ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಕೆ.ಎಸ್ ಆರ್ ಟಿ ಸಿ ಬಸ್ ನಿಲುಗಡೆಗೆ ನಾಮಫಲಕ ಅಳವಡಿಕೆ - ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ

ಮುಲ್ಕಿ: ಬಪ್ಪನಾಡು ಲಯನ್ಸ್ ಕ್ಲಬ್ ಇನ್ಸ್ಪೈರ್ ವತಿಯಿಂದ ಮುಲ್ಕಿ ನಗರ ಪಂಚಾಯತ್ ಸಹಕಾರದೊಂದಿಗೆ ರಾಷ್ಟ್ರೀಯ ಹೆದ್ದಾರಿ ಮುಲ್ಕಿ ಲಯನ್ಸ್ ಕ್ಲಬ್ ಕಟ್ಟಡದ ಬಳಿ ಸರಕಾರಿ ಬಸ್ ನಿಲುಗಡೆಗೆ ನೂತನ ನಾಮಫಲಕ ಅಳವಡಿಸಲಾಯಿತು.

ಈ ಸಂದರ್ಭ ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸತೀಶ್ ಅಂಚನ್ ಮಾತನಾಡಿ ರಾಷ್ಟ್ರೀಯ ಹೆದ್ದಾರಿ ಮುಲ್ಕಿ ಬಸ್ ನಿಲ್ದಾಣದ ಜಂಕ್ಷನ್ ಬಳಿ ಎಲ್ಲೆಂದರಲ್ಲಿ ಸರಕಾರಿ ಬಸ್ ನಿಲುಗಡೆ ಮಾಡಿ ಪ್ರಯಾಣಿಕರಿಗೆ ಹಾಗೂ ಇತರ ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದ್ದು ಇದಕ್ಕಾಗಿ ಮುಲ್ಕಿ ಲಯನ್ಸ್ ಕ್ಲಬ್ ಕಟ್ಟಡದ ಬಳಿಯ ಹೆದ್ದಾರಿ ಬಳಿ ಬಸ್ ನಿಲುಗಡೆಗೆ ನಾಮಫಲಕ ಅಳವಡಿಸಲಾಗಿದೆ.

ಕೆ ಎಸ್ ಆರ್ ಟಿ ಸಿ ಬಸ್ ಚಾಲಕರು ನಾಮ ಫಲಕ ಅಳವಡಿಸಿದ ಸೂಕ್ತ ಸ್ಥಳದಲ್ಲಿ ಬಸ್ ನಿಲುಗಡೆ ಮಾಡಿ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಲು ಮನವಿ ಮಾಡಿದರು.

ಈ ಸಂದರ್ಭ ಮುಲ್ಕಿನ.ಪಂ.ಸದಸ್ಯ ಭೀಮಾ ಶಂಕರ್, ಬಪ್ಪನಾಡು ಲಯನ್ಸ್ ಕ್ಲಬ್ ಸ್ಥಾಪಕ ಅಧ್ಯಕ್ಷ ವೆಂಕಟೇಶ ಹೆಬ್ಬಾರ್, ಅಧ್ಯಕ್ಷ ಶಿವಪ್ರಸಾದ್, ಸದಸ್ಯರಾದ ಸುಧೀರ್ ಬಾಳಿಗ, ವಿಶ್ವನಾಥ ಶೆಣೈ, ಪ್ರತಿಬಾ ಹೆಬ್ಬಾರ್, ಹಳೆಯಂಗಡಿ ಗ್ರಾಪಂ ಸದಸ್ಯ ಧನರಾಜ ಸಸಿಹಿತ್ಲು ಮುಲ್ಕಿ ನ.ಪಂ. ಸಿಬ್ಬಂದಿ ಕಿಶೋರ್ ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

05/02/2025 07:31 am

Cinque Terre

930

Cinque Terre

0

ಸಂಬಂಧಿತ ಸುದ್ದಿ