", "articleSection": "Cultural Activity", "image": { "@type": "ImageObject", "url": "https://prod.cdn.publicnext.com/s3fs-public/11357220250205053332filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Rahim Ujire Udupi" }, "editor": { "@type": "Person", "name": "8971147028" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಉಡುಪಿ: ಕಥೊಲಿಕ್ ಧರ್ಮಪ್ರಾಂತ್ಯ ಉಡುಪಿ ಇದರ ಧರ್ಮಾಧ್ಯಕ್ಷ ಅತೀ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಅವರ 75 ವರ್ಷಗಳ ಆಚರಣೆಯ ಅಮೃತ ಮಹೋತ್ಸವ ಹಾಗೂ ಧ...Read more" } ", "keywords": "Node,Udupi,Cultural-Activity Udupi Bishop, Most Rev. Dr. Gerald Isaac Lobo, Silver Jubilee, Episcopal Ordination, Catholic Church, Udupi Diocese, Karnataka News, Christian Community, Religious Celebrations.,Cultural-Activity", "url": "https://publicnext.com/node" } ಉಡುಪಿ ಬಿಷಪ್ ಅತೀ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಅಮೃತ ಮಹೋತ್ಸವ - ಧರ್ಮಾಧ್ಯಕ್ಷ ದೀಕ್ಷೆಯ ಬೆಳ್ಳಿ ಹಬ್ಬ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ ಬಿಷಪ್ ಅತೀ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಅಮೃತ ಮಹೋತ್ಸವ - ಧರ್ಮಾಧ್ಯಕ್ಷ ದೀಕ್ಷೆಯ ಬೆಳ್ಳಿ ಹಬ್ಬ

ಉಡುಪಿ: ಕಥೊಲಿಕ್ ಧರ್ಮಪ್ರಾಂತ್ಯ ಉಡುಪಿ ಇದರ ಧರ್ಮಾಧ್ಯಕ್ಷ ಅತೀ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಅವರ 75 ವರ್ಷಗಳ ಆಚರಣೆಯ ಅಮೃತ ಮಹೋತ್ಸವ ಹಾಗೂ ಧರ್ಮಾಧ್ಯಕ್ಷ ದೀಕ್ಷೆಯ 25 ವರ್ಷಗಳ ಬೆಳ್ಳಿ ಹಬ್ಬದ ಮಹೋತ್ಸವವನ್ನು ಫೆಬ್ರವರಿ 9ರಂದು ಕಲ್ಯಾಣಪುರ ಮಿಲಾಗ್ರಿಸ್‌ ಕ್ಯಾಥೆಡ್ರಲ್‌ನ ತೆರೆದ ಮೈದಾನದಲ್ಲಿ ಆಯೋಜಿಸಲಾಗಿದೆ.

ಸಂಜೆ 4 ಗಂಟೆಗೆ ಕೃತಜ್ಞತಾ ಬಲಿಪೂಜೆ ಹಾಗೂ ಸಾರ್ವಜನಿಕ ಸನ್ಮಾನ ಸಮಾರಂಭ ಜರಗಲಿದ್ದು ಜಗದ್ಗುರು ಪೋಪ್‌ ಫ್ರಾನ್ಸಿಸ್ ಅವರ ಭಾರತ ಮತ್ತು ನೇಪಾಳದ ರಾಯಭಾರಿ ಅತೀ ವಂ.ಡಾ.ಲಿಯೊಪೊಲೊ ಗಿರೆಲ್ಲಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ರಾಜ್ಯ ಹಾಗೂ ದೇಶದ ಸುಮಾರು 18 ಮಂದಿ ಧರ್ಮಾಧ್ಯಕ್ಷರುಗಳು, 200ಕ್ಕೂ ಅಧಿಕ ಧರ್ಮಗುರುಗಳು ಹಾಗೂ 4000 ಭಕ್ತಾದಿಗಳು ಭಾಗವಹಿಸಲಿದ್ದಾರೆ.

1949 ನವೆಂಬರ್ 12ರಂದು ಬಂಟ್ವಾಳ ತಾಲೂಕಿನ ಅಗ್ರಾರ್‌ನಲ್ಲಿ ಜನಿಸಿದ ಬಿಷಲ್ ಜೆರಾಲ್ಡ್ ಲೋಬೊ ಅವರ ಧಾರ್ಮಿಕ ಜೀವನ 15ನೇ ವಯಸ್ಸಿಗೆ ಆರಂಭವಾಯಿತು. 1977ರಲ್ಲಿ ಅಂದಿನ ಮಂಗಳೂರು ಬಿಷಪ್ ದಿ. ಅತಿ ವಂ.ಡಾ.ಬೆಸಿಲ್ ಎಸ್ ಡಿಸೋಜರಿಂದ ಧಾರ್ಮಿಕ ದೀಕ್ಷೆಯನ್ನು ಸ್ವೀಕರಿಸಿದರು. 2000ದಲ್ಲಿ ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾಗಿ ಅಭಿಷಿಕ್ತರಾಗಿ ಧಾರ್ಮಿಕ ಹಾಗೂ ಸಾಮಾಜಿಕ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡುಪಾಗಿಸಿದರು. 2012ರಲ್ಲಿ ನೂತನವಾಗಿ ಘೋಷಣೆಯಾದ ಉಡುಪಿ ಧರ್ಮಪ್ರಾಂತ್ಯದ ಪ್ರಥಮ ಧರ್ಮಾಧ್ಯಕ್ಷರಾಗಿ ನೇಮಕ ಗೊಂಡರು.

Edited By : PublicNext Desk
Kshetra Samachara

Kshetra Samachara

05/02/2025 05:33 pm

Cinque Terre

236

Cinque Terre

0

ಸಂಬಂಧಿತ ಸುದ್ದಿ