", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/222042-1738746772-WhatsApp-Image-2025-02-05-at-1.13.19-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SharathRaju" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಬಣಬಡಿದಾಟ ನಡೆಯುತ್ತಿರುವ ಬೆನ್ನಲ್ಲೇ ಬಿಜೆಪಿ ಹಿರಿಯ ನಾಯಕರಾಗಿದ್ದ ಪಕ್ಷದಿಂದ ದೂರ ಉಳಿದಿದ್ದ ಮಾಜಿ ಸಚಿವ ಕ...Read more" } ", "keywords": "K.S. Eshwarappa, BJP, Karnataka politics, Indian politician, expelled BJP leader, Lok Sabha polls, independent candidate. ,,Politics", "url": "https://publicnext.com/node" } ಮಾಜಿ ಸಚಿವ ಕೆಎಸ್ ಈಶ್ವರಪ್ಪ ಬಿಜೆಪಿ ಸೇರ್ಪಡೆಯಾಗುತ್ತಾರಾ?
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾಜಿ ಸಚಿವ ಕೆಎಸ್ ಈಶ್ವರಪ್ಪ ಬಿಜೆಪಿ ಸೇರ್ಪಡೆಯಾಗುತ್ತಾರಾ?

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಬಣಬಡಿದಾಟ ನಡೆಯುತ್ತಿರುವ ಬೆನ್ನಲ್ಲೇ ಬಿಜೆಪಿ ಹಿರಿಯ ನಾಯಕರಾಗಿದ್ದ ಪಕ್ಷದಿಂದ ದೂರ ಉಳಿದಿದ್ದ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಮತ್ತೆ ಬಿಜೆಪಿ ಸೇರ್ಪಡೆ ಬಗ್ಗೆ ಗುಸು ಗುಸು ಚರ್ಚೆ ಶುರುವಾಗಿದೆ.

ವಿಜಯಪುರದ ಬಸವನ ಬಾಗೇವಾಡಿಯಿಂದ ನೂರಾರು ಸ್ವಾಮೀಜಿಗಳ ಸಮ್ಮುಖದಲ್ಲಿ ಕ್ರಾಂತಿವೀರ ಬ್ರಿಗೇಡ್ ಆರಂಭಿಸಿರುವ ಈಶ್ವರಪ್ಪ ಧರ್ಮ ಮತ್ತು ಗೋಮಾತೆಯ ಸಂರಕ್ಷಣೆ ಹೆಸರಿನಲ್ಲಿ ಬ್ರಿಗೇಡ್ ಕಾರ್ಯಾರಂಭ ಮಾಡಿ ರಾಜ್ಯಾದ್ಯಂತ ಸಂಚರಿಸಲಿದೆ. ಲೋಕಸಭಾ ಚುನಾವಣೆಯಲ್ಲಿ ತಮ್ಮ ಪುತ್ರನಿಗೆ ಟಿಕೆಟ್ ನೀಡದಿರೋದನ್ನ ಖಂಡಿಸಿ ಬಿಎಸ್ ವೈ ವಿರುದ್ಧ ಸೆಡಿದೆದಿದ್ದರು. ಶಿವಮೊಗ್ಗ ಲೋಕಸಭೆಯಿಂದ ಪಕ್ಷೇತರಾಗಿ ಚುನಾವಣೆ ಸ್ಪರ್ಧಿಸಿ ಸೋಲನಪ್ಪಿದರು. ಇದೀಗ ಮತ್ತ ಕ್ರಾಂತಿವೀರ ಬ್ರಿಗೇಡ್ ಮೂಲಕ ರಾಜ್ಯಾದ್ಯಂತ ಸಂಚರಿಸಲಿದ್ದಾರೆ. ನಿನ್ನೆ ಆರಂಭವಾದ ಕ್ರಾಂತಿವೀರ ಬ್ರಿಗೇಡ್ ನಲ್ಲಿ ಸ್ವಾಮೀಜಿಗಳು ಈಶ್ವರಪ್ಪನವರನ್ನ ಬಿಜೆಪಿಗೆ ಮರು ಸೇರ್ಪಡೆ ಮಾಡಿಸಿಕೊಳ್ಳಿ ಎಂದು ಬಿಜೆಪಿ ನಾಯಕರಿಗೆ ಸಲಹೆ ನೀಡಿದ್ದಾರೆ. ಬಿಜೆಪಿಯಿಂದ ಮುಖ್ಯಮಂತ್ರಿಯಾಗಬೇಕಿದ್ದ ಈಶ್ವರಪ್ಪ ಅವರನ್ನು ಮೂಲೆಗುಂಪು ಮಾಡಿದ್ದು ಸರಿಯಲ್ಲ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಿ ಎಂದಿದ್ದಾರೆ.

ಈಶ್ವರಪ್ಪನವರು ಬಿಎಸ್ ವೈ ವಿರುದ್ಧ ಮಾತ್ರ ಬಿಜೆಪಿಯಿಂದ ಮಾನಸಿಕವಾಗಿ ಅವರು ದೂರ ಹೋಗಿಲ್ಲ. ಹೀಗಾಗಿ ಮತ್ತೆ ಬಿಜೆಪಿಗೆ ಬಂದ್ರೆ ಆಶ್ಚರ್ಯವಿಲ್ಲ ಎಂದು ಪಕ್ಷದ ಒಳಗಡೆ ಚರ್ಚೆಯಾಗುತ್ತಿದೆ. ಈಗಾಗಲೇ ಯತ್ನಾಳ್ ನೇತೃತ್ವದ ರೆಬಲ್ಸ್ ಟೀಂ ಸಹ ಬಿಎಸ್ ವೈ ಕುಟುಂಬದ ವಿರುದ್ಧ ಹೈಕಮಾಂಡ್ ದೂರು ನೀಡಿದೆ ವಿಜಯೇಂದ್ರರನ್ನ ರಾಜ್ಯಾಧ್ಯಕ್ಷ ಸ್ಥಾನದಿಂದ ಕೇಳಗಿಳಿಸುವ ಪ್ರಯತ್ನ ನಡೆಯುತ್ತಿದ್ದ ಒಂದು ವೇಳೆ ವಿಜಯೇಂದ್ರ ಕೇಳಗಿಳಿದರೆ ಈಶ್ವರಪ್ಪ ಮತ್ತೆ ಬಿಜೆಪಿ ಸೇರ್ಪಡೆಯಾಗುವ ಹಾದಿ ಸಲಿಸು ಎಂದೆಲ್ಲ ಚರ್ಚೆ ನಡೆಯುತ್ತಿದೆ. ಆದ್ರೆ‌ ಈಶ್ವರಪ್ಪ ಸಧ್ಯಕ್ಕೆ ಬಿಜೆಪಿ ಸೇರ್ಪಡೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ರಾಜ್ಯಾದ್ಯಂತ ಕ್ರಾಂತಿವೀರ ಬ್ರಿಗೇಡ್ ಮೂಲಕ ಸಂಚರಿಸಲು ನಿರ್ಧರಿಸಿದ್ದಾರೆ.

Edited By : Vijay Kumar
PublicNext

PublicNext

05/02/2025 02:43 pm

Cinque Terre

8.46 K

Cinque Terre

0

ಸಂಬಂಧಿತ ಸುದ್ದಿ