", "articleSection": "Crime,News", "image": { "@type": "ImageObject", "url": "https://prod.cdn.publicnext.com/s3fs-public/421698-1738675545-A5~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Rahim Ujire Udupi" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಉಡುಪಿ : ಉಡುಪಿ ಜಿಲ್ಲೆಯ ಮಲ್ಪೆ ಬಂದರಿನಲ್ಲಿ ಪ್ರತಿದಿನ ಎಂಬಂತೆ ಕಾರ್ಮಿಕರು ಸತ್ತು ಅನಾಥ ಶವವಾಗುತ್ತಿದ್ದಾರೆ. ಇದೀಗ ಬಂದರಿನಲ್ಲಿ ಮತ್ತೊಬ್ಬ ವ...Read more" } ", "keywords": ",Udupi,Crime,News", "url": "https://publicnext.com/node" }
ಉಡುಪಿ : ಉಡುಪಿ ಜಿಲ್ಲೆಯ ಮಲ್ಪೆ ಬಂದರಿನಲ್ಲಿ ಪ್ರತಿದಿನ ಎಂಬಂತೆ ಕಾರ್ಮಿಕರು ಸತ್ತು ಅನಾಥ ಶವವಾಗುತ್ತಿದ್ದಾರೆ. ಇದೀಗ ಬಂದರಿನಲ್ಲಿ ಮತ್ತೊಬ್ಬ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಬಂದರಿನ ಟಿ ಎಸ್ ಎಫ್ ಪಾರ್ಟಿ ಬಳಿ ಅಂದಾಜು 55 ವರ್ಷ ಪ್ರಾಯದ ವ್ಯಕ್ತಿಯೊಬ್ಬರು ಮಲಗಿದ ಸ್ಥಿತಿಯಲ್ಲೇ ಸಾವನಪ್ಪಿರುವ ಘಟನೆ ಮುಂಜಾನೆ ಸಂಭವಿಸಿದೆ.
ಕೆಲ ಸ್ಥಳೀಯರು ಮೃತಪಟ್ಟ ವ್ಯಕ್ತಿ ಶಿವಮೊಗ್ಗ ಮೂಲದವನಾಗಿರಬಹುದೆಂದು ಶಂಕಿಸಿದ್ದಾರೆ. ಈವರೆಗೆ ಈತನ ಬಗ್ಗೆ ನಿಖರವಾದ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ. ಮೃತದೇಹವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಈಶ್ವರ್ ಮಲ್ಪೆ ಆಂಬುಲೆನ್ಸ್ ಮೂಲಕ ಸಾಗಿಸಿದರು. ಮಲ್ಪೆ ಬಂದರನ್ನು ಸಾವಿರಾರು ಕಾರ್ಮಿಕರು ದುಡಿಮೆಯ ಕಾರಣಕ್ಕೆ ಆಶ್ರಯಿಸಿದ್ದಾರೆ. ರಾಜ್ಯದ ಮೂಲೆ ಮೂಲೆ ಮಾತ್ರವಲ್ಲದೆ ದೇಶದ ನಾನಾ ಭಾಗಗಳಿಂದ ಇಲ್ಲಿ ಬಂದು ದುಡಿಯುವ ಕಾರ್ಮಿಕರು, ಗುರುತುಪರಿಚಯವಿಲ್ಲದೆ ಸಾಯುತ್ತಿರುವುದು ದುರಂತವೆನಿಸಿದೆ.
Kshetra Samachara
04/02/2025 06:55 pm