", "articleSection": "Crime,Law and Order,Nature,News,Public News", "image": { "@type": "ImageObject", "url": "https://prod.cdn.publicnext.com/s3fs-public/421698-1738760026-V9~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಗದಗ: ಜಾನುವಾರುಗಳಿಗಾಗಿ ವರ್ಷಾನುಗಟ್ಟಲೆಯಿಂದ ಸಂಗ್ರಹಿಸಿಟ್ಟಿದ್ದ ಇಪ್ಪತ್ತಕ್ಕೂ ಹೆಚ್ಚು ಬಣವೆಗಳು ಆಕಸ್ಮಿಕ ಬೆಂಕಿಗೆ ಸುಟ್ಟು ಕರಕಲಾಗಿರುವ ಘಟನ...Read more" } ", "keywords": ",Gadag,Crime,Law-and-Order,Nature,News,Public-News", "url": "https://publicnext.com/node" }
ಗದಗ: ಜಾನುವಾರುಗಳಿಗಾಗಿ ವರ್ಷಾನುಗಟ್ಟಲೆಯಿಂದ ಸಂಗ್ರಹಿಸಿಟ್ಟಿದ್ದ ಇಪ್ಪತ್ತಕ್ಕೂ ಹೆಚ್ಚು ಬಣವೆಗಳು ಆಕಸ್ಮಿಕ ಬೆಂಕಿಗೆ ಸುಟ್ಟು ಕರಕಲಾಗಿರುವ ಘಟನೆ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಚವಡಾಳ ಗ್ರಾಮದಲ್ಲಿ ನಡೆದಿದೆ.
20ಕ್ಕೂ ಹೆಚ್ಚು ಬಣವೆಗಳನ್ನ 15 ಕ್ಕೂ ಹೆಚ್ಚು ರೈತರು ವರ್ಷಾನುಗಟ್ಟಲೆ ಸಂಗ್ರಹಿಸಿಟ್ಟಿದ್ದರು. ಆದರೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡಿದ್ದರಿಂದ ಗೋವಿನ ಜೋಳ, ಶೇಂಗಾ ಹೊಟ್ಟಿನ ಬಣವೆಗಳು ಇದೀಗ ಸುಟ್ಟು ಕರಕಲಾಗಿವೆ.
ಜಾನುವಾರುಗಳಿಗೆಂದು ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ಮೌಲ್ಯದ ಹೊಟ್ಟು ಮೇವು ಕಣ್ಣೆದುರೇ ಹಾನಿಯಾಗಿದ್ದಕ್ಕೆ ರೈತರು ಕಂಗಾಲಾಗಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಶಿರಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
PublicNext
05/02/2025 06:23 pm