ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ತಕ್ಷಣ ಜನರ ಸಮಸ್ಯೆ ಬಗೆಹರಿಸಲು ಜನಸ್ಪಂದನೆ ಹೆಸರಿನಲ್ಲಿ ಜನತಾ ದರ್ಶನ ಮಾಡಿದರು. ಗೃಹ ಕಚೇರಿ ಕೃಷ್ಣ ಮತ್ತು ವಿಧಾನಸೌಧದಲ್ಲಿ ಎರಡು ಬಾರಿ ಯಶಸ್ವಿಯಾಗಿ ಜನತಾ ದರ್ಶನ ನಡೆಸಿದರು. ಸಿಎಂ ಸಿದ್ದರಾಮಯ್ಯನವರ ಜನತಾ ದರ್ಶನಕ್ಕೆ ಒಳ್ಳೆಯ ರೆಸ್ಪಾನ್ಸ್ ಸಹ ಸಿಕ್ಕಿತು. ಕೆಲವರಿಗೆ ಅಲ್ಲೇ ಪರಿಹಾರ ಸಿಕ್ಕರೆ, ಇನ್ನೂ ಕೆಲವರಿಗೆ ತದನಂತರ ಸಿಕ್ಕಿದೆ. ಇನ್ನೂ ಕೆಲವರಿಗೆ ಪರಿಹಾರ ಮರಿಚಿಕೆಯಾಗಿದೆ. ಆದರೆ ಜನತಾ ದರ್ಶನದಿಂದ ಕೆಲವರಿಗೆ ಒಂದಿಷ್ಟು ಸಹಾಯವಂತೂ ಆಗಿದೆ. ಜನತಾ ದರ್ಶನಕ್ಕೆ ಸಾವಿರಾರು ಜನರು ಜಿಲ್ಲೆಗಳಿಂದ ಬರುತ್ತಿದ್ದನ್ನ ನೋಡಿ ಜಿಲ್ಲಾ ಮಟ್ಟಲ್ಲೇ ಸಚಿವರ ನೇತೃತ್ವದಲ್ಲಿ ಜನತಾ ದರ್ಶನ ಮಾಡಿ ಜಿಲ್ಲೆಗಳಲ್ಲೇ ವಿಲೇವಾರಿ ಮಾಡಲು ಸಚಿವರಿಗೆ ಸೂಚಿಸಿದರು.
ಸಿಎಂ ಸೂಚನೆ ಮೇರಿಗೆ ಒಂದು ಬಾರಿ ಸಚಿವರು ಜಿಲ್ಲೆಗಳಲ್ಲಿ ಜನತಾ ದರ್ಶನ ಮಾಡಿದ್ರು ಆದ್ರೆ ತದನಂತರ ಕೆಲ ಸಚಿವರನ್ನ ಹೊರತುಪಡಿಸಿದ್ರೆ ಬೇರೆ ಯಾವ ಸಚಿವರು ಮತ್ತೆ ಜನತಾ ದರ್ಶನ ಮಾಡಿರೋದು ಕಡಿಮೆ. ಕನಿಷ್ಠ ಆರು ಅಥವಾ ಮೂರು ತಿಂಗಳಿಗೊಮ್ಮೆಯಾದ್ರು ನಡೆಸಲೂ ಸೂಚಿಸಿದ್ರು ಆದ್ರೆ ಸಿಎಂ ಸಿದ್ದರಾಮಯ್ಯ ಸಹ 2024ರ ಫೆಬ್ರವರಿಯಲ್ಲಿ ಮಾಡಿದ್ದೇ ಕೊನೆ ಜನತಾ ದರ್ಶನ ತದನಂತರ ಎಲೆಕ್ಷನ್ ಮೂಡಾ ಕೇಸು ಅದು ಇದು ಎಂದು ಇದುವರೆಗೂ ಸಿಎಂ ಜನತಾ ದರ್ಶನ ಮಾಡಿಲ್ಲ. ಇನ್ನೂ ನಮ್ಮ ಸಚಿವರೂ ಸಹ ಜಿಲ್ಲೆಗಳಲ್ಲಿ ಜನತಾ ದರ್ಶನ ಮಾಡೋದು ಮರೆತು ಬಿಟ್ಟಿದ್ದಾರೆ. ಸಂತೋಷ್ ಲಾಡ್ ಸೇರಿದಂತೆ ಕೆಲ ಸಚಿವರು ಮಾತ್ರ ಬಿಟ್ಟರೇ ಬೇರೆ ಯಾವ ಸಚಿವರು ಜಿಲ್ಲೆಗಳಲ್ಲಿ ಜನತಾ ದರ್ಶನ ಮಾಡಿದ್ದು ಕಂಡಿಲ್ಲ.
