ಗದಗ : ದೌರ್ಜನ್ಯಮಯ ವಸೂಲಾತಿ ಆಗಲಾರದು. ಸಾಲಗಾರರಿಗೆ ರಕ್ಷಣೆ ಕೊಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಸೂದೆ ಸಿದ್ದಪಡಿಸಿದೆ. ಹೊಸ ಕಾನೂನುಗಳನ್ನು ಮಾಡಲು ನಿರ್ಣಯಿಸಿದೆ ಅಂತ ಕಾನೂನು ಸಚಿವ ಎಚ್.ಕೆ ಪಾಟೀಲ ಹೇಳಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಮೈಕ್ರೋಫೈನಾನ್ಸ್ ಹಾಗೂ ಬಡ್ಡಿದಂಧೆಕೋರರು ಅಮಾನುಷವಾಗಿ ವಸೂಲಿ ಮಾಡ್ತಿದ್ದಾರೆ. ಸಾಲಗಾರರಿಗೆ ಬಾರಿ ಕಿರುಕುಳ ಕೊಡ್ತಿದ್ದಾರೆ. ದೌರ್ಜನ್ಯಮಯ ವಸೂಲಾತಿ ಆಗಲಾರದು. ಸಾಲಗಾರರಿಗೆ ರಕ್ಷಣೆ ಕೊಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಸೂದೆ ಸಿದ್ದ ಪಡಿಸಿದೆ. ಹೊಸ ಕಾನೂನುಗಳನ್ನು ಮಾಡಲು ನಿರ್ಣಯಿಸಿದೆ. ಸುಗ್ರೀವಾಜ್ಞೆ ಮಾಡಲು ಸೂಕ್ತ ಮಸೂದೆ ಪೂರ್ಣಗೊಂಡು ಸಿಎಂ ಬಳಿ ಹೋಗಿದೆ. ರಾಜ್ಯಪಾಲರಿಗೆ ಬಹುಬೇಗ ತಲುಪಲಿದೆ. ಶೀಘ್ರದಲ್ಲೇ ಅಕ್ರಮಕ್ಕೆ ಮೂಗುದಾರ ಹಾಕುವುದಾಗಿ ಹೇಳಿದರು.
PublicNext
02/02/2025 08:49 pm