ಗದಗ: ಕೇಂದ್ರ ಸರ್ಕಾರದ ಬಜೆಟ್ ಕರ್ನಾಟಕಕ್ಕೆ ತುಂಬಾ ನಿರಾಸೆ ತಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೇಂದ್ರ ಬಜೆಟ್ ಬಿಹಾರ ಚುನಾವಣೆಯ ಘೋಷಣೆ ಪತ್ರ ಆಗಿದೆ ಎಂದು ಆರೋಪಿಸಿದರು. ಫೆಡರಲ್ ವ್ಯವಸ್ಥೆಯಲ್ಲಿ ನಮ್ಮ ವಿಶ್ವಾಸ ಕಮರುವ ರೀತಿಯಲ್ಲಿ ಬಜೆಟ್ ಬಂದಿದೆ. ನಮ್ಮ ಕರ್ನಾಟಕ ರಾಜ್ಯಕ್ಕೆ ಕೇಂದ್ರದ ಪಾಲು ಎಷ್ಟು? ನಾವು ಟ್ಯಾಕ್ಸ್ ಎಷ್ಟು ಕೊಡ್ತೀವಿ. ವಿಧಾನಸಭೆ, ಪರಿಷತ್ ನಲ್ಲಿ ಠರಾವ್ ಮಾಡಿದ್ರೂ ಏನು ಪರಿಣಾಮವೇ ಇಲ್ಲ. ದಕ್ಷಿಣ ಭಾರತಕ್ಕೆ ಭಾರಿ ಅನ್ಯಾಯದ ಬಜೆಟ್ ಇದಾಗಿದೆ.
ಭದ್ರಾ ಯೋಜನೆಗೆ ಹೆಚ್ಚು ಹಣ ಬಿಡುಗಡೆ, ಕೃಷ್ಣಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆಯನ್ನಾಗಿ ಮಾಡ್ತಾರೆ ಅನ್ನುವ ಮಾತು ಹುಸಿಯಾಗಿದೆ. ಒಟ್ಟಿನಲ್ಲಿ ಕರ್ನಾಟಕಕ್ಕೆ ಕರಾಳವಾದ ಬಜೆಟ್ ಇದಾಗಿದೆ ಎಂದರು. ಸಿಎಂ ಚಿಕಿತ್ಸೆಗೆ ಒಳಗಾಗಿದ್ದು, ಸಿದ್ದರಾಮಯ್ಯ ಅವರು ಎರಡು ದಿನ ಕಾರ್ಯಕ್ರಮ ರದ್ದು ಮಾಡಿದ್ದಾರೆ. ಮೊಣಕಾಲು ನೋವು ಈ ಹಿಂದೆ ಇತ್ತು. ಅದು ಈಗ ಹೆಚ್ಚಾಗಿದೆ. ಅವರಿಗೆ ಎರಡು ದಿನ ವಿಶ್ರಾಂತಿ ಬಗ್ಗೆ ವೈದ್ಯರು ಹೇಳಿದ್ದಾರೆ. ಬಹುಬೇಗ ಆರಾಮವಾಗಿ ತಮ್ಮ ಕರ್ತವ್ಯದ ಮೇಲೆ ಹಾಜರಾಗುತ್ತಾರೆ ಎಂದರು.
PublicNext
02/02/2025 08:59 pm