ಜನತಾ ದರ್ಶನದಿಂದಲ್ಲೇ ಎಲ್ಲವೂ ಬಗೆಹರಿಯುತ್ತೆ ಎಂದು ಹೇಳಲಾಗದು. ಆದ್ರೆ ಒಂದಿಷ್ಟು ಜನರ ಸಮಸ್ಯೆಗಳಿಗೆ ಅಲ್ಲೇ ಪರಿಹಾರವಂತೂ ಸಿಗುತಿತ್ತು. ಫೈಲ್‌ಗಳನ್ನು ಹಿಡಿದು ಸರ್ಕಾರಿ ಕಚೇರಿಗಳಿಗೆ ತಿರುಗಿ ಸಾಕಾಗುತ್ತಿದ್ದ ಜನರಿಗೆ ಜನತಾ ದರ್ಶನದಿಂದ ಅಲ್ಲೇ ಪರಿಹಾರ ಸಿಕ್ಕ ಉದಾಹರಣೆಗಳಿವೆ.
ಪ್ರಮುಖವಾಗಿ ಈಗ ಜನರಿಗೆ ಸಿಎಂ ಜನತಾ ದರ್ಶನ ಮತ್ತು ಸಚಿವರ ಜನತಾ ದರ್ಶನ ಅಗತ್ಯವಿತ್ತು. ಕಾರಣ ರಾಜ್ಯದಲ್ಲಿ ಈಗ ಮೈಕ್ರೋ ಫೈನಾನ್ಸ್ ಹಾವಳಿ ಹೆಚ್ಚಿಗಿ ಸಾಕಷ್ಟು ಜನ ಸಾವನ್ನಪ್ಪುತ್ತಿದ್ದಾರೆ ಇಂಥ ಸಮಯದಲ್ಲಿ ಧೈರ್ಯ ಹೇಳಲು ಈ ಜನತಾ ದರ್ಶನ ಬೇಕಾಗಿತ್ತು. ಆದ್ರೆ ಯಾಕೋ ಆರಂಭದಲ್ಲಿ ಉತ್ಸಾಹದಿಂದ ಆರಂಭಿಸಿದ್ದ ಜನತಾ ದರ್ಶನ ಈಗ ಸಿಎಂ ಸೇರಿದಂತೆ ಎಲ್ಲಾ ಸಚಿವರು ಮರೆತುಬಿಟ್ಟಿದ್ದಾರೆ. ಸಿಎಂ ಗೆ ಮುಡಾ ಟೆನ್ಷನ್ ಆಗಿದ್ರೆ ಸಚಿವರಿಗೆ ಸಂಪುಟ ಪುನರಚನೆಯಾದ್ರೆ ಸ್ಥಾನ ಇರುತ್ತೋ ಇಲ್ವೋ ಅನ್ನೋ ಟೆನ್ಷನ್ ಒಟ್ಟಾರೆ ಅಲ್ಪಸ್ವಲ್ಪ ಸಾರ್ವಜನಿಕರಗೆ ಸಹಾಯವಾಗುತ್ತಿದ್ದ ಜನತಾ ದರ್ಶನವನ್ನ ರಾಜ್ಯ ಸರ್ಕಾರ ಮರೆತು ಬಿಟ್ಟಿರೋದು ವಿಷಾದನಿಯ. ಈಗಲಾದರು ರಾಜ್ಯ ಸರ್ಕಾರ ಎಚ್ಚೆತ್ತು ಜನರ ಸಮಸ್ಯೆ ಆಲಿಸಲು ಮತ್ತೆ ಎಲ್ಲಾ ಜಿಲ್ಲೆಗಳಲ್ಲಿ ಜನತಾ ದರ್ಶನ ಆರಂಭಿಸಲಿ ಅನ್ನೋದು ನಮ್ಮ ಆಶಯ.
ಶರತ್ ಕಪ್ಪನಹಳ್ಳಿ, ರಾಜಕೀಯ ವರದಿಗಾರ
PublicNext
05/02/2025 12:41 pm