", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/235762-1738774612-WhatsApp-Image-2025-02-05-at-10.26.21-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nagaraj.talugeri" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ನವದೆಹಲಿ: ಕಳೆದ ಎರಡು ಅವಧಿಗೆ ಆಮ್ ಆದ್ಮಿ ಪಕ್ಷ ಪ್ರಾಬಲ್ಯ ಸಾಧಿಸಿದ್ದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅದಕ್ಕೂ ಮುನ್ನ ಕಾಂಗ್ರೆಸ್ ಹಿಡಿತ ಸಾ...Read more" } ", "keywords": "Delhi Elections 2025, BJP comeback, Delhi Assembly Elections, AAP, Congress, exit polls, election results, Delhi politics, voting updates, election news, India elections, Delhi election analysis ¹ ,,Politics", "url": "https://publicnext.com/node" }
ನವದೆಹಲಿ: ಕಳೆದ ಎರಡು ಅವಧಿಗೆ ಆಮ್ ಆದ್ಮಿ ಪಕ್ಷ ಪ್ರಾಬಲ್ಯ ಸಾಧಿಸಿದ್ದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅದಕ್ಕೂ ಮುನ್ನ ಕಾಂಗ್ರೆಸ್ ಹಿಡಿತ ಸಾಧಿಸಿತ್ತು. ಇಂದು ವಿಧಾನಸಭೆ ಚುನಾವಣೆಗೆ ಮತದಾನ ನಡೆದಿದೆ. ದೆಹಲಿಯ ಪ್ರಜಾಪ್ರಭುಗಳು ಉತ್ಸುಕರಾಗಿ ಮತದಾನ ಮಾಡಿದ್ದಾರೆ. ಹಲವು ಪ್ರಮುಖ ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷೆ ನಡೆಸಿವೆ. ಸಮೀಕ್ಷೆಗಳ ಪ್ರಕಾರ ಬಿಜೆಪಿಗೆ ಬಹುಮತ ಸಿಕ್ಕಿದೆ.
ಮೂಲಸೌಕರ್ಯ, ಉಚಿತ ಶಿಕ್ಷಣ ಹಾಗೂ ಆರೋಗ್ಯ ಸೌಲಭ್ಯ ನೀಡಿದ ಆಮ್ ಆದ್ಮಿ ಪಕ್ಷಕ್ಕೆ ದೆಹಲಿಯ ಮಹಾಜನತೆ ಎರಡು ಬಾರಿ ಅಧಿಕಾರ ಕೊಟ್ಟಿದ್ದಾರೆ. ಆದ್ರೆ ಅಬಕಾರಿ ಮದ್ಯ ನೀತಿ ಹಗರಣ, ಹಾಗೂ ಭ್ರಷ್ಟಾಚಾರದ ಆರೋಪ ಕೇಳಿ ಬಂದ ನಂತರ ಎಎಪಿ ಜನಪ್ರಿಯತೆ ಕುಗ್ಗಿದ್ದಂತೂ ಸುಳ್ಳಲ್ಲ. ಇನ್ನು ಚುನಾವಣಾ ಪ್ರಚಾರದ ವೇಳೆಯೂ ಕಾಂಗ್ರೆಸ್ ಹಾಗೂ ಬಿಜೆಪಿಯ ರಾಷ್ಟ್ರೀಯ ನಾಯಕರು ಅಬ್ಬರದ ಪ್ರಚಾರ ಮಾಡಿದ್ದರು. ಈ ನಡುವೆ ಮತದಾನೋತ್ತರ ಸಮೀಕ್ಷೆಯಲ್ಲಿ ಮತದಾರ ಪ್ರಭುಗಳು ಕೇಸರಿ ಪಾಳಯಕ್ಕೆ ಜೈ ಎಂದಿದ್ದಾರೆ. ಆದ್ರೆ ಅಂತಿಮವಾಗಿ ಫಲಿತಾಂಶ ಏನಾಲಿದೆ ಎಂಬುದನ್ನು ಕಾದು ನೋಡಬೇಕಿದೆ.
PublicNext
05/02/2025 10:27 pm