", "articleSection": "Crime,Law and Order,Accident,News,Public News", "image": { "@type": "ImageObject", "url": "https://prod.cdn.publicnext.com/s3fs-public/421698-1738663844-V3~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Vishwanath" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಂಗಳೂರು: ಅತಿ ವೇಗದಿಂದ ಚಲಾಯಿಸಿಕೊಂಡು ಬಂದ ದ್ವಿಚಕ್ರ ವಾಹನವೊಂದು ಸಿಗ್ನಲ್ ಜಂಪ್ ಮಾಡಿ ಮುಂಭಾಗದಲ್ಲಿ ಬರುತ್ತಿದ್ದ ಬೈಕೊಂದಕ್ಕೆ ಡಿಕ್ಕಿಯಾದ ಘ...Read more" } ", "keywords": ",Udupi,Mangalore,Crime,Law-and-Order,Accident,News,Public-News", "url": "https://publicnext.com/node" }
ಮಂಗಳೂರು: ಅತಿ ವೇಗದಿಂದ ಚಲಾಯಿಸಿಕೊಂಡು ಬಂದ ದ್ವಿಚಕ್ರ ವಾಹನವೊಂದು ಸಿಗ್ನಲ್ ಜಂಪ್ ಮಾಡಿ ಮುಂಭಾಗದಲ್ಲಿ ಬರುತ್ತಿದ್ದ ಬೈಕೊಂದಕ್ಕೆ ಡಿಕ್ಕಿಯಾದ ಘಟನೆ ನಗರದ ಲಾಲ್‌ಬಾಗ್‌ನಲ್ಲಿ ನಡೆದಿದೆ.
ಮಹಮ್ಮದ್ ಅಮಾನ್ ಎಂಬ ಯುವಕ ಲೇಡಿಹಿಲ್ ಕಡೆಯಿಂದ ದ್ವಿಚಕ್ರ ವಾಹನ ಚಲಾಯಿಸಿಕೊಂಡು ಲಾಲ್‌ಬಾಗ್ ಕಡೆಗೆ ಬರುತ್ತಿದ್ದ. ಅಷ್ಟರಲ್ಲಿ ಕೆಎಸ್‌ಆರ್‌ಟಿಸಿ ಕಡೆಯಿಂದ ಬರುವ ವಾಹನಗಳಿಗೆ ಮೂವ್ ಆಗಲು ಗ್ರೀನ್ ಸಿಗ್ನಲ್ ಬಿದ್ದಿದ್ದು, ಅದರಂತೆ ಅತ್ತ ಕಡೆಯಿಂದ ಬರುವ ವಾಹನಗಳು ಲೇಡಿಹಿಲ್ ಕಡೆಗೆ ಮೂವ್ ಆಗಿದೆ. ಇತ್ತ ರೆಡ್ ಸಿಗ್ನಲ್ ಬಿದ್ದಿದ್ದರೂ ಅಮಾನ್ ತನ್ನ ದ್ವಿಚಕ್ರ ವಾಹನವನ್ನು ವೇಗವಾಗಿ ಚಲಾಯಿಸಿ ಸಿಗ್ನಲ್ ಜಂಪ್ ಮಾಡಿ ಮುಂಭಾಗದಲ್ಲಿ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ.
ಪರಿಣಾಮ ಎರಡೂ ದ್ವಿಚಕ್ರ ವಾಹನಗಳು ರಸ್ತೆಗೆ ಬಿದ್ದಿದ್ದು, ಸವಾರರಿಬ್ಬರೂ ಎಸೆಯಲ್ಪಟ್ಟಿದ್ದಾರೆ. ಅದೃಷ್ಟವಶಾತ್ ಇಬ್ಬರಿಗೂ ಯಾವುದೇ ಗಾಯಗಳಾಗಿಲ್ಲ. ಅಪಘಾತದ ಸಂಪೂರ್ಣ ದೃಶ್ಯ ಮೊಹಮ್ಮದ್ ಅಮಾನ್ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನದ ಹಿಂಭಾಗದಲ್ಲಿ ಬರುತ್ತಿದ್ದ ಕಾರೊಂದರ ಡ್ಯಾಶ್ ಬೋರ್ಡ್‌ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಎರಡೂ ಕಡೆಯವರು ರಾಜಿ ಸಂಧಾನ ಮಾಡಿಕೊಂಡಿದ್ದರಿಂದ ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ. ಆದರೂ ಮೊಹಮ್ಮದ್ ಅಮಾನ್ ಮೇಲೆ ಪಾಂಡೇಶ್ವರ ಸಂಚಾರಿ ಠಾಣಾ ಪೊಲೀಸರು ಸಿಗ್ನಲ್ ಜಂಪ್ ಕೇಸ್ ದಾಖಲಿಸಿದ್ದಾರೆ.
PublicNext
04/02/2025 03:40 pm