ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಕಿಯ ಕೆನ್ನಾಲಿಗೆಯಲ್ಲಿ ಕಪ್ಪತ್ತಗುಡ್ಡ : ಕಿಡಿಗೇಡಿಗಳ ಕೃತ್ಯಕ್ಕೆ ಸಸ್ಯ ಸಂಪತ್ತು ಸುಟ್ಟು ಭಸ್ಮ

ಗದಗ : ಅದು ಉತ್ತರ ಕರ್ನಾಟಕದ ಸಹ್ಯಾದ್ರಿ. ಅಪಾರ ಆಯುರ್ವೇದ ಔಷಧಿ ಸಸ್ಯಗಳ ತಾಣ.

ಆದ್ರೆ ಹಸಿರು ಕಾಶಿಗೆ ಕಂಟಕ ಎದುರಾಗಿದೆ. ಈಗಾಗಲೇ ಗಣಿ ಹಾಗೂ ಭೂಗಳ್ಳರಿಂದ ನಶಿಸಿ ಹೋಗಿರೋ ಗುಡ್ಡಕ್ಕೆ ಬೆಂಕಿ ಆಪತ್ತು ತಂದಿದೆ. ಯಾರೋ ಕಿಡಿಗೇಡಿಗಳು ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡೋಣಿ, ಡೋಣಿ ತಾಂಡಾ ಬಳಿಯ ಕಪ್ಪತ್ತಗುಡ್ಡಕ್ಕೆ ಬೆಂಕಿ ಹಚ್ಚಿದರಿಂದ ಅಪಾರ ಪ್ರಮಾಣದಲ್ಲಿ ಸಸ್ಯ ಸಂಪತ್ತು ಸುಟ್ಟು ಭಸ್ಮವಾಗಿದೆ.

ಕಿಡಿಗೇಡಿಗಳ ಕೃತ್ಯಕ್ಕೆ ಕಪ್ಪತ್ತಗುಡ್ಡ ಅಕ್ಷರಶಃ ಕಾದ ಕಬ್ಬಿಣವಾಗಿದೆ. ಮುಂಡರಗಿ RFO ಮಂಜುನಾಥ ಮೇಗಲಮನಿ ನೇತೃತ್ವದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.

ಕಪ್ಪತ್ತಗುಡ್ಡದಲ್ಲಿ ಸುಮಾರು 70 ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿಗಳು ಪ್ರಾಣದ ಹಂಗು ತೊರೆದು ಮಂಗಳವಾರ ಮಧ್ಯಾಹ್ನದಿಂದ ಮಧ್ಯರಾತ್ರಿವರೆಗೂ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.

Edited By : Suman K
Kshetra Samachara

Kshetra Samachara

05/02/2025 12:21 pm

Cinque Terre

2.74 K

Cinque Terre

0

ಸಂಬಂಧಿತ ಸುದ್ದಿ