", "articleSection": "Crime,Law and Order,News,Public News", "image": { "@type": "ImageObject", "url": "https://prod.cdn.publicnext.com/s3fs-public/421698-1738678667-V10~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Vishwanath" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಂಗಳೂರು: ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಕೋಟೆಕಾರ್ ಬ್ಯಾಂಕ್ ದರೋಡೆ ಪ್ರಕರಣ ನಡೆದ ಬಳಿಕವೂ ಮಂಗಳೂರಿನ ಎಟಿಎಂ, ಬ್ಯಾಂಕ್‌ಗಳ ಭದ್ರತೆಯ ವಿಚಾರದಲ್...Read more" } ", "keywords": "Mangalore bank robbery, Mangalore bank heist, Bank robbery in Mangalore, Mangalore bank theft, Karnataka bank robbery, Mangalore police investigation, Bank security in Mangalore, Mangalore bank news, Robbery in Mangalore, Mangalore crime news, Bank robbery Karnataka, Mangalore city crime.,Udupi,Mangalore,Crime,Law-and-Order,News,Public-News", "url": "https://publicnext.com/node" }
ಮಂಗಳೂರು: ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಕೋಟೆಕಾರ್ ಬ್ಯಾಂಕ್ ದರೋಡೆ ಪ್ರಕರಣ ನಡೆದ ಬಳಿಕವೂ ಮಂಗಳೂರಿನ ಎಟಿಎಂ, ಬ್ಯಾಂಕ್‌ಗಳ ಭದ್ರತೆಯ ವಿಚಾರದಲ್ಲಿ ಇನ್ನೂ ಎಚ್ಚೆತ್ತಿಲ್ಲ ಎಂದು ಬ್ಯಾಂಕ್ ಆಡಳಿತ ವರ್ಗಕ್ಕೆ ಮಂಗಳೂರು ಖಾಕಿ ಬಿಸಿ ಮುಟ್ಟಿಸಿದೆ. ಬ್ಯಾಂಕ್ ಪ್ರಮುಖರ ಸಭೆ ಕರೆದ ಮಂಗಳೂರು ಪೊಲೀಸ್ ಕಮಿಷನರ್ ಭದ್ರತೆಯ ಬಗ್ಗೆ ಸರಿಯಾದ ವ್ಯವಸ್ಥೆ ಮಾಡದಿದ್ದಲ್ಲಿ ನೀವೇ ಜವಾಬ್ದಾರರು ಎಂದು ಎಚ್ಚರಿಕೆ ನೀಡಿದ್ದಾರೆ.
ಮಂಗಳೂರಿನ ಕೋಟೆಕಾರ್ ಬ್ಯಾಂಕ್ ರಾಬರಿ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಬೇಧಿಸಿದ್ದರು. ಈ ಘಟನೆಯಿಂದ ಪಾಠ ಕಲಿಯಬೇಕಾದ ಬ್ಯಾಂಕ್‌ಗಳು ಮಾತ್ರ ಇನ್ನೂ ನಿದ್ದೆಯಿಂದ ಎಚ್ಚೆತ್ತುಕೊಂಡಂತಿಲ್ಲ. ಇನ್ನೂ ಸಿಸಿ ಕ್ಯಾಮೆರಾ ಅಳವಡಿಸಿಲ್ಲ, ಅಗತ್ಯ ಭದ್ರತಾ ಸಿಬ್ಬಂದಿ ನೇಮಿಸಿಲ್ಲ. ಲಾಕರ್‌ಗಳ ಮೇಲೂ ನಿಗಾ ಇಲ್ಲ. ಆದ್ದರಿಂದ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರು ನಗರದ ಸಹಕಾರಿ ಬ್ಯಾಂಕ್, ಎಟಿಎಂ ಭಧ್ರತೆಯ ಕುರಿತು ಬ್ಯಾಂಕ್ ಅಧಿಕಾರಿಗಳ ಸಭೆ ಕರೆದು ಕ್ಲಾಸ್ ತೆಗೆದುಕೊಂಡಿದ್ದಾರೆ.
ಮಂಗಳೂರು ನಗರದಲ್ಲಿ 900ಕ್ಕೂ ಅಧಿಕ ಸಹಕಾರಿ ಬ್ಯಾಂಕ್, ಎಟಿಎಂಗಳಿವೆ. ಆದರೆ ಬಹುತೇಕ ಬ್ಯಾಂಕ್ ಗಳಲ್ಲಿ ಭದ್ರತಾ ಲೋಪ ಎದ್ದು ಕಾಣುತ್ತಿದೆ. ಆದ್ದರಿಂದ ಮೂರು ದಿನಗಳ ಕಾಲ ಬ್ಯಾಂಕ್ ಅಧಿಕಾರಿಗಳಿಗೆ ಪೊಲೀಸರು ಮಾಹಿತಿ ಕಾರ್ಯಗಾರ ನೀಡಿದ್ದಾರೆ. ಎರಡು ವಾರಕ್ಕೊಮ್ಮೆ ಪೊಲೀಸರೇ ಬ್ಯಾಂಕ್‌ಗಳಿಗೆ ತೆರಳಿ ತಪಾಸಣೆ ಮಾಡುತ್ತಿದ್ದಾರೆ. ಈ ವೇಳೆ ಬ್ಯಾಂಕ್‌ಗಳು ಜನರ ಹಣ, ಚಿನ್ನಗಳ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವುದು ಗಮನಕ್ಕೆ ಬಂದಿದೆ. ಇನ್ನೂ ನಿರ್ಲಕ್ಷ್ಯ ವಹಿಸಿದ್ದಲ್ಲಿ ಮುಂದಾಗುವ ಘಟನೆಗಳಿಗೆ ಬ್ಯಾಂಕ್‌ಗಳನ್ನೇ ನೇರ ಹೊಣೆ ಮಾಡಲಾಗುತ್ತದೆ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಎಚ್ಚರಿಕೆ ನೀಡಿದ್ದಾರೆ.
PublicNext
04/02/2025 07:47 pm