ಗದಗ: ಸಚಿವ ಎಚ್.ಕೆ. ಪಾಟೀಲರಿಗೆ ಮುಖ್ಯಮಂತ್ರಿ ಯೋಗ ಕೂಡಿ ಬರಲಿ ಅಂತ ಚಿತ್ರದುರ್ಗ ಭೋವಿ ಗುರುಪೀಠ ಸಂಸ್ಥಾನ ಮಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದ್ದಾರೆ. ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ನಡೆದ 852ನೇ ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಸ್ವಾಗತ ಕೋರುವ ವೇಳೆ ಮಾತನಾಡಿದರು.
ಸಚಿವ ಎಚ್.ಕೆ ಪಾಟೀಲರಿಗೆ ಸಿಎಂ ಯೋಗ ಇತ್ತು ಎಂದರು. ಎಚ್.ಕೆ ಪಾಟೀಲರು ಎರಡು-ಮೂರು ಬಾರಿ ಸಿಎಂ ಆಗಿರುತ್ತಿದ್ದರು. ಒಮ್ಮೆ ಎಸ್.ಎಂ ಕೃಷ್ಣ ಆದ್ಮೇಲೆ ಸಿಎಂ ಗಾಗಿ ಹೆಸರು ಓಡಿದ್ದು ಎಚ್.ಕೆ. ಪಾಟೀಲರದ್ದೇ. ತಡವಾಗಿಯಾದ್ರೂ ಎಚ್.ಕೆ ಪಾಟೀಲರಿಗೆ ಸಿಎಂ ಯೋಗ ಕೂಡಿ ಬರಲಿ ಅಂತ ಸ್ವಾಮೀಜಿ ಶುಭ ಹಾರೈಸಿದರು.
ಸದ್ಯ ಅಧಿಕಾರ ಹಂಚಿಕೆ ಚರ್ಚೆ ಮಧ್ಯೆ ಎಚ್.ಕೆ. ಪಾಟೀಲರ ಹೆಸರನ್ನು ಭೋವಿ ಪೀಠದ ಸ್ವಾಮೀಜಿ ಹರಿಬಿಟ್ಟಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಕಾರ್ಯಕ್ರಮದಲ್ಲಿ ಭೋವಿ ಗುರುಪೀಠ ಚಿತ್ರದುರ್ಗ ಮಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಸಾಣೆಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಶಾಸಕ ಜಿ.ಎಸ್. ಪಾಟೀಲ, ಭೋವಿ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ರವಿಕುಮಾರ್ ಎಸ್., ಮಾಜಿ ಶಾಸಕ ಡಿ.ಆರ್. ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಬರ್ಚಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
PublicNext
02/02/2025 09:09 pm