", "articleSection": "Cultural Activity,Religion", "image": { "@type": "ImageObject", "url": "https://prod.cdn.publicnext.com/s3fs-public/235762-1738767862-Untitled-design---2025-02-05T203417.211.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "RuderegowdaGadag" }, "editor": { "@type": "Person", "name": "nagaraj.talugeri" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಗದಗ: ಎಲ್ಲ ಧರ್ಮೀಯರು, ಎಲ್ಲ ಜಾತಿಯವರು ಒಂದು ಎಂದು ನಡೆದುಕೊಳ್ಳುವ ಶ್ರದ್ಧಾಕೇಂದ್ರ ಅದು ಸಿದ್ಧಾರೂಢ ಮಠ. ಎಲ್ಲ ಮಠಮಾನ್ಯಗಳೊಂದಿಗೆ ಮೆಚ್ಚುಗೆ...Read more" } ", "keywords": ""Gadag news, Shri Siddharoodha, Kathamruta Grantha, centenary celebrations, Jagadguru Shri Siddharoodha Jyothi Ratha Yatra, Hindu spiritual leaders, Indian philosophy, religious events, Gadag cultural events" ,Gadag,Cultural-Activity,Religion", "url": "https://publicnext.com/node" } ಗದಗ: ‘ಶ್ರೀಸಿದ್ಧಾರೂಢ’ ಕಥಾಮೃತ ಗ್ರಂಥದ ಶತಮಾನೋತ್ಸವ - ‘ಜಗದ್ಗುರು ಶ್ರೀ ಸಿದ್ಧಾರೂಢ ಜ್ಯೋತಿ ರಥ ಯಾತ್ರೆ’ಗೆ ಸ್ವಾಗತ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ‘ಶ್ರೀಸಿದ್ಧಾರೂಢ’ ಕಥಾಮೃತ ಗ್ರಂಥದ ಶತಮಾನೋತ್ಸವ - ‘ಜಗದ್ಗುರು ಶ್ರೀ ಸಿದ್ಧಾರೂಢ ಜ್ಯೋತಿ ರಥ ಯಾತ್ರೆ’ಗೆ ಸ್ವಾಗತ

ಗದಗ: ಎಲ್ಲ ಧರ್ಮೀಯರು, ಎಲ್ಲ ಜಾತಿಯವರು ಒಂದು ಎಂದು ನಡೆದುಕೊಳ್ಳುವ ಶ್ರದ್ಧಾಕೇಂದ್ರ ಅದು ಸಿದ್ಧಾರೂಢ ಮಠ. ಎಲ್ಲ ಮಠಮಾನ್ಯಗಳೊಂದಿಗೆ ಮೆಚ್ಚುಗೆ ಪಡೆದು ಸಮಾಜದಲ್ಲಿ ಭ್ರಾತೃತ್ವ ಭಾವನೆ ಮೂಡಿಸಿರುವ ಸಿದ್ಧಾರೂಢ ಮಠವು ಮನುಕುಲ ಒಂದಾಬೇಕು ಎಂಬ ಸಂದೇಶ ನೀಡುತ್ತ ರಾಜ್ಯ-ದೇಶದಲ್ಲಿ ಪ್ರಖ್ಯಾತಿ ಪಡೆದಿದೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್ ಹೇಳಿದರು.

ಸದ್ಗುರು ಶ್ರೀ ಸಿದ್ಧಾರೂಢರ 190 ನೇ ಜಯಂತ್ಯುತ್ಸವ ಹಾಗೂ ತಾವು ಜೀವಂತವಿದ್ದಾಗಲೇ ಬರೆಯಿಸಿದ ‘ಶ್ರೀ ಸಿದ್ಧಾರೂಢ’ ಕಥಾಮೃತ ಗ್ರಂಥದ ಶತಮಾನೋತ್ಸವ ನಿಮಿತ್ತ ರಾಜ್ಯಾದ್ಯಂತ ಸಂಚರಿಸುತ್ತಿರುವ ‘ಜಗದ್ಗುರು ಶ್ರೀ ಸಿದ್ಧಾರೂಢ ಜ್ಯೋತಿ ರಥ ಯಾತ್ರೆ’ ನಗರದ ತೋಂಟದಾರ್ಯ ಮಠದಲ್ಲಿ ಆಗಮಿಸಿದ ಸಂದರ್ಭದಲ್ಲಿ ಸ್ವಾಗತಿಸಿ ಅವರು ಮಾತನಾಡಿದರು.

ಸಿದ್ಧಾರೂಢರ ಜನ್ಮಸ್ಥಳ ಬೀದರ ಜಿಲ್ಲೆಯ ಬಾಲ್ಕಿ ತಾಲೂಕಿನ ‘ಚಳಕಾಪೂರ’ದಿಂದ ಆರಂಭವಾಗಿರುವ ‘ಜಗದ್ಗುರು ಶ್ರೀ ಸಿದ್ಧಾರೂಢ ಜ್ಯೋತಿ ರಥ ಯಾತ್ರೆ’ಯು ಗದಗ ನಗರದ ತೋಂಟದಾರ್ಯ ಮಠಕ್ಕೆ ಆಗಮಿಸಿತು. ನಂತರ ತೋಂಟದಾರ್ಯ ಮಠದಿಂದ ಆರಂಭವಾದ ಜಗದ್ಗುರು ಶ್ರೀ ಸಿದ್ಧಾರೂಢ ಜ್ಯೋತಿ ರಥ ಯಾತ್ರೆ’ಯು ಕೆ.ಸಿ. ರಾಣಿ ರಸ್ತೆಯ ಮೂಲಕ ವೀರೇಶ್ವರ ಪುಣ್ಯಾಶ್ರಮ, ಅಲ್ಲಿಂದ ಭೂಮರಡ್ಡಿ ವೃತ್ತ, ಕೆ.ಎಚ್. ಪಾಟೀಲ ವೃತ್ತ, ಬಸವೇಶ್ವರ ವೃತ್ತ ಕಳಸಾಪೂರ ರಸ್ತೆ ಮೂಲಕ ಶ್ರೀ ಜಗದ್ಗುರು ಶಿವಾನಂದ ಮಠ ತಲುಪಿತು.

Edited By : Nagaraj Tulugeri
Kshetra Samachara

Kshetra Samachara

05/02/2025 08:34 pm

Cinque Terre

2 K

Cinque Terre

0

ಸಂಬಂಧಿತ ಸುದ್ದಿ