆ. ನೀವು ಇಂದು ಅನುಕೂಲಕರ ಕಾನೂನು ವ್ಯವಹಾರಗಳನ್ನು ಸಹಿ ಹಾಕುವ ಸಾಧ್ಯತೆ ಇದೆ. ಈ ದಿನ ನಿಮಗೆ ಅತ್ಯಂತ ಉತ್ತಮ ಮತ್ತು ಯಶಸ್ವಿ ದಿನವಾಗಿರುತ್ತದೆ.

ವೃಶ್ಚಿಕ

ನೀವು ಇಂದು ಆಕಾಶಕ್ಕೆ ಏಣಿ ಹಾಕುವ ಮನಸ್ಥಿತಿಯಲ್ಲಿರುತ್ತೀರಿ. ನೀವು ಹಲವು ಆಲೋಚನೆಗಳು ಮತ್ತು ಹಳೆಯ ನೆನಪುಗಳ ಸುಳಿಯಲ್ಲಿ ಸಿಲುಕುತ್ತೀರಿ. ಆದರೆ, ಬಹಳ ಬೇಗನೆ ನೀವು ಒಮ್ಮೆ ಕಳೆದು ಹೋದ ಸಮಯ ನಂತರ ಮತ್ತೆ ಬಾರದು ಎಂದು ತಿಳಿಯುತ್ತೀರಿ. ಆದ್ದರಿಂದ ನೀವು ಮನಸ್ಸು ಬದಲಿಸಿ ನಿಮ್ಮ ಜೀವನಕ್ಕೆ ಇಂದಿನಿಂದಲೇ ಹೊಸ ಅಧ್ಯಾಯದ ಪ್ರಾರಂಭ ಮಾಡುತ್ತೀರಿ.

ಧನು

ಅತ್ಯಂತ ಸಂಕಷ್ಟದ ಸಮಯದಲ್ಲೂ ಭರವಸೆಯ ಬೆಳಕು ಇದ್ದೇ ಇರುತ್ತದೆ. ಈ ದಿನ ನಿಮಗೆ ಸಾಕಷ್ಟು ಏರಿಳಿತಗಳನ್ನು ಹೊಂದಿದೆ. ಆದರೆ, ನೀವು ಪ್ರಚಂಡ ಅಲೆಗಳ ನಡುವೆ ದೋಣಿ ನಡೆಸುತ್ತಿದ್ದೀರಿ ಮತ್ತು ಎಲ್ಲಾ ಸಮಸ್ಯೆಗಳ ಅಲೆಗಳನ್ನೂ ದಾಟಿ ದಡ ಸೇರುತ್ತೀರಿ. ನಿಮ್ಮ ಪ್ರೀತಿಪಾತ್ರರು ನೀಡುವ ಸಲಹೆಯನ್ನು ಸ್ವೀಕರಿಸಿ.

ಮಕರ

ನಿಮ್ಮ ಪ್ರಿಯತಮೆ ಇಂದು ಹಲವು ಆಶ್ಚರ್ಯಗಳನ್ನು ಎದುರಿಸುತ್ತಾರೆ. ನೀವು ಅತ್ಯಂತ ಪ್ರಣಯದ ಮನಸ್ಥಿತಿಯಲ್ಲಿದ್ದು ನಿಮ್ಮ ಪ್ರೀತಿಪಾತ್ರರು ನಿಮಗೆ ಹೇಳುವ ಪ್ರತಿಯೊಂದು ಬಯಕೆಯನ್ನೂ ಈಡೇರಿಸುತ್ತೀರಿ. ನೀವಿಬ್ಬರೂ ಶಾಪಿಂಗ್ ನಡೆಸಿ ಆನಂದಿಸುತ್ತೀರಿ. ಅತಿಯಾದ ಖರ್ಚುಗಳು ನಿಮ್ಮನ್ನು ಇಂದು ಉತ್ಸಾಹದಲ್ಲಿರಿಸುತ್ತವೆ. ನಿಮ್ಮ ಪ್ರಿಯತಮೆಯ ಸಂತೋಷ ನಿಮಗೆ ಬೇಕಾಗಿದ್ದು, ಅದನ್ನು ನೀವು ಸಾಧಿಸುತ್ತೀರಿ. ಆದರೆ, ದಿನದ ಅಂತ್ಯಕ್ಕೆ, ನಿಮ್ಮ ಜೇಬು ಖಾಲಿಯಾಗಿದ್ದಕ್ಕೆ ವಿಷಾದಪಡುತ್ತೀರಿ.

