ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ : ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರಗೊಂಡರೆ ನಿತ್ಯೋತ್ಸವ ಕಾಣಲಿದೆ ಬಾರಕೂರು

ಬ್ರಹ್ಮಾವರ : ಬಾರಕೂರು ಮಹಾತೋಭಾರ ಕೋಟೇಕೇರಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರದ ಕುರಿತು ದೈವಜ್ಞ ಪದ್ಮನಾಭ ಶರ್ಮ ಇವರಿಂದ 4 ದಿನಗಳ ಕಾಲ ನಡೆದ ಅಷ್ಠಮಂಗಲ ಪ್ರಶ್ನಾಚಿಂತನೆ ಸೋಮವಾರ ಮುಕ್ತಾಯಗೊಂಡಿತು.

ಋಷಿಮುನಿಗಳ ಕಾಲದಲ್ಲಿ ಪ್ರತಿಷ್ಠಾಪನೆಗೊಂಡ ಬಾರಕೂರು ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಇಲ್ಲಿನ ಅನೇಕ ದೇವಸ್ಥಾನಗಳು ಹೊಂದಿಕೊಂಡಿದೆ. ಇಲ್ಲಿಗೆ ಸಂಭಂದಿಸಿದ ನಾಲ್ಕು ಶಿವಾಲಯವನ್ನು ಒಂದೇ ದಿನ ಸಂದರ್ಶನ ಮತ್ತು ಪೂಜೆಸಲ್ಲಿಸಿದರೆ ಸಹಸ್ರ ಶಿವಸನ್ನಿಧಿಯನ್ನು ಕಂಡಭಾಗ್ಯ ಇದೆ ಎಂದು ಕಂಡುಬಂತು. ದೇವಸ್ಥಾನ ಜೀರ್ಣೋದ್ಧಾರ ಮೊದಲು ನಾನಾ ದೋಶ ಪರಿಹಾರ ಸೂಚಿಸಿದರು.

ಜೀಣೋದ್ಧಾರ ನಾಯಕತ್ವದ ಕುರಿತು ಮಾಡಲಾದ ಪ್ರಶ್ನಾಚಿಂತನೆಗೆ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಾರಕೂರು ಶಾಂತಾರಾಮ ಶೆಟ್ಟಿಯವರು ಬಾರಕೂರಿನವರಾದ ಧಾರವಾಡದ ಉದ್ಯಮಿ ವಿಠಲ್ ಹೆಗ್ಡೆ ಮತ್ತು ಸುಗ್ಗಿ ಸುಧಾಕರಶೆಟ್ಟಿಯವರ ಹೆಸರನ್ನು ಸೂಚಿಸಿದಾಗ ಸುಗ್ಗಿ ಸುಧಾಕರ ಶೆಟ್ಟಿಯವರಿಗೆ ಪ್ರಧಾನ ಸಾರಥ್ಯ ನೀಡಿದಲ್ಲಿ ಅತೀ ಶೀಘ್ರದಲ್ಲಿ ದೇವಸ್ಥಾನದ ಎಲ್ಲಾ ಪ್ರಗತಿಗೆ ಅನುಕೂಲವಾಗಲಿದೆ.

ದೇವಸ್ಥಾನದ ಆಡಳಿತ ಮೋಕ್ತೇಸರ ಮಂಜುನಾಥ್ ರಾವ್,ರಾಜವಂಶಸ್ಥ ಡಾ, ಆಕಾಶ್ ರಾಜ್ ಜೈನ್, ಸ್ಥಳಿಯ ರಾಜಧಾನಿ ರಾಜ ಯುತ್ ಕ್ಲಭ್ ಸದಸ್ಯರು, ಸ್ಥಳೀಯಎಲ್ಲಾ ದೇವಸ್ಥಾನ ಸಂಘ ಸಂಸ್ಥೆಯವರು ಗ್ರಾಮಸ್ಥರು ನೂರಾರು ಮಂದಿ ಉಪಸ್ಥಿತರಿದ್ದರು. ಪ್ರಶ್ನಾ ಚಿಂತನೆಯ ಸಮಯದಲ್ಲಿ ಹೊರ ರಾಜ್ಯದಲ್ಲಿರುವ ಅನೇಕರು ಭಕ್ತರು ದೇವಸ್ಥಾನಕ್ಕೆ ಬೇಟಿ ನೀಡಿ ಜೀರ್ಣೋದ್ಧಾರಕ್ಕೆ ಬೆಂಬಲಸೂಚಿಸಿದರು.

Edited By : Manjunath H D
Kshetra Samachara

Kshetra Samachara

04/02/2025 09:45 pm

Cinque Terre

3.15 K

Cinque Terre

0