ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೆಹಲಿ ವಿಧಾನಸಭೆ ಚುನಾವಣೆ : ಮಧ್ಯಾಹ್ನ 3 ಗಂಟೆಯವರೆಗೆ ಶೇ. 46.40 ರಷ್ಟು ಮತದಾನ

ನವದೆಹಲಿ: ದೆಹಲಿಯಲ್ಲಿ ಮಧ್ಯಾಹ್ನ 3 ಗಂಟೆಯವರೆಗೆ ಶೇಕಡಾ 46.40 ರಷ್ಟು ಮತದಾನ ದಾಖಲಾಗಿದೆ. ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆಯವರೆಗೆ ನಡೆಯಲಿದೆ.

70 ಸದಸ್ಯರ ವಿಧಾನಸಭೆಯನ್ನು ಆಯ್ಕೆ ಮಾಡುವ ದೆಹಲಿ ವಿಧಾನಸಭಾ ಚುನಾವಣೆಯ ಮತದಾನವು ಫೆಬ್ರವರಿ 5 ರಂದು ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಯಿತು ಮತ್ತು ರಾಷ್ಟ್ರ ರಾಜಧಾನಿಯ 13,766 ಮತಗಟ್ಟೆಗಳಲ್ಲಿ ಸಂಜೆ 6 ರವರೆಗೆ ಮುಂದುವರಿಯುತ್ತದೆ, ಎಎಪಿ, ಕಾಂಗ್ರೆಸ್ ಮತ್ತು ಬಿಜೆಪಿ ತೀವ್ರ ತ್ರಿಕೋನ ಸ್ಪರ್ಧೆಯಲ್ಲಿ ತೊಡಗಿವೆ.

ಕೆಲವು ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದಂತೆ ಮತದಾನ ಬಹುತೇಕ ಶಾಂತಿಯುತವಾಗಿ ಸಾಗುತ್ತಿದೆ.

ಕಸ್ತುರ್ಬಾ ನಗರದಲ್ಲಿ ಇಬ್ಬರು ನಕಲಿ ಮತದಾನಕ್ಕೆ ಯತ್ನಿಸಿದ್ದು, ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

ಮತದಾರರಿಗೆ ಹಣ ಹಂಚಲಾಗಿದೆ-ಸಿಸೋಡಿಯಾ: ಈ ಮಧ್ಯೆ, ಗ್ರೇಟರ್ ಕೈಲಾಶ್ ಕ್ಷೇತ್ರದ ಆಪ್ ಸ್ಪರ್ಧಿ ಸೌರಭ್ ಭಾರಧ್ವಾಜ್ ಅವರು, ಚಿರಾಗ್ ದಿಲ್ಲಿ ಪ್ರದೇಶದಲ್ಲಿ ಜನ ಮತ ಹಾಕದಂತೆ ತಡೆಯೊಡ್ಡಲಾಗಿದೆ ಎಂದು ಆರೋಪಿಸಿದರು.

Edited By : Abhishek Kamoji
PublicNext

PublicNext

05/02/2025 04:16 pm

Cinque Terre

28.19 K

Cinque Terre

0

ಸಂಬಂಧಿತ ಸುದ್ದಿ