ಕುಂಭ

ಇಂದು ನಿಮಗೆ ಪ್ರವಾಸದ ಸಾಧ್ಯತೆಗಳಿವೆ. ನೀವು ಒಂಟಿಯಾಗಿ ಪ್ರಯಾಣ ಮಾಡುವುದು ಸೂಕ್ತ, ಏಕೆಂದರೆ ನಿಮ್ಮೊಂದಿಗೆ ವಿಭಿನ್ನ ಅಭಿರುಚಿಯ ವ್ಯಕ್ತಿಗಳನ್ನು ಕರೆದೊಯ್ದರೆ, ಅವರ ಆದ್ಯತೆಗಳು ನಿಮ್ಮ ಮನಸ್ಸು ಹಾಳು ಮಾಡಿ ಪ್ರವಾಸ ಹಾಳು ಮಾಡುತ್ತವೆ. ಆದಾಗ್ಯೂ, ಒಮ್ಮೆ ಅಂತಹ ಪರಿಸ್ಥಿತಿಗೆ ಬಂದರೆ ನೀವು ನಿಮ್ಮನ್ನು ಹೊಂದಿಕೊಳ್ಳಲು ಪ್ರಯತ್ನಿಸುತ್ತೀರಿ ಮತ್ತು ಅದರಲ್ಲಿಯೇ ಆನಂದವನ್ನೂ ಅನುಭವಿಸುತ್ತೀರಿ. ಕೊರತೆಯನ್ನು ಸಾಮರ್ಥ್ಯವಾಗಿ ಪರಿವರ್ತಿಸುವುದು ನಿಮ್ಮ ಗುಣ.

ಮೀನ

ಅಜಾಗರೂಕತೆಯ ಪ್ರವೃತ್ತಿ ನಿಮ್ಮ ಕುಸಿತಕ್ಕೆ ಪ್ರಮುಖ ಕಾರಣ. ನಿಮ್ಮ ಕೆಲಸದ ಸ್ಥಳದಲ್ಲಿ ಇಂದು ಜವಾಬ್ದಾರಿಯುತ ವರ್ತನೆ ಮತ್ತು ಕಾರ್ಯಗಳನ್ನು ಮಾಡಿರಿ. ಜಾಗರೂಕತೆ ಹಾಗೂ ಗಮನ ಕೇಂದ್ರೀಕೃತವಾಗಿರಲಿ, ಮತ್ತು ನೀವು ಯಾವುದೇ ಒಳಬರುವ ತೊಂದರೆಗಳನ್ನು ನಿವಾರಿಸಲು ಶಕ್ತರಾಗುತ್ತೀರಿ. ಇಂದು ವಾಸ್ತವಗೊಳ್ಳುವ ದಿನ ಮತ್ತು ಬಹಳ ದೀರ್ಘಕಾಲದಿಂದ ಶ್ರಮಿಸುತ್ತಿರುವ ಯೋಜನೆಗಳು ಮತ್ತಿತರೆ ಸಂಗತಿಗಳು ಪೂರ್ಣಗೊಳ್ಳಲು ಹತ್ತಿರವಾಗುತ್ತವೆ ಮತ್ತು ಫಲ ನೀಡಲು ಪ್ರಾರಂಭಿಸುತ್ತವೆ.

Edited By : Nagaraj Tulugeri
PublicNext

PublicNext

29/12/2020 08:11 am

Cinque Terre

19.49 K

Cinque Terre

0