", "articleSection": "Infrastructure,Government", "image": { "@type": "ImageObject", "url": "https://prod.cdn.publicnext.com/s3fs-public/405356-1738755606-kaa.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Rahim Ujire Udupi" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಉಡುಪಿ: ಹೋರಾಟ, ಪ್ರತಿಭಟನೆಗಳ ಬಳಿಕವೂ ಉಡುಪಿಯ ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಕಾಮಗಾರಿ ವಿಳಂಬ ಖಂಡಿಸಿ ಇ...Read more" } ", "keywords": "Udupi, Idrali Railway Overbridge, Construction Delay, Contracting Issues, Railway Development, Karnataka Infrastructure, Udupi News, Indian Railways, Overbridge Construction.,Mangalore,Infrastructure,Government", "url": "https://publicnext.com/node" }
ಉಡುಪಿ: ಹೋರಾಟ, ಪ್ರತಿಭಟನೆಗಳ ಬಳಿಕವೂ ಉಡುಪಿಯ ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಕಾಮಗಾರಿ ವಿಳಂಬ ಖಂಡಿಸಿ ಇಂದ್ರಾಳಿ ಸೇತುವೆ ಹೋರಾಟ ಸಮಿತಿ ವತಿಯಿಂದ ಎರಡು ತಿಂಗಳ ಹಿಂದೆ ಬೃಹತ್ ಪ್ರತಿಭಟನಾ ಸಭೆ ನಡೆದಿತ್ತು.
ಬಳಿಕ ಎಚ್ಚೆತ್ತುಕೊಂಡ ಸಂಸದರು ಮತ್ತು ಜಿಲ್ಲಾಡಳಿತ ಗುತ್ತಿಗೆದಾರರಿಗೆ ಗಡುವು ನೀಡಿತ್ತು. ಗುತ್ತಿಗೆದಾರರಿಂದ ಮುಚ್ಚಳಿಕೆಯನ್ನೂ ಬರೆಸಿಕೊಳ್ಳಲಾಗಿತ್ತು. ಹೀಗಿದ್ದರೂ ಕಾಮಗಾರಿ ಪ್ರಗತಿ ಕಾಣದೇ ಇರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಯನ್ನು ಚತುಷ್ಪಥಗೊಳಿಸದೇ ಕಾಮಗಾರಿಯನ್ನು ಬಹುತೇಕ ಸ್ಥಗಿತಗೊಳಿಸಿ ವರ್ಷಗಳೇ ಸಂದಿವೆ. ಇಲ್ಲಿಯ ರಸ್ತೆ ಅವ್ಯವಸ್ಥೆ ಸಾವು ನೋವಿಗೂ ಕಾರಣವಾಗುತ್ತಿವೆ. ದಿನನಿತ್ಯ ವಾಹನ ದಟ್ಟಣೆಯಿಂದ ಜನರು ಬಸವಳಿದಿದ್ದಾರೆ.
ಈ ಹಿಂದೆ ಇದ್ದ ಸಂಸದೆ ಶೋಭಾ ಕರಂದ್ಲಾಜೆಯವರು ಕ್ಷೇತ್ರ ಬಿಟ್ಟು ಬೇರೆಡೆ ಹೋಗಿದ್ದಾರೆ. ಈಗಿನ ಸಂಸದರು ಬಂದು ವರ್ಷ ಕಳೆಯಿತು.ಇನ್ನು ಮುಂದೆ ಸಮೂಬು ಕೇಳಿಕೊಂಡು ಸುಮ್ಮನಾಗುವುದಿಲ್ಲ ಎಂದು ಹೋರಾಟ ಸಮಿತಿ ಸದಸ್ಯ ಮತ್ತು ಸಾಮಾಜಿಕ ಕಾರ್ಯಕರ್ತ ಅನ್ಸಾರ್ ಅಹಮದ್ ಹೇಳಿದ್ದಾರೆ.
PublicNext
05/02/2025 05:10 pm