ಬ್ರಹ್ಮಾವರ: ಬ್ರಹ್ಮಾವರ ತಾಲೂಕಿನಲ್ಲಿ 2 ವರ್ಷ ತಹಶೀಲ್ದಾರರಾಗಿ ಕಂದಾಯ ಇಲಾಖೆಯಲ್ಲಿ ಬಹಳಷ್ಟು ಜನೋಪಯೋಗಿ ಕಾರ್ಯ ಮಾಡಿ ಇದೀಗ ಮೂಡಿಗೆರೆಗೆ ವರ್ಗಾವಣೆಗೊಂಡ ತಹಶೀಲ್ದಾರ ರಾಜಶೇಖರ ಮೂರ್ತಿಯವರು ಭಾನುವಾರ ಬ್ರಹ್ಮಾವರ ಸಾಲಿಕೇರಿ ಹೊನ್ನಾಳ ರಸ್ತೆಯ ಬಳಿ ನೂಥನವಾಗಿ ನಿರ್ಮಾಣವಾದ ಶ್ರೀ ದುರ್ಗಾ ಪ್ಯಾರಾಡೈಸ್‌ನ ಉದ್ಘಾಟನಾ ಸಮಾರಂಭಕ್ಕೆ ಅತಿಥಿಯಾಗಿ ಆಗಮಿಸಿದ್ದರು.
ಕಂದಾಯ ಇಲಾಖೆಯಲ್ಲಿ ಅವರಿಂದ ನಾನಾ ಸೌಲಭ್ಯ ಪಡೆದ ಅಭಿಮಾನಿಗಳ ಪಡೆ ಅವರನ್ನು ಸುತ್ತುವರಿದು ಗೌರವ ಸೂಚಿಸಿದರೆ ಕಾರ್ಯಕ್ರಮದ ವ್ಯವಸ್ಥಾಪಕರು ನಿಕಟ ಪೂರ್ವತಹಶೀಲ್ದಾರರನ್ನು ಶ್ರೀದುರ್ಗಾಪ್ಯಾರಾಡೈಸ್‌ನ ಪ್ರವರ್ತಕರಾದ ಎಸ್ ನಾರಾಯಣ, ಶಕುಂತಲ ಕುಂದರ್ ಸನ್ಮಾನಿಸಿದರು.
ಕಾರ್ಯಕ್ರಮದ ಬಳಿಕ ಮಂಗಳೂರಿನ ಸಂಗೀತ ತಂಡವೊಂದು ನೀಡಿದ ಕಾರ್ಯಕ್ರಮವನ್ನು ಕೇಳಿ ಅವರ ತಂಡದೊಂದಿಗೆ ಡಾ. ರಾಜ್‌ಕುಮಾರ್ ನಟನೆಯ 'ಭಾಗ್ಯವಂತರು' ಚಿತ್ರದ 'ನನ್ನನಿನ್ನ ಮನವು ಸೇರಿತು' ಹಾಡನ್ನು ಹಾಡಿ ಸಾರ್ವಜನಿಕರು ಮತ್ತು ಸಂಗೀತ ತಂಡವು ಬೆರಗುಗೊಳಿಸುವಂತೆ ಹಾಡಿ ಅಧಿಕಾರಿಯಲ್ಲಿ ಸ್ಥುಪ್ತವಾಗಿದ್ದ ಕಲಾ ಪ್ರತಿಭೆಯನ್ನು ಹೊರಹೊಮ್ಮಿಸಿದರು.
ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, ಮಾಜಿ ಶಾಸಕ ಕೆ. ರಘುಪತಿ ಭಟ್, ಬ್ರಹ್ಮಾವರ ವ್ಯವಸಾಯ ಸೇವಾಸಹಕಾರಿ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಬಿರ್ತಿ, ಹಾರಾಡಿ ಗ್ರಾಮಪಂಚಾಯತಿ ಅಧ್ಯಕ್ಷೆ ಜಯಂತಿ ಪೂಜಾರಿ, ಕೆ.ಎಸ್. ಎಫ್. ಸಿ ಬ್ಯಾಂಕ್ ಉಡುಪಿ ಇದರ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಆರ್ ಪ್ರಸಾದ್, ಮಾಜಿ ಉಡುಪಿ ಜಿಲ್ಲಾಪಂಚಾಯತಿ ಅಧ್ಯಕ್ಷ ಬಿ.ಭುಜಂಗ ಶೆಟ್ಟಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ವಾರಂಬಳ್ಳಿ ಗ್ರಾಮಪಂಚಾಯತಿ ಅಧ್ಯಕ್ಷ ನಿತ್ಯಾನಂದ ಬಿ.ಆರ್. ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
PublicNext
04/02/2025 10:21 pm