", "articleSection": "Infrastructure,Cultural Activity", "image": { "@type": "ImageObject", "url": "https://prod.cdn.publicnext.com/s3fs-public/378325-1738759833-9.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Vishwanath" }, "editor": { "@type": "Person", "name": "somashekar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಂಗಳೂರು: ರಸ್ತೆಯುದ್ದಕ್ಕೂ ಜನವೋ ಜನ. ಅಲ್ಲಿದ್ದವರೆಲ್ಲಾ ರಂಗುರಂಗಿನ ಬಣ್ಣಗಳನ್ನು ಹಚ್ಚಿಸಿಕೊಂಡು ಸಂಭ್ರಮಿಸುತ್ತಿದ್ದರು. ಟ್ಯಾಂಕರ್‌ನಲ್ಲಿಯೇ ...Read more" } ", "keywords": "Mangaluru, Colorful Yakshagana, Youth Festival, Veera Venkatesha Okuli, Cultural Event, Karnataka News, Mangalore News, Yakshagana Performance, Traditional Art Form.,Udupi,Mangalore,Infrastructure,Cultural-Activity", "url": "https://publicnext.com/node" } ಮಂಗಳೂರು: ರಂಗುರಂಗಿನ ಬಣ್ಣದೋಕುಳಿಯಲ್ಲಿ ಮಿಂದೆದ್ದ ಯುವಜನ- ಇಂದು ವೀರ ವೆಂಕಟೇಶನ ಓಕುಳಿ ವಿಶೇಷ ದಿನ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ರಂಗುರಂಗಿನ ಬಣ್ಣದೋಕುಳಿಯಲ್ಲಿ ಮಿಂದೆದ್ದ ಯುವಜನ- ಇಂದು ವೀರ ವೆಂಕಟೇಶನ ಓಕುಳಿ ವಿಶೇಷ ದಿನ

ಮಂಗಳೂರು: ರಸ್ತೆಯುದ್ದಕ್ಕೂ ಜನವೋ ಜನ. ಅಲ್ಲಿದ್ದವರೆಲ್ಲಾ ರಂಗುರಂಗಿನ ಬಣ್ಣಗಳನ್ನು ಹಚ್ಚಿಸಿಕೊಂಡು ಸಂಭ್ರಮಿಸುತ್ತಿದ್ದರು. ಟ್ಯಾಂಕರ್‌ನಲ್ಲಿಯೇ ನೀರು ಹಾಯಿಸುತ್ತಿದ್ದರೆ ಅಲ್ಲಿದ್ದವರು ನೀರಾಟವಾಡಿ ಹುಚ್ಚೆದ್ದು ಕುಣಿಯುತ್ತಿದ್ದರು. ಪುಟಾಣಿಗಳು ಬಣ್ಣಗಳ ನೀರನ್ನು ಒಬ್ಬರಿಗೊಬ್ಬರು ಎರಚಾಡಿ ಖುಷಿ ಪಡುತ್ತಿದ್ದರು‌. ಯುವಕ- ಯುವತಿಯರು ಸಂಭ್ರಮದಲ್ಲಿ ತೇಲಾಡುತ್ತಿದ್ದರು.

ಹೌದು... ಇದು ಇಂದಿನ ಮಂಗಳೂರಿನ ಶ್ರೀ ವೆಂಕಟರಮಣ ದೇವಾಲಯದ ರಥಬೀದಿಯ ದೃಶ್ಯ.‌ ಶ್ರೀ ವೀರ ವೆಂಕಟರಮಣ ದೇವರ 'ಕೊಡಿಯಾಲ ತೇರಿ'ನ ಅಂಗವಾಗಿ ಅವಭ್ರತ (ಓಕುಳಿ) ಮಹೋತ್ಸವ ಬುಧವಾರ ಸಂಭ್ರಮದಿಂದ ನಡೆಯಿತು. ಆಬಾಲ ವೃದ್ಧರಾದಿಯಾಗಿ ಸಮಾಜದ ಸಾವಿರಾರು ಮಂದಿ ಭಕ್ತರು ಈ ಅವಭ್ರತೋತ್ಸವದಲ್ಲಿ ಪಾಲ್ಗೊಂಡಿದ್ದರು.

ಸಮಾಜದ ಪುರುಷರು, ಮಹಿಳೆಯರು, ಮಕ್ಕಳು ಅವಭ್ರತ ಮಹೋತ್ಸವದಲ್ಲಿ ರಂಗುರಂಗಿನ ಬಣ್ಣದ ನೀರಿನಲ್ಲಿ ಆಟವಾಡುತ್ತಿದ್ದರು. ನಾಸಿಕ್ ಬ್ಯಾಂಡ್ ಲಯಕ್ಕೆ ತಕ್ಕಂತೆ ಟ್ಯಾಂಕರ್‌ನಲ್ಲಿ ಹಾಯಿಸುತ್ತಿದ್ದ ನೀರಿನಲ್ಲಿ ಯುವಜನತೆ ಹುಚ್ಚೆದ್ದು ಕುಣಿಯಿತು‌. ಒಬ್ಬರಿಗೊಬ್ಬರು ಬಣ್ಣ ಹಚ್ಚಿ ಎಲ್ಲರೂ ರಂಗುರಂಗಾಗಿ ಕಾಣುತ್ತಿದ್ದರು. ನೆರೆದಿದ್ದವರು ಈ ನೀರಾಟವನ್ನು ಕಂಡು ಸಂಭ್ರಮಪಟ್ಟರು.

Edited By : Somashekar
Kshetra Samachara

Kshetra Samachara

05/02/2025 06:20 pm

Cinque Terre

2.51 K

Cinque Terre

0

ಸಂಬಂಧಿತ ಸುದ್ದಿ